ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೂ ಬಿಡದ ಪ್ರವಾಹ


Team Udayavani, Aug 16, 2019, 10:22 AM IST

bk-tdy-1

ಬಾಗಲಕೋಟೆ: ಜಮಖಂಡಿ ತಾಲೂಕಿನ ಕುಂಬಾರಹಳ್ಳ ಸರ್ಕಾರಿ ಶಾಲೆ ಜಲಾವೃತಗೊಂಡಿದೆ.

ಬಾಗಲಕೋಟೆ: ಪ್ರವಾಹ ಸಹಿತ ಯಾವುದೇ ತುರ್ತು ಸಂದರ್ಭದಲ್ಲಿ ನಗರ-ಪಟ್ಟಣ ಹಾಗೂ ಗ್ರಾಮೀಣ ಜನರಿಗೆ ತಕ್ಷಣಕ್ಕೆ ಆಶ್ರಯ ಕಲ್ಪಿಸಲು ನೆರವಾಗುವುದೇ ಸರ್ಕಾರಿ ಶಾಲೆಗಳು. ಆದರೆ, ಪ್ರವಾಹದಿಂದ ಜಿಲ್ಲೆಯ 138 ಶಾಲೆಗಳೇ ಈಗ ಆಸರೆಗಾಗಿ ಕಾಯುತ್ತಿವೆ.

ಹೌದು, ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಪ್ರವಾಹದಿಂದ ಜಿಲ್ಲೆಯ 138 ಶಾಲೆಗಳು ಸಂಪೂರ್ಣ ನೀರಿನಲ್ಲಿ ನಿಂತಿವೆ. ಅದರಲ್ಲೂ ಶಾಲಾ ಮತ್ತು ಬಿಸಿಯೂಟ ತಯಾರಿಸುವ ಅಡುಗೆ ಕೊಡಿಗಳು ಸೇರಿ ಒಟ್ಟು 1,925 ಶಾಲಾ ಕೊಠಡಿಗಳು ಹಾನಿಯಾಗಿವೆ. ಅವುಗಳ ದುರಸ್ತಿ, ಪುನರ್‌ ನಿರ್ಮಾಣದ ಬಳಿಕ ಶಾಲೆಗಳು ಪುನಃ ಮೊದಲಿದ್ದ ಸ್ಥಿತಿಗೆ ಬರಲು ಬಹು ದಿನಗಳೇ ಬೇಕಾಗುತ್ತದೆ.

15 ದಿನದಿಂದ ನೀರಿನಲ್ಲಿ: ಮಲಪ್ರಭಾ ಮತ್ತು ಘಟಪ್ರಭಾ ನದಿ ಪ್ರವಾಹದಿಂದ ಮುಧೋಳ, ಬಾದಾಮಿ, ಹುನಗುಂದ, ಬಾಗಲಕೋಟೆ (ಕಲಾದಗಿ ಹೋಬಳಿ) ಬೀಳಗಿ ತಾಲೂಕಿನ ಕೆಲವೆಡೆ ಶಾಲೆಗಳು ನಾಲ್ಕು ದಿನಗಳ ಕಾಲ ಮಾತ್ರ ನೀರಿನಲ್ಲಿ ನಿಂತಿದ್ದರೆ, ಕೃಷ್ಣಾ ನದಿ ಪ್ರವಾಹದಿಂದ ಬಾಗಲಕೋಟೆ ತಾಲೂಕಿನ ದೇವನಾಳ ಸಹಿತ ಜಮಖಂಡಿ, ಬೀಳಗಿ ತಾಲೂಕಿನ ಹಲವು ಶಾಲೆಗಳು ಕಳೆದ ಆ.1ರಿಂದ ನೀರಿನಲ್ಲಿವೆ. ಇಂದಿಗೂ ಜಲಾವೃತಗೊಂಡ ಶಾಲೆಗಳ ಸುತ್ತಲಿನ ನೀರು ತಗ್ಗಿಲ್ಲ. ಹೀಗಾಗಿ ಶತಮಾನ ಕಂಡ ಶಾಲೆಗಳ ಸ್ಥಿತಿಯಂತೂ ಅಯೋಮಯವಾಗಿದೆ. ಈ ಶಾಲೆಗಳು ಯಾವಾಗ ಬೀಳುತ್ತವೆ ಎಂಬ ಆತಂಕ ಎದುರಾಗಿದೆ.

