ಛಲದಂಕಮಲ್ಲ: ತಾನು ಕಟ್ಟಿದ್ದ ದೈತ್ಯ ಆ್ಯಪಲ್ ಕಂಪನಿಯಿಂದಲೇ ಹೊರಬಿದ್ದಿದ್ದ ಸ್ಟೀವ್ ಜಾಬ್ಸ್!


ಮಿಥುನ್ ಪಿಜಿ, Jun 23, 2021, 8:45 AM IST

steave jobs

ಎಲ್ಲರನ್ನೂ ಖುಷಿ ಪಡಿಸಬೇಕು ಅನ್ನುವ ಯೋಚನೆ ನಿಮ್ಮದಾಗಿದ್ದರೆ, ನಾಯಕರಾಗುವ ಕನಸು ಬಿಟ್ಟುಬಿಡಿ. ಐಸ್ ಕ್ರೀಮ್ ವ್ಯಾಪಾರ ಶುರು ಹಚ್ಚಿಕೊಳ್ಳಿ – ಹೀಗೆಂದವರು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದ ‘ಆ್ಯಪಲ್’ನ ಸಹ ಸಂಸ್ಥಾಪಕರಾಗಿದ್ದ ಸ್ಟೀವ್ ಜಾಬ್ಸ್.

ಆ್ಯಪಲ್ ಕಂಪನಿ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವ ಮೊಟ್ಟ ಮೊದಲ ಹೆಸರು ಸ್ಟೀವ್ ಜಾಬ್ಸ್. ಆತನ ಹೆಸರು ಕೇಳಿದರೆ ಜಗತ್ತೆ ರೋಮಾಂಚನಗೊಳ್ಳುತ್ತದೆ. ಅವರು ಕಾಲೇಜು ಮೆಟ್ಟಿಲೇರಿರಲಿಲ್ಲ. ಆದರೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಈ ದಿಗ್ಗಜ ತಾನು ಉನ್ನತ ಶಿಕ್ಷಣವನ್ನು ಕಲಿತಿರಲಿಲ್ಲವಷ್ಟೇ ಅಲ್ಲ, ತಮ್ಮ ಹಿರಿಯ ಪುತ್ರಿಯನ್ನು ಸಹ ಕಾಲೇಜಿಗೆ ಹೋಗಬೇಡ ಎಂದಿದ್ದರಂತೆ!

ಸ್ಟೀವ್ ಬದುಕಿನ ಕಥೆ ನಿಜಕ್ಕೂ ಒಂದು ದುರಂತ. ಅವಿವಾಹಿತಳಾಗಿದ್ದ ಆತನ ತಾಯಿ ಕಾಲೇಜಿಗೆ ಹೋಗುವಾಗಲೇ ಗರ್ಭ ಧರಿಸಿದ್ದಳು. ಹಣಕಾಸು ಸ್ಥಿತಿ ಉತ್ತಮವಾಗಿರಲಿಲ್ಲದ ಕಾರಣ ಮಗು ಗರ್ಭದಲ್ಲಿರುವಾಗಲೇ ದತ್ತು ನೀಡಬೇಕೆಂಬ ನಿರ್ಧಾರಕ್ಕೆ ಬಂದ ಆಕೆ “ದತ್ತು ಸ್ವೀಕರಿಸುವ ಪೋಷಕರು ಪದವೀಧರರಾಗಿರಬೇಕೆಂಬ“ ಷರತ್ತನ್ನು ವಿಧಿಸಿದಳು. ಕೆಲವು ದಿನಗಳಲ್ಲಿ ಹೆಣ್ಣು ಮಗು ಬೇಕೆಂಬ ಆಸೆಯಿದ್ದ ಪದವೀಧರ ದಂಪತಿ ದತ್ತು ತೆಗೆದುಕೊಳ್ಳಲು ಮುಂದಾಯಿತು. ಆದರೆ ಹುಟ್ಟಿದ್ದು ಗಂಡು ಮಗುವಾದ್ದರಿಂದ ಅವರು ಹಿಂದೆ ಸರಿದಿದ್ದರು. ನಂತರದಲ್ಲಿ ಕ್ಯಾಲಿಪೋರ್ನಿಯಾದ ದಂಪತಿ ದತ್ತು ಸ್ವೀಕರಿಸಲು ಮುಂದಾದರೂ ಅವರು ಪದವೀಧರರು ಆಗಿರಲಿಲ್ಲ. ಹಾಗಾಗಿ ದತ್ತು ನೀಡಲು ಒಪ್ಪಿರಲಿಲ್ಲ. ಅದರೂ ಹರಸಾಹಸ ಮಾಡಿ ಒಪ್ಪಿಸಿ  ಸ್ಟೀವನ್ ಪೌಲ್ ಜಾಬ್ಸ್  ಎಂಬ ಹೆಸರಿಟ್ಟರು.

