ಮಾದರಿ ಜಡೇರಿ ಶಾಲೆಗೆ ಮಕ್ಕಳ ಕೊರತೆ!

ಆಕರ್ಷಕ ಉದ್ಯಾನ, ಸುಸಜ್ಜಿತ ಗ್ರಂಥಾಲಯ, ಶೌಚಾಲಯ, ಮೈದಾನ ಹೊಂದಿರುವ ಶಾಲೆ • ಇತರೆ ಶಾಲೆಗೆ ಮಾದರಿ

Team Udayavani, Aug 26, 2019, 2:56 PM IST

kolar-tdy-1

ಬರದಲ್ಲೂ ಮಲೆನಾಡಿನಂತೆ ಕಂಗೊಳಿಸುವ ಶಾಲೆಯ ಉದ್ಯಾನ.

ಕೋಲಾರ: ಗ್ರಾಮಸ್ಥರ ಸಹಕಾರ ಸಿಕ್ಕಿದರೆ ಸರ್ಕಾರಿ ಶಾಲೆಯೊಂದನ್ನು ಮಾದರಿಯಾಗಿ ಮಾರ್ಪಡಿಸಬಹುದು ಎನ್ನುವುದಕ್ಕೆ ತಾಲೂಕಿನ ಜಡೇರಿ ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ. ಈ ಶಾಲೆಯು ಗ್ರಾಮಸ್ಥರು ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ ಸರ್ವಾಂಗೀಣ ಅಭಿವೃದ್ಧಿ ಹೊಂದುತ್ತಿದೆ. ಶಾಲಾಭಿವೃದ್ಧಿ ಸಮಿತಿ, ಗ್ರಾಪಂ ಸದಸ್ಯ ಪ್ರಯತ್ನದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆಯನ್ನು ಪ್ರಗತಿಯತ್ತ ಕೊಂಡ್ಯೊಯಲಾಗಿದೆ.

ಹಳ್ಳಕ್ಕೆ ಮರಳು: ಮುಖ್ಯ ಶಿಕ್ಷಕ ಕೃಷ್ಣಪ್ಪಗೆ ಶಾಲೆ ಮುಂಭಾಗ ಇದ್ದ ದೊಡ್ಡ ಹಳ್ಳ ಶಾಲೆಯ ಅಂದವನ್ನೇ ಕೆಡಿಸಿತ್ತು. ಅದನ್ನು ಮುಚ್ಚಲು ಗ್ರಾಮಸ್ಥರ ಗಮನಕ್ಕೆ ತಂದರು. ಕೃಷ್ಣಪ್ಪರ ಪ್ರಯತ್ನಕ್ಕೆ ಗ್ರಾಮಸ್ಥರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು. 800 ಲೋಡ್‌ ಮಣ್ಣನ್ನು ಈ ಹಳ್ಳಕ್ಕೆ ತಂದು ತುಂಬಿಸಿ ಸಮತಟ್ಟು ಮಾಡಿಸುವಲ್ಲಿ ಗ್ರಾಮಸ್ಥರ ಪಾತ್ರ ದೊಡ್ಡದು.

ಮಾದರಿ ಶಾಲಾ ಉದ್ಯಾನ: ಹೀಗೆ ಸಮತಟ್ಟಾದ ಜಾಗವನ್ನು ಆಕರ್ಷಕವಾದ ಶಾಲಾ ಉದ್ಯಾನ ನಿರ್ಮಿಸಬೇಕೆಂಬ ಕನಸು ಮೊಳೆಯಿತು. ಮೂರು ವರ್ಷಗಳ ನಂತರ ಈ ಕನಸು ಸಾಕಾರಗೊಂಡಿದೆ. ಇದಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ. ಇದೀಗ ಶಾಲಾ ಉದ್ಯಾನದಲ್ಲಿ ವಿವಿಧ ಜಾತಿಯ ಹೂಗಿಡಗಳು, ಹಲಸು, ನೇರಳೆ, ಸಪೋಟ, ಅಂಜೂರ, ದಾಳಿಂಬೆ, ಬಾಳೇಗಿಡಗಳು ನಳನಳಿಸುವಂತಾಗಿದೆ. ಈ ಗಿಡ, ಮರಗಳು ಶಾಲೆಗೆ ವಿಶೇಷ ಕಳೆಯನ್ನು ತಂದು ಕೊಟ್ಟಿವೆ.

