ನಿಧಿಗಾಗಿ ವ್ಯಾಸರಾಜ ವೃಂದಾವನವೇ ಧ್ವಂಸ


Team Udayavani, Jul 19, 2019, 5:23 AM IST

dwamsa

ಗಂಗಾವತಿ: ಕೊಪ್ಪಳ ಜಿಲ್ಲೆ ಆನೆಗೊಂದಿ ನವವೃಂದಾವನ ಗಡ್ಡಿಯಲ್ಲಿರುವ ಐದು ಶತಮಾನಗಳಷ್ಟು ಪುರಾತನ ವ್ಯಾಸರಾಜ(ರಾಯ)ರ ವೃಂದಾನವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ ನಿಧಿಗಾಗಿ ಶೋಧ ಮಾಡಿದ ಘಟನೆ ಬುಧವಾರ ರಾತ್ರಿ ಜರುಗಿದೆ. ಇದರಿಂದ ವಿಚಲಿತರಾದ ಸಾವಿರಾರು ಭಕ್ತರು ಸ್ಥಳಕ್ಕೆ ದೌಡಾಯಿಸಿ ನವವೃಂದಾವನ ಸ್ವಚ್ಛಗೊಳಿಸಿದರು. ಮಂತ್ರಾಲಯ ಮಠ, ಉತ್ತಾರಾದಿಮಠ ಹಾಗೂ ವ್ಯಾಸರಾಯರ ಮಠ ಸೇರಿ ಇತರೆ ಮಧ್ವಪರಂಪರೆ ಮಠಾಧೀಶರು ಮತ್ತು ಭಕ್ತರು ಖಂಡನೆ ವ್ಯಕ್ತಪಡಿಸಿದ್ದಾರೆ.

ನವವೃಂದಾವನ ಗಡ್ಡಿಯಲ್ಲಿ ಒಂಬತ್ತು ಯತಿಗಳ ವೃಂದಾವನಗಳಿದ್ದು, ಆಂಜನೇಯ ಸ್ವಾಮಿ ದೇವಾಲಯದ ಎದುರು ವ್ಯಾಸರಾಜರ ವೃಂದಾವನವಿತ್ತು. ಅದರ ಮುಂದಿನ ಕಲ್ಲಿನ ಮಂಟಪ ಹಾಗೂ ವೃಂದಾವನ ಮೇಲಿದ್ದ ಕಲ್ಲುಗಳನ್ನು ತೆರವುಗೊಳಿಸಿ ಸುಮಾರು 2-3 ಅಡಿ ನೆಲ ಅಗೆದು ನಿಧಿಗಾಗಿ ಶೋಧ ನಡೆಸಲಾಗಿದೆ. 480 ವರ್ಷಗಳ ಹಿಂದೆ ನಿರ್ಮಿಸಿದ್ದ ವೃಂದಾವನ ಹಾಗೂ ಕಲ್ಲುಗಳನ್ನು ದುಷ್ಕರ್ಮಿಗಳು ಒಡೆದು ಹಾಕಿರುವುದು ಭಕ್ತರಲ್ಲಿ ತೀವ್ರ ನೋವನ್ನುಂಟು ಮಾಡಿದೆ.

ಧ್ವಂಸಕ್ಕೂ ಮುನ್ನ ಪೂಜೆ?:ಧ್ವಂಸಕ್ಕೂ ಮುಂಚೆ ದುಷ್ಕರ್ಮಿಗಳು ವ್ಯಾಸರಾಜರ ವೃಂದಾವನ ಹಾಗೂ ವೃಂದಾವನ ಎದುರಿರುವ ಆಂಜನೇಯ ಸ್ವಾಮಿ ಮೂರ್ತಿಗೆ ಹೂ-ಹಣ್ಣು ಇಟ್ಟು ಕುಂಕುಮ ಹಚ್ಚಿ ತೆಂಗಿನಕಾಯಿ ಒಡೆದು ಪೂಜೆ ಮಾಡಿದ್ದಾರೆ. ರಾತ್ರಿ ಪೂಜೆ ಮಾಡಿದ್ದರಿಂದ ಬೆಳಗ್ಗೆ ತೆರಳಿದ ಭಕ್ತರಿಗೆ ಪೂಜೆ ಮಾಡಿದ ಸಾಮಾನುಗಳು ಕಂಡು ಬಂದಿವೆ.

