ನೆರೆ ಹಾವಳಿಗೆ ಸಾವಿರಾರು ಎಕರೆ ಬೆಳೆ ನಾಶ


Team Udayavani, Aug 6, 2019, 4:07 PM IST

Udayavani Kannada Newspaper

ಸುರಪುರ: ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಅಧಿಕ ಪ್ರಮಾಣ ನೀರು ಹರಿ ಬಿಡುತ್ತಿರುವುದರಿಂದ ತಾಲೂಕಿನ ನದಿ ಪಾತ್ರದ ವಿವಿಧ ಗ್ರಾಮಗಳ ಜಮೀನುಗಳು ಜಲಾವೃತಗೊಂಡಿದ್ದು, ಸಾವಿರಾರು ಎಕರೆ ಬೆಳೆ ನಷ್ಟವಾಗಿದೆ.

ಜಲಾಶಯದಿಂದ ಹೆಚ್ಚುವರಿಯಾಗಿ ಸೋಮವಾರ 67 ಸಾವಿರಕ್ಕೂ ಅಧಿಕ ಕ್ಯೂಸೆಕ್‌ ನೀರು ನದಿಗೆ ಹರಿಬಿಟ್ಟ ಪರಿಣಾಮ ಪ್ರವಾಹದಲ್ಲಿ ಏರಿಕೆ ಉಂಟಾಗಿದೆ. ಹಳ್ಳ ಕೊಳ್ಳಗಳ ಮೂಲಕ ನದಿ ಪಾತ್ರದ ಕೆಲ ಗಾಮಗಳಲ್ಲಿ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಜನರ ರಕ್ಷಣೆಗಾಗಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ಬೆಳೆ ನಾಶ: ತಾಲೂಕಿನ ತಿಂಥಣಿ, ಬಂಡೊಳ್ಳಿ, ಶಾಂತಪುರ, ಅಡವಿ ಲಿಂಗದಹಳ್ಳಿ, ಶೆಳ್ಳಿಗಿ, ಹೆಮ್ಮಡಗಿ, ಸೂಗುರು ಸೇರಿದಂತೆ ಅನೇಕ ಗ್ರಾಮಗಳ ಸಾವಿರಾರು ಎಕರೆ ಜಮೀನುಗಳು ಜಲಾವೃತಗೊಂಡಿದ್ದು, ಭತ್ತ, ತೊಗರಿ, ಹತ್ತಿ, ಸಜ್ಜಿ ಸೇರಿದಂತೆ ಅನೇಕ ಬೆಳೆಗಳು ನೀರಿನಲ್ಲಿ ಜಲಾವೃತವಾಗಿವೆ. ನದಿ ಪಾತ್ರದ ನೆರೆ ಸಂತ್ರಸ್ತರ ರಕ್ಷಣೆಗಾಗಿ ತಿಂಥಿಣಿಯ ದಾದ್ಲಾಪುರ ಶಾಲೆ, ಎಚ್.ಎಸ್‌. ಎಚ್.ಎಸ್‌. ಖಾನಪುರ ಎಪಿಎಂಸಿ, ದೇವಪುರದ ಸರಕಾರಿ ಶಾಲೆಯಲ್ಲಿ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ.

ತಾಲೂಕು ಕೇಂದ್ರಕ್ಕೆ ಕುಡಿಯುವ ನೀರು ಪೂರೈಸುವ ಶೆಳ್ಳಗಿ ಸಮೀಪದ ಇಂಟ್ಯಾಕ್‌ವೆಲ್ ನೀರಿನಲ್ಲಿ ಮುಳಗಿದೆ. ಈಶ್ವರ ದೇಗುಲ ಸಹ ಕಾಣದಾಗಿದೆ. ಜಾಕ್‌ವೆಲ್ ಹತ್ತಿರದಲ್ಲಿ ನೀರಿನ ವೇಗ ಅಧಿಕವಾಗಿದೆ. ಮಂಗಳವಾರ ಜಲಾಶಯದಿಂದ ಇನ್ನಷ್ಟು ನೀರು ಹರಿಸುವ ಸಾಧ್ಯತೆ ಇದೆ.

