ಫಿಪಾ ರ್ಯಾಂಕಿಂಗ್: 103ಕ್ಕೆ ಕುಸಿದ ಭಾರತ
Team Udayavani, Jul 26, 2019, 5:29 AM IST
ಹೊಸದಿಲ್ಲಿ: ಗುರುವಾರ ಪ್ರಕಟಗೊಂಡ ನೂತನ ಫಿಪಾ ಫುಟ್ಬಾಲ್ ರ್ಯಾಂಕಿಂಗ್ನಲ್ಲಿ ಭಾರತ ತಂಡ 2 ಸ್ಥಾನ ಕುಸಿತ ಕಾಣುವ ಮೂಲಕ 103ಕ್ಕೆ ಇಳಿದಿದೆ.
ಇತ್ತೀಚೆಗೆ ಅಹ್ಮದಾಬಾದ್ನಲ್ಲಿ ನಡೆದ “ಇಂಟರ್ ಕಾಂಟಿನೆಂಟಲ್ ಕಪ್’ ಕೂಟದಲ್ಲಿ ತಜಿಕಿಸ್ಥಾನ್ ಮತ್ತು ಕೊರಿಯಾ ವಿರುದ್ಧದ ಪಂದ್ಯಗಳಲ್ಲಿ ಸೋಲನುಭವಿಸಿದ ಭಾರತ, ಸಿರಿಯಾ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಇದು ರ್ಯಾಂಕಿಂಗ್ ಕುಸಿತಕ್ಕೆ ಪ್ರಮುಖ ಕಾರಣ. ಏಶ್ಯನ್ ರಾಷ್ಟ್ರಗಳಲ್ಲಿ ಭಾರತ 18ನೇ ಸ್ಥಾನದಲ್ಲಿದೆ.
ಭಾರತ 5 ಅಂಕ ಕಳೆದುಕೊಂಡಿದ್ದು, 1,214 ರ್ಯಾಂಕಿಂಗ್ ಅಂಕಗಳನ್ನು ಹೊಂದಿದೆ. ಬೆಲ್ಜಿಯಂ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. ಬ್ರಝಿಲ್, ಫ್ರಾನ್ಸ್, ಇಂಗ್ಲೆಂಡ್ ಮತ್ತು ಉರುಗ್ವೆ 2ರಿಂದ 5ರ ವರೆಗಿನ ಸ್ಥಾನದಲ್ಲಿವೆ.