ಆಟದ ಮೈದಾನ: ಶಾಲೆ ಮುಂದಿದ್ದ ಹಳ್ಳ ಉದ್ಯಾನವಾಗಿ ಮಾರ್ಪಟ್ಟಿದ್ದಲ್ಲದೆ, ಮಕ್ಕಳ ಆಟದ ಮೈದಾನವಾಗಿಯೂ ಅಭಿವೃದ್ಧಿ ಹೊಂದಿದೆ. ಬೆಂಗಳೂರಿನ ರೋಟರಿ ಸಂಸ್ಥೆಯ ನೆರವಿನಿಂದ ಮಕ್ಕಳ ಆಟೋಪಕರಣಗಳನ್ನು ಉದ್ಯಾನದಲ್ಲಿ ಅಳವಡಿಸ ಲಾಗಿದೆ. ಇವು ಮಕ್ಕಳಲ್ಲಿ ಆಟದ ಆಸಕ್ತಿ ಹೆಚ್ಚಿಸುವಂತೆ ಮಾಡಿರುವುದರ ಜೊತೆಗೆ, ದೈಹಿಕ ಸದೃಢತೆಗೂ ಕಾರಣವಾಗಿದೆ.

ಆಟದ ಜೊತೆಗೆ ಬ್ಯಾಂಡ್‌ಸೆಟ್ ನುಡಿಸಲು ಮಕ್ಕಳು ತರಬೇತಿ ಪಡೆದುಕೊಂಡಿದ್ದಾರೆ. ಗ್ರಂಥಾಲಯದಲ್ಲೂ ವೈವಿಧ್ಯಮಯ ವಿಷಯ ಒಳಗೊಂಡ ಪುಸ್ತಕಗಳಿವೆ. ಇಷ್ಟೆಲ್ಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸೈ ಎನಿಸಿಕೊಳ್ಳುವ ಸಾಧನೆ ಮಾಡುತ್ತಿದ್ದಾರೆ.

ಕೊರತೆಗಳೇ ಇಲ್ಲ: ಸಾಮಾನ್ಯವಾಗಿ ಹಳ್ಳಿಗಾಡಿನ ಸರ್ಕಾರಿ ಶಾಲೆಯಲ್ಲಿ ಕೊರತೆ ಅನ್ನುವುದು ಸಾಮಾನ್ಯ. ಆದರೆ, ಜಡೇರಿ ಸಹಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲ ಸೌಕರ್ಯಗಳ ಕೊರತೆಗಳೇ ಇಲ್ಲ. ಗ್ರಾಮಸ್ಥರು ಕುಡಿಯುವ ನೀರಿಗೆ ಬಳಸುವ ಕೊಳವೆಬಾವಿಯಿಂದ ಶಾಲೆಗೆ ಪ್ರತ್ಯೇಕ ನಲ್ಲಿ ಸಂಪರ್ಕ ನೀಡಿದ್ದಾರೆ. ಈ ನೀರು ಶಾಲಾ ಮಕ್ಕಳ ಬಳಕೆ, ಬಿಸಿಯೂಟ, ಉದ್ಯಾನ ಬೆಳೆಸಲು ಸಹಕಾರಿಯಾಗಿದೆ.