53 ಶಾಲೆಗಳಲ್ಲಿ ಇಲ್ಲ ಸಂಭ್ರಮ: ದೇಶದೆಲ್ಲೆಡೆ ಆ.15ರಂದು 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮ. ಆದರೆ, ನೀರಿನಲ್ಲಿ ನಿಂತ ಜಿಲ್ಲೆಯ 53 ಶಾಲೆಗಳಲ್ಲಿ ಸ್ವಾತಂತ್ರ್ಯ ಸಂಭ್ರಮ ಆಚರಣೆಗೂ ಅವಕಾಶ ಸಿಗಲಿಲ್ಲ. ಶಾಲೆಗಳು ನೀರಿನಲ್ಲಿ ನಿಂತಿದ್ದು, ಅವುಗಳತ್ತ ತೆರಳಲೂ ಆಗದೇ, ಪರಿಹಾರ ಕೇಂದ್ರ, ಕೆಲವೆಡೆ ಗ್ರಾಪಂ ಕಚೇರಿಗಳ ಎದುರೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಎರಡು ಅಪರೂಪದ ಸಂಭ್ರಮ: ಪ್ರವಾಹದಲ್ಲೂ ದೇಶಭಕ್ತಿ ಹಾಗೂ ವಿಶಿಷ್ಟತೆಯ ಎರಡು ಪ್ರಸಂಗಗಳು ಸ್ವಾತಂತ್ರ್ಯೋತ್ಸವದಂದು ಜಿಲ್ಲೆಯಲ್ಲಿ ನಡೆದವು. ನೂತನ ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿಯ ಆಯುಷ್‌ ಆಸ್ಪತ್ರೆ ಆವರಣದಲ್ಲಿ ನಡೆದ 73ನೇ ಸ್ವಾತಂತ್ರ್ಯ ದಿನಾಚಣೆ ಕಾರ್ಯಕ್ರಮದಲ್ಲಿ ಮನೆ ಮುಳುಗಿ, ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತೆ ಮಹಿಳೆ ಸತ್ಯವ್ವ ಈರಪ್ಪ ಸಿಂಧೂರ ಎಂಬುವವರು ಧ್ವಜಾರೋಹಣ ನೆರವೇರಿಸಿದರು. ಇವರು ಧ್ವಜಾರೋಹಣ ನೆರವೇರಿಸುವಾಗ ಭಾವುಕರಾಗಿದ್ದರು. ಇನ್ನು ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮ ಇಂದಿಗೂ ಜಲಾವೃತಗೊಂಡಿದ್ದು, ಎದೆಮಟ ನಿಂತ ನೀರಿನಲ್ಲೇ ತೆಪ್ಪದ ಮೂಲಕ ಗ್ರಾಮಕ್ಕೆ ತೆರಳಿದ ಶೇಖರ ಪಾಟೀಲ, ಎನ್‌.ಎಂ. ಪಾಟೀಲ ನೇತೃತ್ವದ ಯುವಕರ ತಂಡ, ತೆಪ್ಪದಲ್ಲಿ ನಿಂತುಕೊಂಡೇ ಧ್ವಜಾರೋಹಣ ನೆರವೇರಿಸಿದರು. ತೆಪ್ಪದಲ್ಲಿ ನಿಂತು, ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸುತ್ತ ರಾಷ್ಟ್ರಗೀತೆ ಹಾಡಿದರು.
