ಪ್ರವಾಸಿ ವೀಸಾ ದರದಲ್ಲಿ ಬದಲಾವಣೆ
Team Udayavani, Aug 21, 2019, 5:31 AM IST
ನವದೆಹಲಿ: ಭಾರತದ ಪ್ರವಾಸಿ ವೀಸಾ ದರವನ್ನು ಸನ್ನಿವೇಶಕ್ಕೆ ತಕ್ಕಂತೆ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರವಾಸಿಗರ ಸಂಖ್ಯೆಯನ್ನು ಆಧರಿಸಿ ದರ ವ್ಯತ್ಯಾಸ ಮಾಡಲಾಗುತ್ತದೆ. ಹೆಚ್ಚು ಪ್ರವಾಸಿಗರು ಬರುವ ಸಮಯದಲ್ಲಿ ಅಂದರೆ, ಜುಲೈನಿಂದ ಮಾರ್ಚ್ ಅವಧಿಯಲ್ಲಿ ಶುಲ್ಕ ಹೆಚ್ಚಿರಲಿದ್ದು, ಏಪ್ರಿಲ್ನಿಂದ ಜೂನ್ ಅವಧಿಯಲ್ಲಿ ವೀಸಾ ಶುಲ್ಕ ಕಡಿಮೆ ಇರಲಿದೆ ಎಂದು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಹೇಳಿದ್ದಾರೆ. ಏಪ್ರಿಲ್ನಿಂದ ಜೂನ್ ಅವಧಿಯಲ್ಲಿ ಒಂದು ತಿಂಗಳ ವೀಸಾಗೆ 10 ಡಾಲರ್ ಹಾಗೂ ಜುಲೈನಿಂದ ಮಾರ್ಚ್ ಅವಧಿಗೆ 25 ಡಾಲರ್ ಶುಲ್ಕವನ್ನು ವಿಧಿಸಲಾಗುತ್ತದೆ. ಅಲ್ಲದೆ, ಐದು ವರ್ಷದ ವೀಸಾವನ್ನೂ ಪರಿಚಯಿಸಲಾಗುತ್ತಿದ್ದು, ಇದಕ್ಕೆ 80 ಡಾಲರ್ ಶುಲ್ಕ ನಿಗದಿಸಲಾಗಿದೆ.