ಉಪಚುನಾವಣೆಗೆ “ಸಂಘಟನೆ’ ವಿಶ್ವಾಸ ಮುಖ್ಯ


Team Udayavani, Sep 24, 2019, 3:08 AM IST

bjp-logo

ಬೆಂಗಳೂರು: ರಾಜ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಿಣಾಮಕಾರಿ ಕಾರ್ಯ ನಿರ್ವಹಣೆ ಮೂಲಕ ಬಿಜೆಪಿ ಭರ್ಜರಿ ಜಯ ದಾಖಲಿಸುವಲ್ಲಿ ಸಂಘಟನೆಯ “ಕೇಡರ್‌’ ಮಹತ್ವದ ಪಾತ್ರ ವಹಿಸಿತ್ತು. ಇದೀಗ ಎದುರಾಗಿರುವ ಉಪಚುನಾವಣೆಯಲ್ಲೂ “ಕೇಡರ್‌’ ಅಭ್ಯರ್ಥಿಗಳ ಪರ ಅಷ್ಟೇ ಸಕ್ರಿಯವಾಗಿ ಪ್ರಚಾರ ನಡೆಸುವುದೇ ಎಂಬ ಪ್ರಶ್ನೆ ಪಕ್ಷದಲ್ಲೇ ಮೂಡಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗಾಗಿ “ತ್ಯಾಗ’ ಮಾಡಿದವರ ಆಶೋತ್ತರಗಳಿಗೆ ಸಿಎಂ ಯಡಿಯೂರಪ್ಪ ಸೇರಿ ಸಂಪುಟ, ಸರ್ಕಾರ ಸ್ಪಂದಿಸುತ್ತಿದೆ ಎಂಬ ಮಾತಿದೆ. ಸದ್ಯ ಎದುರಾಗಿರುವ ಉಪಚುನಾವಣೆಗೆ ಹಿಂದಿನ ಚುನಾವಣೆಗಳಲ್ಲಿ ಪ್ರತಿಸ್ಪರ್ಧಿಯಾಗಿದ್ದವರೇ ಅಭ್ಯರ್ಥಿ ಯಾ ದರೆ ಇಲ್ಲವೇ ಅವರ ಆಪೆ¤àಷ್ಟರು ಅಭ್ಯರ್ಥಿ ಯಾದರೆ ಹೇಗೆ ಸಂಘಟನೆ ಸ್ಪಂದಿಸಲಿದೆ ಎಂಬ ಕುತೂ ಹಲ ಮೂಡಿದೆ. ಸಂಘಟನೆಯ ವಿಶ್ವಾಸ ಗಳಿಸಿಕೊಂಡು ಮುಂದೆ ತಲೆ ಎತ್ತಬಹುದಾದ ಭಿನ್ನಮತ ಭುಗಿಲೇಳ ದಂತೆ ನಿಯಂತ್ರಿಸಿ ಗೆಲುವಿನ ದಡ ಸೇರಬೇಕಾದ ಸವಾಲು ರಾಜ್ಯ ಬಿಜೆಪಿ ನಾಯಕರ ಮುಂದಿದೆ.

ರಾಜ್ಯದ ಬಹುತೇಕ ಕಡೆ ಬಿಜೆಪಿ ಸಂಘಟನೆ ನೆಲೆಯೂ ರಿದ್ದು, ನಿಷ್ಠೆಯಿಂದ ಪಕ್ಷದ ವರ್ಚಸ್ಸು ಹೆಚ್ಚಿಸಲು ಶ್ರಮಿಸುವ ಜತೆಗೆ ಸಂಘಟನೆಗೂ ಒತ್ತು ನೀಡುವ ಕೇಡರ್‌ ಇದೆ. ಜನರೊಂದಿಗೆ ನೇರವಾಗಿ ವ್ಯವಹರಿಸುವುದರಿಂದ ಸಂಘಟನೆ ದೃಷ್ಟಿಯಿಂದ ಪರಿಣಾಮಕಾರಿ ಎನಿಸಿದೆ. ಸಾಮಾನ್ಯವಾಗಿ ಚುನಾ ವಣಾ ರಾಜಕೀಯದಲ್ಲಿ ತೆರೆಮರೆಯಲ್ಲೇ ಮಹ ತ್ವದ ಪಾತ್ರ ವಹಿಸುವ ಸಂಘಟನೆಯು ತೆರೆಯ ಮುಂದೆ ಕಾಣಿಸಿಕೊಳ್ಳುವುದು ಅಪರೂಪ.

ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಘಟನೆಯು ವ್ಯಾಪಕವಾಗಿ ಬಿಜೆಪಿ ಪರ ಪ್ರಚಾರ ನಡೆಸಿತ್ತು. ರಾಷ್ಟ್ರೀಯತೆ ಕಾರಣಕ್ಕೆ ಪಕ್ಷವನ್ನು ಬೆಂಬಲಿ ಸು ವಂತೆ ಜನರನ್ನು ಪ್ರೇರೇಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿ, ಬಿಜೆಪಿ ಭರ್ಜರಿ ಜಯ ದಾಖಲಿಸು ವಲ್ಲಿಯೂ ಮಹತ್ವದ ಪಾತ್ರ ವಹಿಸಿತ್ತು. ಇದೀಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದು, ವಿಧಾನಸಭೆ ಯಲ್ಲಿ ಸರಳ ಬಹುಮತ ಗಳಿಸಲು ಸದ್ಯ ಎದುರಾಗಿ ರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಿರ್ಣಾಯಕ ಎನಿಸಿದೆ. ಮುಂದಿನ ಮೂರೂವರೆ ವರ್ಷ ರಾಜ್ಯದಲ್ಲಿ ಬಿಜೆಪಿ ನಿರಾತಂಕವಾಗಿ ಆಡಳಿತ ನಡೆಸಲು ಕನಿಷ್ಠ ಏಳು ಸ್ಥಾನ ಗೆಲ್ಲಬೇಕಿದೆ.

ಸದ್ಯ ಅನರ್ಹತೆಗೊಂಡ ಶಾಸಕರ ಪರವಾಗಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದರೆ ಇಲ್ಲವೇ ಪ್ರಕರಣದ ವಿಚಾರಣೆ ಜತೆ ಜತೆಗೆ ಉಪಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದರೆ ಬಹುತೇಕರು ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಇದಕ್ಕೆ ಸಂಘಟನೆ ಹೇಗೆ ಸ್ಪಂದಿಸಲಿದೆ ಎಂಬುದು ಮುಖ್ಯ. ಏಕೆಂದರೆ ಅನರ್ಹ ಶಾಸಕರೆಲ್ಲ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಮಣಿಸಿದವರೇ ಆಗಿದ್ದಾರೆ. ಬದಲಾದ ಸನ್ನಿವೇಶದಲ್ಲಿ ಅವರೇ ಅಭ್ಯರ್ಥಿಗಳಾದರೆ ಅವರ ಪರವಾಗಿ ಎಷ್ಟರ ಮಟ್ಟಿಗೆ ಮತ ಯಾಚಿಸಲಿದೆ ಎಂಬ ಪ್ರಶ್ನೆ ನಾಯಕರಲ್ಲೇ ಮೂಡಿದೆ.