ಸ್ವಚ್ಛಗೊಳಿಸಿದ ಭಕ್ತರು: ಸುದ್ದಿ ತಿಳಿಯುತ್ತಿದ್ದಂತೆ ಆತಂಕಕ್ಕೊಳಗಾದ ರಾಯಚೂರು, ಕೊಪ್ಪಳ, ಬಳ್ಳಾರಿ ಸೇರಿದಂತೆ ಸುತ್ತಲಿನ ಸಾವಿರಾರು ಭಕ್ತರು ಆಗಮಿಸಿ ಎಲ್ಲೆಂದರಲ್ಲಿ ಬಿದ್ದಿದ್ದ ಕಲ್ಲು, ಮಣ್ಣು ಸ್ವಚ್ಛಗೊಳಿಸಿದರು. ಈ ಸಂದರ್ಭ ಸ್ವಯಂ ಮೂರು ಮಠದ ಪೂಜ್ಯರು ಶ್ರಮಾನುಭವದಲ್ಲಿ ಭಕ್ತರ ಜತೆ ಸೇರಿ ಕೆಲಸ ಮಾಡಿದರು. ಅಲ್ಲದೇ, ಮೂರು ಮಠಗಳ ಭಕ್ತರು ಸೇರಿ ಪುನರ್‌ ನಿರ್ಮಾಣ ಮಾಡುವುದಾಗಿ ಮಂತ್ರಾಲಯ ಶ್ರೀಗಳು ಘೋಷಿಸಿದರು. ಭಕ್ತರು ಯಾವುದೇ ಭಾವೋದ್ವೇಗಕ್ಕೆ ಒಳಗಾಗದಂತೆ ಮನವಿ ಮಾಡಿದರು.

ವೃಂದಾವನ ಸೇರಿ ಆನೆಗೊಂದಿ ಸುತ್ತಲಿನ ಐತಿಹಾಸಿಕ ಸ್ಮಾರಕಗಳಿಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರ, ಪುರಾತತ್ವ ಇಲಾಖೆ, ಕೊಪ್ಪಳ, ಬಳ್ಳಾರಿ ಜಿಲ್ಲಾಡಳಿತಗಳು ಭದ್ರತೆ ನೀಡದೇ ನಿರ್ಲಕ್ಷ್ಯ ವಹಿಸಿರುವುದರಿಂದ ಮೇಲಿಂದ ಮೇಲೆ ಸ್ಮಾರಕಗಳನ್ನು ನಿಧಿಗಳ್ಳರು ಧ್ವಂಸಗೊಳಿಸುತ್ತಿದ್ದಾರೆ.

ಎಂಟು ತಿಂಗಳ ಹಿಂದೆ ಕಡೆಬಾಗಿಲು ಆನೆಗೊಂದಿ ಮಧ್ಯೆ ಇರುವ ಸುಂಕದಕಟ್ಟೆ ಆಂಜನೇಯ ಗುಡಿ ಅಗೆದು ಧ್ವಂಸಗೊಳಿಸಲಾಗಿತ್ತು. ತನಿಖೆಗೆ ತಂಡ ರಚನೆ: ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮೋತಿಲಾಲ್ ಲಮಾಣಿ, ತಹಶೀಲ್ದಾರ್‌ ವೀರೇಶ್‌ ಬಿರಾದಾರ್‌, ಗ್ರಾಮೀಣ ಪಿಎಸೈ ಪ್ರಕಾಶ ಮಾಳೆ ಹಾಗೂ ಆನೆಗೊಂದಿ ರಾಜಮನೆತನದ ಶ್ರೀಕೃಷ್ಣದೇವರಾಯ, ಡಿವೈಎಸ್ಪಿ ಚಂದ್ರಶೇಖರ, ಸಿಪಿಐ ಸುರೇಶ ತಳವಾರ ಹಾಗೂ ಪಿಎಸೈ ಪ್ರಕಾಶ ಮಾಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿಗಳ ತ್ವರಿತ ಬಂಧನ ಮತ್ತು ತನಿಖೆಗೆ ಗಂಗಾವತಿ ಸಿಪಿಐ ಸುರೇಶ ತಳವಾರ ನೇತೃತ್ವದಲ್ಲಿ ವೈಜ್ಞಾನಿಕ ತನಿಖಾ ತಂಡ ರಚಿಸಿ ಎಸ್‌ಪಿ ರೇಣುಕಾ ಸುಕುಮಾರನ್‌ ಆದೇಶಿಸಿದ್ದಾರೆ.
ಹಿನ್ನೆಲೆ ಏನು?: ಆನೆಗೊಂದಿ ನವವೃಂದಾವನ ಗಡ್ಡಿಯಲ್ಲಿ ಮಧ್ವಪರಂಪರೆಯ ಒಂಭತ್ತು ಯತಿಗಳ ವೃಂದಾವನಗಳದ್ದು, ಪ್ರತಿ ವರ್ಷ ಮಂತ್ರಾಲಯ ಮಠ, ಉತ್ತಾರಾಧಿಮಠ, ವ್ಯಾಸರಾಯರ ಮಠ ಸೇರಿ ಇತರೆ ಮಧ್ವಪರಂಪರೆ ಮಠಗಳು ಮತ್ತು ಭಕ್ತರು ಆರಾಧನೆ ನಡೆಸಿ ಧಾರ್ಮಿಕ ಆಚರಣೆ ನಡೆಸುತ್ತಾರೆ. ವ್ಯಾಸರಾಜರು ವಿಜಯನಗರ ಸಾಮ್ರಾಜ್ಯ ಅರಸರ ರಾಜಗುರುಗಳಾಗಿದ್ದರು. ವಿಜಯನಗರ ಸಾಮ್ರಾಜ್ಯದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಆಂಜನೇಯ ಸ್ವಾಮಿ ಮೂರ್ತಿ ಸೇರಿ ಹಂಪಿಯ ಚಕ್ರತೀರ್ಥ ಹತ್ತಿರ ಯಂತ್ರೋದ್ಧಾರಕ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದಾರೆ.
ಶ್ರೀಕೃಷ್ಣದೇವರಾಯರಿಗೆ ಕುಹಾದೋಷ ಉಂಟಾದಾಗ ಒಂದು ದಿನದ ಮಟ್ಟಿಗೆ ವಿಜಯನಗರ ಸಾಮ್ರಾಜ್ಯದ ಅರಸರಾಗಿ ರಾಜನಿಗೆ ಬಂದ ದೋಷ ನಿವಾರಣೆ ಮಾಡಿದ್ದರೆಂದು ಶಾಸನಗಳಲ್ಲಿ ಉಲ್ಲೇಖವಾಗಿದೆ. ಪುರಂದರದಾಸ, ಕನಕದಾಸ ಸೇರಿ ಹಲವು ದಾಸವರೇಣ್ಯರಿಗೆ ವ್ಯಾಸರಾಜರು ದೀಕ್ಷೆ ನೀಡಿ ಹರಿಭಕ್ತರನ್ನಾಗಿಸಿದ್ದರು. 1539ರಲ್ಲಿ ವ್ಯಾಸರಾಜರು ವೃಂದಾವನಸ್ಥರಾದ ಸಂದರ್ಭ ಆನೆಗೊಂದಿಯ ನವವೃಂದಾವನದಲ್ಲಿ ಪದ್ಮನಾಭತೀರ್ಥ, ಶ್ರೀರಾಮತೀರ್ಥ, ಶ್ರೀಸುಧೀಂದ್ರತೀರ್ಥ, ಕವೀಂದ್ರತೀರ್ಥ ವೃಂದಾವನಗಳ ಮಧ್ಯೆ ವ್ಯಾಸರಾಜರ ವೃಂದಾವನಗಳು ಮತ್ತು ಎದುರಿಗೆ ಆಂಜನೇಯ ದೇಗುಲವಿದೆ.
ಧ್ವಂಸಕ್ಕೂ ಮುಂಚೆ ಪೂಜೆ?