ಪ್ರವಾಹದಿಂದ ಜಿಲ್ಲೆಯ 138 ಶಾಲೆಗಳು ಜಲಾವೃತಗೊಂಡಿದ್ದು, ಬಿಸಿಯೂಟದ ಅಡುಗೆ ಕೊಠಡಿ ಸಹಿತ 1925 ಕೊಠಡಿಗಳು ಹಾನಿಯಾಗಿವೆ. ಇನ್ನೂ ಕೆಲವೆಡೆ ನೀರು ನಿಂತಿದ್ದು, ಎಷ್ಟು ಕೊಠಡಿಗಳಿಗೆ ಹಾನಿಯಾಗಿದೆ ಎಂಬುದು ಸಮೀಕ್ಷೆ ಮಾಡಿಲ್ಲ. ನೀರು ಕಡಿಮೆಯಾದ ಬಳಿಕ ಸಮಗ್ರ ವರದಿ ತಯಾರಿಸಲಾಗುವುದು.• ಬಿ.ಎಚ್. ಗೋನಾಳ, ಉಪ ನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ
ಪದವಿಪೂರ್ವ ಮತ್ತು ಪದವಿ ಕಾಲೇಜುಗಳು ಬಹುತೇಕ ನಗರ ಭಾಗದಲ್ಲಿವೆ. ಗ್ರಾಮೀಣ ಭಾಗದ ಜಮಖಂಡಿ ತಾಲೂಕಿನ ಹಿಪ್ಪರಗಿ ಮತ್ತು ಬಾದಾಮಿ ತಾಲೂಕಿನ ಪಟ್ಟದಕಲ್ಲ ಕಾಲೇಜುಗಳ ಜಲಾವೃತಗೊಂಡಿವೆ. ಉಳಿದಂತೆ ಯಾವುದೇ ಕಾಲೇಜುಗಳು ಜಲಾವೃತವಾಗಿಲ್ಲ. ಆದರೆ, ಕೆಲವೆಡೆ ಕಾಲೇಜುಗಳ ಕಾಂಪೌಂಡ್‌ ಮತ್ತು ಆವರಣದಲ್ಲಿ ಮಾತ್ರ ನೀರು ನುಗ್ಗಿದೆ.•ಶ್ರೀಧರ ಪೂಜಾರಿ, ಉಪ ನಿರ್ದೇಶಕ, ಪದವಿಪೂರ್ವ ಶಿಕ್ಷಣ ಇಲಾಖೆ
ಎಷ್ಟೇ ಮಳೆ ಬಂದಿದ್ದರೂ ನಮ್ಮ ಶಾಲೆಗೆ ನೀರು ಬಂದಿರಲಿಲ್ಲ. ಈ ಬಾರಿ ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಬಂದಿದ್ದರಿಂದ ನಮ್ಮ ಶಾಲೆ ಜಲಾವೃತಗೊಂಡಿದೆ. ಸ್ವಾತಂತ್ರ್ಯ ದಿನಾಚರಣೆಯ ಹೊತ್ತಿಗೆ ನೀರು ತಗ್ಗುತ್ತದೆ ಎಂದು ಭಾವಿಸಿದ್ದೇವು. ಆದರೆ, ಇಂದಿಗೂ ನೀರು ನಿಂತಿದೆ. ಹೀಗಾಗಿ ನಮ್ಮ ಮುಖ್ಯಾಧ್ಯಾಪಕರು, ಎಲ್ಲ ಶಿಕ್ಷಕರೊಂದಿಗೆ ಗ್ರಾಪಂ ಕಚೇರಿ ಎದುರು ಸ್ವಾತಂತ್ರ್ಯ ದಿನ ಆಚರಿಸಿದ್ದೇವೆ.•ಸಂಗಮೇಶ ಉಟಗಿ, ಶಿಕ್ಷಕ, ಕುಂಬಾರಹಳ್ಳ ಶಾಲೆ

 

•ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.