ಕ್ವಾ. ಫೈನಲ್ ಗೆ ಸ್ವಿಟೋಲಿನಾ, ಸಬಲೆಂಕಾ
ಸಿಲಿಕಾನ್ ವ್ಯಾಲಿ ಕ್ಲಾಸಿಕ್ ಟೆನಿಸ್
Team Udayavani, Aug 2, 2019, 5:29 AM IST
ಕ್ಯಾಲಿಫೋರ್ನಿಯಾ: ಅಗ್ರ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ ಮತ್ತು ದ್ವಿತೀಯ ಶ್ರೇಯಾಂಕದ ಅರಿನಾ ಸಬಲೆಂಕಾ ಇಲ್ಲಿ ನಡೆಯುತ್ತಿರುವ ‘ಸಿಲಿಕಾನ್ ವ್ಯಾಲಿ ಕ್ಲಾಸಿಕ್’ ಟೆನಿಸ್ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಸ್ವಿಟೋಲಿನಾ ಉಕ್ರೇನಿನ ದರಿಯಾ ಸಬಲೆಂಕಾ ಅವರನ್ನು 6-3, 6-1 ನೇರ ಸೆಟ್ಗಳಿಂದ ಮಣಿಸಿದರು. ಕ್ವಾರ್ಟರ್ ಫೈನಲ್ನಲ್ಲಿ ಇವರ ಎದುರಾಳಿ ಗ್ರೀಕ್ನ ಮರಿಯಾ ಸಕ್ಕರಿ. ಇನ್ನೊಂದು ಪಂದ್ಯದಲ್ಲಿ ಸಕ್ಕರಿ 4-6, 6-4, 6-2ರಿಂದ ಜಪಾನಿನ ಯುವ ಆಟಗಾರ್ತಿ ಮಾಯೊ ಹಿಬಿ ಅವರನ್ನು ಹಿಮ್ಮೆಟ್ಟಿಸಿದರು.
ಕಳೆದ ವಿಂಬಲ್ಡನ್ ಪಂದ್ಯಾವಳಿಯಲ್ಲಿ ಸ್ವಿಟೋಲಿನಾ ನೇರ ಸೆಟ್ಗಳಿಂದ ಸಕ್ಕರಿಗೆ ಸೋಲುಣಿಸಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಲು ಸಕ್ಕರಿ ಕಾಯುತ್ತಿದ್ದಾರೆ.
ಬೆಲರೂಸ್ನ ಅರಿನಾ ಸಬಲೆಂಕಾ 6-3, 6-3ರಿಂದ ಕೊಕೊ ವಾಂಡೆವೇಗ್ ವಿರುದ್ಧ ಜಯ ಸಾಧಿಸಿದರು. ಸಬಲೆಂಕಾ ಎದುರಾಳಿ ಸ್ಪೇನಿನ ಕಾರ್ಲಾ ಸೂರೆಜ್ ನವಾರೊ. ಅವರು ಬೆಥನಿ ಮಾಟೆಕ್ ಸ್ಯಾಂಡ್ಸ್ಗೆ 3-6, 6-1, 6-2 ಅಂತರದ ಸೋಲುಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