ಸೌದಿ ದಾಳಿಯಲ್ಲಿ ನಮ್ಮ ಕೈವಾಡವಿಲ್ಲ: ಇರಾನ್ ಸ್ಪಷ್ಟನೆ
Team Udayavani, Sep 19, 2019, 5:00 AM IST
ವಾಷಿಂಗ್ಟನ್/ನವದೆಹಲಿ: ಸೌದಿ ಅರೇಬಿಯಾದ ಅರಾಮ್ಕೋ ತೈಲ ಸಂಸ್ಕರಣಾ ಘಟಕದ ಮೇಲಿನ ದಾಳಿಯ ಹಿಂದೆ ಇರಾನ್ನ ಕೈವಾಡವಿದೆ ಎಂಬ ಆರೋಪ ಕೇಳಿಬಂದಿರುವ ಬೆನ್ನಲ್ಲೇ ಬುಧವಾರ, ಅಮೆರಿಕಕ್ಕೆ ರಾಜತಾಂತ್ರಿಕ ಮಟ್ಟದ ಟಿಪ್ಪಣಿಯೊಂದನ್ನು ಕಳುಹಿಸಿರುವ ಇರಾನ್, “ಸೌದಿಯಲ್ಲಿನ ದಾಳಿಗೂ ನಮಗೂ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ, ನಮ್ಮ ವಿರುದ್ಧ ಸುಖಾಸುಮ್ಮನೆ ಏನಾದರೂ ಕ್ರಮ ಕೈಗೊಂಡರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನೂ ಇರಾನ್ ರವಾನಿಸಿದೆ.
ಇರಾನ್ನ ಈ ಸ್ಪಷ್ಟನೆ ಹೊರತಾಗಿಯೂ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮಾತ್ರ, ಇರಾನ್ ವಿರುದ್ಧ ಇನ್ನಷ್ಟು ನಿರ್ಬಂಧ ವಿಧಿಸುವಂತೆ ಆದೇಶ ಹೊರಡಿಸಿದ್ದಾರೆ. ಇನ್ನೊಂದೆಡೆ, ಟೆಹ್ರಾನ್ನಲ್ಲಿ ಮಾತನಾಡಿದ ಇರಾನ್ ಅಧ್ಯಕ್ಷ ಹಸನ್ ರೊಹಾನಿ, ಸಂಘರ್ಷ ಪೀಡಿತ ದೇಶದಲ್ಲಿ ಹಸ್ತಕ್ಷೇಪ ಮಾಡಿದರೆ ಯುದ್ಧ ಆರಂಭವಾಗಲಿದೆ ಎಂಬ ಎಚ್ಚರಿಕೆಯ ಸಂದೇಶವೆಂಬಂತೆ ಸೌದಿ ತೈಲಾಗಾರದ ಮೇಲೆ ಯೆಮೆನ್ ಬಂಡುಕೋರರು ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಈ ನಡುವೆಯೇ, ಸೌದಿ ಅರೇಬಿಯಾವು ಅಮೆರಿಕ ನೇತೃತ್ವದ ಮೈತ್ರಿಗೆ ಬುಧವಾರ ಸೇರ್ಪಡೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