ಶಾಲೆಯಲ್ಲಿ ಸುಸಜ್ಜಿತ ಶೌಚಾಲಯವಿದೆ. ರೋಟರಿ ಸಂಸ್ಥೆಯವರು ಅಳವಡಿಸಿರುವ ಫಿಲ್ಟರ್‌ನಿಂದ ಮಕ್ಕಳಿಗೆ ಶುದ್ಧವಾದ ಕುಡಿಯುವ ನೀರು ಸಿಗುವಂತಾಗಿದೆ. ಶಾಲೆಯ ಕಾಂಪೌಂಡ್‌ ಹಾಗೂ ಗೋಡೆಯ ಮೇಲೆ ಪರಿಸರ ಸ್ನೇಹಿ ಬರಹ ಹಾಗೂ ಚಿತ್ರಗಳನ್ನು ಚಿತ್ರಿಸಿಕೊಡಲು ಗ್ರಾಮಸ್ಥರು ಮುಂದೆ ಬಂದಿದ್ದಾರೆ. ಶೌಚಾಲಯಕ್ಕೆ ಅಗತ್ಯವಾಗಿರುವ ಟೈಲ್ಸ್ ಹಾಕಿಸಲು ರೋಟರಿ ಸಂಸ್ಥೆ ಮುಂದಾಗಿದೆ.

ಮಕ್ಕಳ ಸಂಖ್ಯೆಯೇ ಕಡಿಮೆ!: ಇಷ್ಟೆಲ್ಲ ಸೌಕರ್ಯಗಳಿರುವ ಜಡೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದೇ ದೊಡ್ಡ ಸಮಸ್ಯೆಯಾಗಿದೆ. ಜಡೇರಿ ಗ್ರಾಮದಲ್ಲಿ 150 ಮನೆಗಳಿವೆ. ಈ ಮನೆಗಳ ಮಕ್ಕಳು ಮಾತ್ರವೇ ಶಾಲೆಗೆ ಬರುತ್ತಾರೆ. ಆದರೆ, ಈ ಮನೆಗಳಲ್ಲಿರುವ ಒಟ್ಟು ಮಕ್ಕಳ ಪೈಕಿ ಕೇವಲ ಶೇ.50 ಅಂದರೆ 22 ಮಕ್ಕಳು ಮಾತ್ರವೇ. ಜಡೇರಿ ಶಾಲೆಯ ಒಂದರಿಂದ ಏಳನೇ ತರಗತಿವರೆಗೂ ವ್ಯಾಸಂಗ ಮಾಡುತ್ತಿದ್ದಾರೆ. ಉಳಿದ ಮಕ್ಕಳು ಅಕ್ಕಪಕ್ಕದ ಮತ್ತು ಶ್ರೀನಿವಾಸಪುರದ ಖಾಸಗಿ ಶಾಲೆಗಳಿಗೆ ಶಾಲಾ ವಾಹನಗಳಲ್ಲಿ ತೆರಳುತ್ತಿದ್ದಾರೆ.

ಶಾಲೆಯ ಯಾವುದೇ ಕೊರತೆಯನ್ನು ನಿವಾರಿಸಲು ಒಗ್ಗಟ್ಟಿನಿಂದ ಮುಂದೆ ಬರುತ್ತಿರುವ ಗ್ರಾಮಸ್ಥರು, ಶಾಲೆಯ ದಾಖಲಾತಿ ಪ್ರಮಾಣ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಖಾಸಗಿ ಶಾಲೆಗಳ ಮೇಲೆ ಪೋಷಕರಿಗೆ ಇರುವ ವ್ಯಾಮೋಹವೇ ಇದಕ್ಕೆ ಕಾರಣವಾಗಿದೆ. ಮೂರು ವರ್ಷಗಳ ಹಿಂದೆ 33 ಇದ್ದ ಮಕ್ಕಳ ಸಂಖ್ಯೆ ಇದೀಗ ಕೇವಲ 22ಕ್ಕೆ ಕುಸಿದಿದೆ. ಶಾಲೆಯನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿ, ಮಕ್ಕಳಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುತ್ತಿದ್ದರೂ, ಶಾಲೆಗೆ ಮಕ್ಕಳನ್ನು ಸೇರಿಸಲು ಹಿಂಜರಿಯುತ್ತಿರುವುದು ಕೇವಲ ಜಡೇರಿ ಗ್ರಾಮ ಮಾತ್ರವಲ್ಲದೆ, ಇಡೀ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಯಾಗಿದೆ.

 

● ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.