ರೈತರಲ್ಲಿ ಆತಂಕ: ಜಿಲ್ಲಾದ್ಯಂತ ಹೇಳಿಕೊಳ್ಳುವಷ್ಟು ಮಳೆಯಾಗಿಲ್ಲ. ಆದರೂ ಪ್ರವಾಹ ಎದುರಾಗಿರುವುದು ರೈತರಲ್ಲಿ ಆತಂಕ ಮನೆ ಮಾಡಿದೆ. ಮಹಾರಾಷ್ಟ್ರದಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಕೊಯ್ನಾ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಹೆಚ್ಚುವರಿ ನೀರನ್ನು ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಕ್ಕೆ ಹರಿದು ಬರುತ್ತಿದೆ. ಹೀಗಾಗಿ ಕಷ್ಣೆ ಮೈದುಂಬಿ ಹರಿಯುತ್ತಿದ್ದಾಳೆ.

ಪರಿಹಾರ ಬಗ್ಗೆ ಈಗ ಏನು ಹೇಳಲಾಗದು. ಪ್ರವಾಹ ಇಳಿಮುಖವಾದ ನಂತರ ಸರ್ವೇ ಕಾರ್ಯಕ್ಕೆ ಸೂಚಿಸಲಾಗುವುದು, ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ಕೊಡುವ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು, ಸರಕಾರ ನೀಡುವ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು, ಸಂತ್ರಸ್ತ ರೈತರು ತಾಳ್ಮೆಯಿಂದ ಇರಬೇಕು. ಜನ-ಜಾನವಾರು ನದಿಗೆ ಇಳಿಯದಂತೆ ಡಂಗೂರ ಹಾಕಿ ಜಾಗೃತಿ ಮೂಡಿಸಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ. •ಎಂ. ಕೂರ್ಮಾರಾವ್‌, ಜಿಲ್ಲಾಧಿಕಾರಿ

 

•ಸಿದ್ದಯ್ಯ ಪಾಟೀಲ

ಟಾಪ್ ನ್ಯೂಸ್

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !

Revanna 2

Holenarasipur case; ರೇವಣ್ಣ ಅವರಿಗೆ ಒಂದು ದಿನದ ರಿಲೀಫ್

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

3

ಫಾಹದ್‌ ಫಾಸಿಲ್‌ ಜೊತೆ ʼದೃಶ್ಯಂʼ ನಿರ್ದೇಶಕನ ಸಿನಿಮಾ:‌ ಸುದ್ದಿ ಕೇಳಿ ಥ್ರಿಲ್‌ ಆದ ಫ್ಯಾನ್ಸ್

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ

doctor

Mistake; ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಬೇಕಿತ್ತು: ವೈದ್ಯರು ಮಾಡಿದ್ದು ನಾಲಗೆಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wadgera; A crocodile appeared in the farm

Wadgera; ಜಮೀನಿನಲ್ಲಿ ಕಾಣಿಸಿಕೊಂಡು ರೈತರಿಗೆ ಆತಂಕ ತಂದ ಮೊಸಳೆ

4-yadagiri

Eknath Shindeಗೆ ತಾಕತ್ ಇದ್ದರೆ ನಮ್ಮ ರಾಜ್ಯಕ್ಕೆ ಬರಲಿ: ಸಚಿವ ದರ್ಶನಾಪುರ ಸವಾಲ್

1-wewwe

Yadgir: ಸಿಡಿಲು ಬಡಿದು ಕುರಿಗಾಹಿ ಮೃತ್ಯು, 17 ಕುರಿಗಳು ಸಾವು

yadagiri

SSLC Exam Result; ಮತ್ತೆ ಕೊನೆಯ ಸ್ಥಾನ ಪಡೆದ ಯಾದಗಿರಿ..; ಕಾರಣವೇನು?

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

Puttur: ಚೆಂಡೆವಾದಕ ನೇಣು ಬಿಗಿದುಕೊಂಡು ಆತ್ಮಹತ್ಯೆ

Puttur: ಚೆಂಡೆವಾದಕ ನೇಣು ಬಿಗಿದುಕೊಂಡು ಆತ್ಮಹತ್ಯೆ

11

Puttur: ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವು ವೈದ್ಯರ ವಿರುದ್ಧ ದೂರು ದಾಖಲು

Misbehavior: ಅನುಚಿತ ವರ್ತನೆ; ಕೇಂದ್ರ ವಿ.ವಿ. ಅಧ್ಯಾಪಕನ ಅಮಾನತು

Misbehavior: ಅನುಚಿತ ವರ್ತನೆ; ಕೇಂದ್ರ ವಿ.ವಿ. ಅಧ್ಯಾಪಕನ ಅಮಾನತು

Fraud Case: ಆರೋಪಿ ರತೀಶ್‌ ಗೋವಾಕ್ಕೆ ಪರಾರಿ

Fraud Case: ಆರೋಪಿ ರತೀಶ್‌ ಗೋವಾಕ್ಕೆ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.