ರೆಬೆಲ್ ರಾಜಣ್ಣನಿಗೆ ಸೂಪರ್‌ಸೀಡ್‌ ಶಾಕ್‌

ರಾಜ್ಯ ಸಮ್ಮಿಶ್ರ ಸರ್ಕಾರದಿಂದ ಕ್ರಮ • ತಂದೆ ಸೋಲಿಗೆ ಸೇಡು ತೀರಿಸಿಕೊಂಡ ಸಿಎಂ ಕುಮಾರಸ್ವಾಮಿ?

Team Udayavani, Jul 22, 2019, 1:20 PM IST

tk-tdy-1

ತುಮಕೂರು: ಒಂದು ವರ್ಷದಿಂದ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ನಿರಂತರ ವಾಗ್ಧಾಳಿ ಮಾಡುತ್ತಿರುವುದರ ಜೊತೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಕೆಲಸ ಮಾಡಿದ್ದಾರೆ ಎಂಬ ಕಾರಣ ಮುಂದಿಟ್ಟು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಡಿಸಿಸಿ ಬ್ಯಾಂಕ್‌ ಸೂಪರ್‌ ಸೀಡ್‌ ಮಾಡಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

ರೆಬೆಲ್ ಹೇಳಿಕೆ: ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲೂ ಕಾಂಗ್ರೆಸ್‌ ಮಾಜಿ ಶಾಸಕರಾಗಿ ರುವ ಕೆ. ಎನ್‌. ರಾಜಣ್ಣ ಸರ್ಕಾರ ಬೀಳುತ್ತದೆ. ಸರ್ಕಾರ ಬಿದ್ದು ಹೋಗ ಬೇಕು. ಜೆಡಿಎಸ್‌ ಜೊತೆ ಹೊಂದಾಣಿಕೆಯಿಂದ ಕಾಂಗ್ರೆಸ್‌ಗೆ ತೊಂದರೆ ಯಾ ಗುತ್ತಿದೆ ಎಂದು ನೀಡಿರುವ ಹೇಳಿಕೆ, ತಂದೆ ದೇವೇಗೌಡರ ಸೋಲಿಗೂ ಕಾರಣವಾಗಿರುವ ರಾಜಣ್ಣ ವಿರುದ್ಧ ಪುತ್ರ ಸಿಎಂ ಕುಮಾರಸ್ವಾಮಿ ದ್ವೇಷ ತೀರಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಕೆ.ಎನ್‌.ರಾಜಣ್ಣ ಅಸ್ತಿತ್ವ ಕುಂದಿಸಲಾಗುತ್ತದೆ ಎಂಬ ಅನುಮಾನ ಮೂಡಿದೆ. ಮೇಲ್ನೋಟಕ್ಕೆ ರೆಬೆಲ್ ಮಾಜಿ ಶಾಸಕ ಕೆ.ಎನ್‌ ರಾಜಣ್ಣ ಅಧ್ಯಕ್ಷರಾಗಿದ್ದ ಡಿಸಿಸಿ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆಯಾದರೂ ರಾಜ ಕೀಯ ದ್ವೇಷ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಬಹಿರಂಗ ಹೇಳಿಕೆ: ಡಿಸಿಸಿ ಬ್ಯಾಂಕ್‌ ಸೂಪರ್‌ ಸೀಡ್‌ ಆಗುತ್ತಿದ್ದಂತೆ ರಾಜಣ್ಣ ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ತುಮಕೂರಿನಿಂದ ದೇವೇಗೌಡರ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ವಾಪಸ್‌ ತೆಗೆದುಕೊಂಡಿದ್ದರು. ಬಳಿಕ ಪ್ರಚಾರದಿಂದ ದೂರ ಉಳಿದ್ದಿದ್ದರು. ಹೀಗಾಗಿ ದೇವೇಗೌಡರ ಸೋಲಿಗೆ ರಾಜಣ್ಣ ಕಾರಣ ಎನ್ನುವ ಮಾತಿತ್ತು. ಝೀರೋ ಟ್ರಾಫಿಕ್‌ ಮಿನಿಸ್ಟ್ರೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ವಿರುದ್ಧ ಮಾಡುತ್ತಿದ್ದ ಟೀಕೆ, ದೋಸ್ತಿ ಸರ್ಕಾರದ ವಿರುದ್ಧದ ಬಹಿರಂಗ ಹೇಳಿಕೆ, ಸಿಎಂ, ದೇವೇಗೌಡರ ವಿರೋಧ ಕಟ್ಟಿಕೊಂಡ ಪರಿಣಾಮ ಸರ್ಕಾರ ರಾಜಣ್ಣ ವಿರುದ್ಧ ದ್ವೇಷ ತೀರಿಸಿಕೊಂಡಿದೆ. ರಾಜಣ್ಣನನ್ನು ಕಟ್ಟಿ ಹಾಕುವ ಹಾಗೂ ಅವರನ್ನು ರಾಜಕೀಯವಾಗಿ ಮುಗಿ ಸುವ ಸಲುವಾಗಿ ಈ ರೀತಿ ದ್ವೇಷ ರಾಜಕಾರಣ ಮಾಡ ಲಾಗುತ್ತಿದೆ ಎಂದು ರಾಜಣ್ಣ ಅವರ ಬೆಂಬಲಿಗರು ಆರೋಪಿಸುತ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ರಾಜ್ಯಸರ್ಕಾರ ಡಿಸಿಸಿ ಬ್ಯಾಂಕ್‌ ಸೂಪರ್‌ ಸೀಡ್‌ ಮಾಡಿದೆ. ಸೋಮ ವಾರ ಈ ಸಮ್ಮಿಶ್ರ ಸರ್ಕಾರ ಪತನ ವಾಗಲಿದೆ. ಹೊಸ ಸರ್ಕಾರ ರಚನೆಯಾದ ಎರಡೇ ದಿನದಲ್ಲಿ ಸೂಪರ್‌ ಸೀಡ್‌ ಆದೇಶ ರದ್ದುಪಡಿಸಿ ಮತ್ತೆ ರಾಜಣ್ಣ ಅವರು ಬ್ಯಾಂಕ್‌ನ ಅಧ್ಯಕ್ಷರಾಗುತ್ತಾರೆ ಎನ್ನುವ ವಿಶ್ವಾಸ ಅವರ ಬೆಂಬಲಿಗರಲ್ಲಿ ಇದೆ. ಈ ಹಿಂದೆ 2008ರಲ್ಲಿ ಇದೇ ರೀತಿ ಯಲ್ಲಿ ಬ್ಯಾಂಕ್‌ ಸೂಪರ್‌ ಸೀಡ್‌ ಮಾಡಿದ್ದಾಗ ನ್ಯಾಯ ಲಯದಲ್ಲಿ ಗೆದ್ದು ಮತ್ತೆ ಅಧ್ಯಕ್ಷರಾಗಿದ್ದರು. ದ್ವೇಷದ ರಾಜಕಾರಣ ಜಿಲ್ಲೆಯಲ್ಲಿ ತಲೆ ಎತ್ತುತ್ತಿದೆ. ಈ ರೀತಿ ಮುಂದುವರಿದರೆ ವೈಯಕ್ತಿಕ ದ್ವೇಷಕ್ಕೆ ಮಾರ್ಪಟ್ಟು ಸಾರ್ವಜನಿಕ ಸಂಸ್ಥೆಗಳಿಗೆ ಧಕ್ಕೆ ಬರಲಿದೆ ಎಂಬ ಆತಂಕ ಜಿಲ್ಲೆಯ ಜನರ ಕಾಡುತ್ತಿದೆ.