ಗಂಗಾವತಿ: ನವವೃಂದಾವನದಲ್ಲಿರುವ ವ್ಯಾಸರಾಜರ ವೃಂದಾವನ ಧ್ವಂಸಕ್ಕೂ ಮುಂಚೆ ದುಷ್ಕರ್ಮಿಗಳು ವ್ಯಾಸರಾಜರ ವೃಂದಾವನ ಹಾಗೂ ವೃಂದಾವನ ಎದುರಿರುವ ಆಂಜನೇಯ ಸ್ವಾಮಿ ಮೂರ್ತಿಗೆ ಹೂ-ಹಣ್ಣು ಇಟ್ಟು ಕುಂಕುಮ ಹಚ್ಚಿ ತೆಂಗಿನಕಾಯಿ ಒಡೆದು ಪೂಜೆ ಮಾಡಿದ್ದಾರೆನ್ನಲಾಗಿದೆ.
ಹಗಲಿನಲ್ಲಿ ಪೂಜೆ ಮಾಡಿದರೆ ಇಲ್ಲಿರುವ ಕೋತಿಗಳು ಎಲ್ಲವನ್ನೂ ಎತ್ತಿಕೊಂಡು ಹೋಗುತ್ತವೆ. ರಾತ್ರಿ ಮಾಡಿದ್ದರಿಂದ ಬೆಳಗ್ಗೆ ಪೂಜೆ ಮಾಡಲು ತೆರಳಿದವರಿಗೆ ಪೂಜೆ ಮಾಡಿದ ಸಾಮಗ್ರಿಗಳು ಕಂಡು ಬಂದಿವೆ.

ಟಾಪ್ ನ್ಯೂಸ್

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

DCM ಡಿಕೆಶಿ, ಶಿವರಾಮೇಗೌಡ ವಿರುದ್ಧ ಜೆಡಿಎಸ್‌ ಆಕ್ರೋಶ: ಹಲವೆಡೆ ಪ್ರತಿಭಟನೆ

DCM ಡಿಕೆಶಿ, ಶಿವರಾಮೇಗೌಡ ವಿರುದ್ಧ ಜೆಡಿಎಸ್‌ ಆಕ್ರೋಶ: ಹಲವೆಡೆ ಪ್ರತಿಭಟನೆ

ಹಂತ-2: ಶೇ. 71.4 ಮತ: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಸಂಪನ್ನ

ಹಂತ-2: ಶೇ. 71.4 ಮತ: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಸಂಪನ್ನ

HD Kumaraswamy ಮೈತ್ರಿ ಮುಂದುವರಿಕೆ ಉದ್ದೇಶ

BJP-JDS ಮೈತ್ರಿ ಮುಂದುವರಿಕೆ ಉದ್ದೇಶ; ಎಚ್‌.ಡಿ. ಕುಮಾರಸ್ವಾಮಿ

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಅಶೋಕ್‌

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಆರ್‌. ಅಶೋಕ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.