ಒಂದೊಮ್ಮೆ ಅನರ್ಹಗೊಂಡ ಶಾಸಕರಿಗೆ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ಅವರು ಸೂಚಿಸಿದವರಿಗೆ ಟಿಕೆಟ್‌ ನೀಡಲು ಬಿಜೆಪಿ ನಿರ್ಧರಿಸಿದೆ ಎಂಬ ಮಾಹಿತಿಯಿದೆ. ಇದು ಸಹ ಸಂಘಟನೆ ಮೇಲೆ ಗಂಭೀರ ಪರಿಣಾಮ ಬೀರುವ ಲಕ್ಷಣ ಕಾಣುತ್ತಿದೆ. ಬಿಜೆಪಿ ಸರ್ಕಾರ ರಚನೆ ಗಾಗಿ ತ್ಯಾಗ ಮಾಡಿದರು ಎಂಬ ಕಾರಣಕ್ಕೆ ಅನರ್ಹತೆ ಗೊಂಡ ಶಾಸಕರು ಕಣಕ್ಕಿಳಿದರೆ ಒಪ್ಪಬಹುದೇನೋ. ಆದರೆ ಅವರ ಕುಟುಂಬದವರು ಇಲ್ಲವೇ ಅವರು ಸೂಚಿಸಿದವರನ್ನು ಅಭ್ಯರ್ಥಿಗಳನ್ನಾಗಿ ಮಾಡಿದರೆ ಕಾರ್ಯಕರ್ತರ ಗತಿಯೇನು ಎಂಬ ಹಲವೆಡೆ ಪ್ರಶ್ನಿಸಲಾರಂಭಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸಂಘಟನೆಯ ಕೆಲವರಿಂದ ವಿರೋಧ: 15 ಕ್ಷೇತ್ರಗಳ ಪೈಕಿ ಬಹುತೇಕ ಕಡೆ ಅನರ್ಹತೆಗೊಂಡ ಶಾಸಕರು ಅಭ್ಯರ್ಥಿಗಳಾಗಲು ಇಲ್ಲವೇ ಅವರ ಕುಟುಂಬದವರು ಅಭ್ಯರ್ಥಿಯಾಗಲು ಪಕ್ಷದ ಕಾರ್ಯಕರ್ತರು, ಸಂಘಟನೆಯ ಕೆಲವರ ವಿರೋಧವಿದೆ. ಹಿರೇಕೆರೂರು, ಯಲ್ಲಾಪುರ, ಮಹಾಲಕ್ಷ್ಮೀ ಲೇಔಟ್‌, ಕೆ.ಆರ್‌.ಪುರ, ಶಿವಾಜಿನಗರ ಸೇರಿ ಕೆಲ ಕ್ಷೇತ್ರಗಳಲ್ಲಿ ತೀವ್ರ ಅಪಸ್ವರ ಕೇಳಿಬಂದಿ ರುವುದು ಗಮನಕ್ಕೆ ಬಂದಿದೆ. ಹಾಗೆಂದು ಯಾರೊಬ್ಬರು ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆ ಇಲ್ಲ. ಹಿರಿಯ ನಾಯಕರು ಸಂಘಟನೆಯ ವಿಶ್ವಾಸವನ್ನು ಗಳಿಸಿ ಮುಂದುವರಿಯಬೇಕಿದೆ ಎಂದು ಬಿಜೆಪಿ ಸಂಘಟನೆಯ ಪ್ರಮುಖರೊಬ್ಬರು ತಿಳಿಸಿದರು.

ನಾಯಕರು ಶಿಸ್ತು ಪಾಲಿಸಬೇಕು: ಪಕ್ಷದ ಸಿದ್ಧಾಂತ, ಶಿಸ್ತು ಪರಿಪಾಲಿಸುತ್ತಾ ಎದುರಾಳಿಗಳ ವಿರುದ್ಧ ನ್ಯಾಯಸಮ್ಮತ ಹೋರಾಟ ನಡೆಸಿ ಕೊಂಡು ಬಂದವರ ಮನಸ್ಸಿಗೂ ನೋವಾಗದಂತೆ ಪಕ್ಷದ ಹಿರಿಯ ನಾಯಕರು ನೋಡಿಕೊಳ್ಳಬೇಕು. ನಮ್ಮ ಮೂಲ ಸಿದ್ಧಾಂತದಂತೆ ನಡೆಸಿದ ಹೋರಾಟದಿಂದ ಹಿಂದೆ ಸರಿಯುವ ಇಲ್ಲವೇ ರಾಜಿಯಾಗುವಂತಾದರೆ ನಮಗೂ ಇತರೆ ಪಕ್ಷಗಳಿಗೂ ವ್ಯತ್ಯಾಸವಿರದು. ಈ ಅಂಶಗಳನ್ನು ಹಿರಿಯ ನಾಯಕರ ಗಮನಕ್ಕೆ ತರಲಾಗಿದೆ. ಕಾರ್ಯಕರ್ತರಿಗೆ ಶಿಸ್ತು ಹೇಳುವ ನಾಯಕರೂ ಶಿಸ್ತು ಪಾಲನೆಗೆ ಒತ್ತು ನೀಡಬೇಕು ಎಂದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತ ಕೆಲ ಅಭ್ಯರ್ಥಿಗಳು ಹೇಳಿದ್ದಾರೆ.

* ಎಂ. ಕೀರ್ತಿಪ್ರಸಾದ್‌

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.