ಚುನಾಯಿತ ಸಹಕಾರ ಸಂಘವನ್ನು ಸರ್ಕಾರ ರಾಜಕೀಯ ದ್ವೇಷದಿಂದ ವಜಾಗೊಳಿಸುವ ಮೂಲಕ ಪ್ರಜಾಪ್ರಭುತ್ವ ಮೌಲ್ಯ ಕಗ್ಗೊಲೆ ಮಾಡಿದೆ ಎಂದು ಇಪ್ಪಾಡಿ ಹಾಗೂ ಹುತ್ರಿದುರ್ಗ ವಿಎಸ್‌ಎಸ್‌ಎನ್‌ ಅಧ್ಯಕ್ಷ ಐ.ಜಿ.ರಮೇಶ್‌, ಬೋರೇಗೌಡ ಭಾನು ವಾರ ಸಂಜೆ ಜಂಟಿ ಪತ್ರಿಕಾ ಗೋಷ್ಠಿ ಯಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.

ಕೆ.ಎನ್‌.ರಾಜಣ್ಣ ನೇತೃತ್ವದಲ್ಲಿ ತುಮಕೂರು ಡಿಸಿಸಿ ಬ್ಯಾಂಕ್‌ ಉತ್ತಮವಾಗಿ ನಡೆ ಯುತ್ತಿದೆ. ಅಲ್ಲದೆ ಕೋಟ್ಯಾಂತರ ರೂ. ಆದಾಯ ಮಾಡಿ ಜಿಲ್ಲೆಯ ರೈತರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಲೋಕ‌ಸಭಾ ಚುನಾವಣೆಯಲ್ಲಿ ಮೃತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಸೋಲಿಗೆ ಕೆ.ಎನ್‌.ರಾಜಣ್ಣ ಕಾರಣವೆಂದು ಲೋಕೋಪಯೋಗಿ ಸಚಿವ ಎಚ್. ಡಿ.ರೇವಣ್ಣ ಹಾಗೂ ದೇವೇಗೌಡ, ಸಿಎಂ ಕುಮಾರ ಸ್ವಾಮಿ ರಾಜಕೀಯ ಪಿತೂರಿ ನಡೆಸಿ ಬ್ಯಾಂಕ್‌ ಸೂಪರ್‌ ಸೀಡ್‌ ಮಾಡಿದ್ದಾರೆ ಎಂದು ಆರೋಪಿಸಿ ದರು. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಕೈವಾಡ ಇದೆ. ಕೆ.ಎನ್‌.ರಾಜಣ್ಣ ಕಾಂಗ್ರೆಸ್‌ನ ಶಿಸ್ತಿನ ನಾಯಕ. ತಪ್ಪು ಕಂಡು ಬಂದರೆ ನೇರವಾಗಿ ಖಂಡಿ ಸುವ ಜಾಯಮಾನ ಅವರದ್ದಾ ಗಿದೆ. ಇದನ್ನು ಅರ್ಥ ಯಿಸಿಕೊಳ್ಳದ ಕೆಲ ವ್ಯಕ್ತಿ ಗಳು ರಾಜಕೀಯ ದುರು ದ್ದೇಶದಿಂದ ರಾಜಣ್ಣ ಅವರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ತುಮಕೂರು ಡಿಸಿಸಿ ಬ್ಯಾಂಕ್‌ ರೈತರ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿರುವುದು. ಅವರ ಜನಪರ ಕಾರ್ಯ ಸಹಿಸದೆ ಕೆಲವರು ಹುನ್ನಾರ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಹಿರಿಯ ನಾಯಕರು ಕೆ.ಎನ್‌.ರಾಜಣ್ಣರ ಪಕ್ಷನಿಷ್ಠೆ ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಹೀನಾಯ ಸ್ಥಿತಿಗೆ ತಲುಪಲಿದೆ ಎಂದು ಬೋರೇಗೌಡ, ಐ.ಜಿ.ರಮೇಶ್‌ ಎಚ್ಚರಿಕೆ ನೀಡಿದ್ದಾರೆ.

ಪರಂ, ಎಚ್‌ಡಿಡಿ ರಾಜಕೀಯ ಪಿತೂರಿ:

ಕುಣಿಗಲ್: ತುಮಕೂರು ಡಿಸಿಸಿ ಬ್ಯಾಂಕ್‌ ವಜಾಗೊಳಿಸಿರುವ ಸರ್ಕಾರದ ಕ್ರಮವನ್ನು ತಾಲೂಕಿನ ವಿವಿಧ ವಿಎಸ್‌ಎಸ್‌ಎನ್‌ ಖಂಡಿಸಿದೆ. ಚುನಾಯಿತ ಸಹಕಾರ ಸಂಘವನ್ನು ಸರ್ಕಾರ ರಾಜಕೀಯ ದ್ವೇಷದಿಂದ ವಜಾಗೊಳಿಸುವ ಮೂಲಕ ಪ್ರಜಾಪ್ರಭುತ್ವ ಮೌಲ್ಯ ಕಗ್ಗೊಲೆ ಮಾಡಿದೆ ಎಂದು ಇಪ್ಪಾಡಿ ಹಾಗೂ ಹುತ್ರಿದುರ್ಗ ವಿಎಸ್‌ಎಸ್‌ಎನ್‌ ಅಧ್ಯಕ್ಷ ಐ.ಜಿ.ರಮೇಶ್‌, ಬೋರೇಗೌಡ ಭಾನು ವಾರ ಸಂಜೆ ಜಂಟಿ ಪತ್ರಿಕಾ ಗೋಷ್ಠಿ ಯಲ್ಲಿ ತೀವ್ರವಾಗಿ ಖಂಡಿಸಿದ್ದಾರೆ. ಕೆ.ಎನ್‌.ರಾಜಣ್ಣ ನೇತೃತ್ವದಲ್ಲಿ ತುಮಕೂರು ಡಿಸಿಸಿ ಬ್ಯಾಂಕ್‌ ಉತ್ತಮವಾಗಿ ನಡೆ ಯುತ್ತಿದೆ. ಅಲ್ಲದೆ ಕೋಟ್ಯಾಂತರ ರೂ. ಆದಾಯ ಮಾಡಿ ಜಿಲ್ಲೆಯ ರೈತರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಲೋಕ‌ಸಭಾ ಚುನಾವಣೆಯಲ್ಲಿ ಮೃತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಸೋಲಿಗೆ ಕೆ.ಎನ್‌.ರಾಜಣ್ಣ ಕಾರಣವೆಂದು ಲೋಕೋಪಯೋಗಿ ಸಚಿವ ಎಚ್. ಡಿ.ರೇವಣ್ಣ ಹಾಗೂ ದೇವೇಗೌಡ, ಸಿಎಂ ಕುಮಾರ ಸ್ವಾಮಿ ರಾಜಕೀಯ ಪಿತೂರಿ ನಡೆಸಿ ಬ್ಯಾಂಕ್‌ ಸೂಪರ್‌ ಸೀಡ್‌ ಮಾಡಿದ್ದಾರೆ ಎಂದು ಆರೋಪಿಸಿ ದರು. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಕೈವಾಡ ಇದೆ. ಕೆ.ಎನ್‌.ರಾಜಣ್ಣ ಕಾಂಗ್ರೆಸ್‌ನ ಶಿಸ್ತಿನ ನಾಯಕ. ತಪ್ಪು ಕಂಡು ಬಂದರೆ ನೇರವಾಗಿ ಖಂಡಿ ಸುವ ಜಾಯಮಾನ ಅವರದ್ದಾ ಗಿದೆ. ಇದನ್ನು ಅರ್ಥ ಯಿಸಿಕೊಳ್ಳದ ಕೆಲ ವ್ಯಕ್ತಿ ಗಳು ರಾಜಕೀಯ ದುರು ದ್ದೇಶದಿಂದ ರಾಜಣ್ಣ ಅವರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ತುಮಕೂರು ಡಿಸಿಸಿ ಬ್ಯಾಂಕ್‌ ರೈತರ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿರುವುದು. ಅವರ ಜನಪರ ಕಾರ್ಯ ಸಹಿಸದೆ ಕೆಲವರು ಹುನ್ನಾರ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಹಿರಿಯ ನಾಯಕರು ಕೆ.ಎನ್‌.ರಾಜಣ್ಣರ ಪಕ್ಷನಿಷ್ಠೆ ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಹೀನಾಯ ಸ್ಥಿತಿಗೆ ತಲುಪಲಿದೆ ಎಂದು ಬೋರೇಗೌಡ, ಐ.ಜಿ.ರಮೇಶ್‌ ಎಚ್ಚರಿಕೆ ನೀಡಿದ್ದಾರೆ.
ಡಿಸಿಸಿ ಬ್ಯಾಂಕ್‌ನಲ್ಲಿ ಅವ್ಯವಹಾರ ?:

ತುಮಕೂರು ಡಿಸಿಸಿ ಬ್ಯಾಂಕನ್ನು ಒಂದು ವರ್ಷಗಳ ಅವಧಿ ಸೂಪರ್‌ ಸೀಡ್‌ ಮಾಡಲಾಗಿದೆ. ರಾಜ್ಯ ಸರ್ಕಾರದ ಆದೇಶದ ಮೇರೆಗೆ ಬ್ಯಾಂಕ್‌ನ ನಿರ್ದೇಶಕ ಮಂಡಳಿ ಅಮಾನತು ಮಾಡಿ ಆ ಸ್ಥಾನಕ್ಕೆ ಜಿಲ್ಲಾಧಿಕಾರಿ ಡಾ. ರಾಕೇಶ್‌ ಕುಮಾರ್‌ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಎರಡು ವರ್ಷದ ಹಿಂದೆ ಡಿಸಿಸಿ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರು ಕೇಳಿ ಬಂದಿತ್ತು. ಈ ದೂರನ್ನು ಆಧರಿಸಿ ಕ್ರಮಕೈಗೊಳ್ಳಲಾಗಿದೆ. ಸರ್ಕಾರ‌ ನೀಡುವ ನಿರ್ದೇಶನದ ಮೇರೆಗೆ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಈಗಾಗಲೇ ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ.
● ಚಿ.ನಿ. ಪುರುಷೋತ್ತಮ್‌

ಟಾಪ್ ನ್ಯೂಸ್

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.