ಬಾಲ್ಯ ಕಳೆದು ಕಾಲೇಜು ಮೆಟ್ಟಿಲೇರಿದ್ದ ಸ್ಟೀವ್ ಗೆ ಓದು ರುಚಿಸಲಿಲ್ಲ. ಬದಲಾಗಿ ಬೇರೆನಾದರೂ ಸಾಧಿಸಬೇಕೆಂದು ಹೊರಟ ಅವರು ಕ್ಯಾಲಿಗ್ರಫಿ ಕಲಿಯುಲು ಮುಂದಾಗಿದ್ದರು. ಮುಂದೆ ಇದೇ ಕ್ಯಾಲಿಗ್ರಫಿ ತನ್ನ ಬದುಕಿನ ಫಥವನ್ನು ಬದಲಾಯಿಸಲಿದೆ ಎಂಬುದು ಆ ಕ್ಷಣದಲ್ಲಿ ತಿಳಿದಿರಲಿಲ್ಲವೇನೋ! ನಂತರ ಜೀವನದಲ್ಲಿ ಏನು ಮಾಡಬೇಕೆಂದು ತಿಳಿಯದೆ ಗೊಂದಲಕ್ಕೀಡಾಗಿ, ತರಗತಿಯಲ್ಲಿ ಕುಳಿತುಕೊಳ್ಳಲು ಆಗದೆ ಹೊರ ನಡೆದರು. ಒಪ್ಪತ್ತಿನ ಊಟಕ್ಕೂ ಕಷ್ಟಪಡುವಂತಾಯಿತು.  ಪ್ರತಿ ಭಾನುವಾರ 7ಕೀ ಮಿ ದೂರಕ್ಕೆ ನಡೆದು ಶ್ರೀ ಕೃಷ್ಣ ದೇವಾಲಯಲ್ಲಿ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದರು.

ಹಲವಾರು ಕಂಪೆನಿಗಳಿಗೆ ತಮ್ಮ ಸಿ.ವಿ (ರೆಸ್ಯೂಮೆ) ಕಳುಹಿಸಿದ್ದರು ಕೂಡ  ಕೆಲಸ ದಕ್ಕಿರಲಿಲ್ಲ. ಮುಂದೆ ಅಟಾರಿ ಎನ್ನುವ ಕಂಪೆನಿಯೊಂದರಿಂದ ಆತನಿಗೆ ಬುಲಾವ್ ಬಂದಿತ್ತು. ಸೋಜಿಗ ಎಂದರೇ ಆತ ಬರೆದಿದ್ದ ಸಿ.ವಿಯಲ್ಲಿ ಹಲವಾರು ತಪ್ಪುಗಳಿದ್ದವು. ಮುಂದೆ ಇದೆ ಸಿ.ವಿ 50 ಸಾವಿರ ಡಾಲರ್ (32 ಲಕ್ಷ ರೂ.)ಗೆ ಹರಾಜಾಗಿತ್ತು.

ಅಟಾರಿ ಕಂಪೆನಿಯಲ್ಲಿ ವೋಝ್ನಿಯಾಕ್ ಎಂಬಾತ ಸ್ಟೀವ್ ಗೆ ಪರಿಚಯವಾದ. ತಾಂತ್ರಿಕ ವಿಷಯಗಳಲ್ಲಿ ಆತ ಬಹಳ ಪರಿಣತನಾಗಿದ್ದ. ಇತ್ತ ಜಾಬ್ಸ್ ಕೂಡ ತಾಂತ್ರಿಕ ವಿಷಯದ ಜೊತೆಗೆ ಮಾರ್ಕೆಟಿಂಗ್ ನಲ್ಲೂ ಉತ್ತಮ ಜ್ಙಾನ ಹೊಂದಿದ್ದರಿಂದ 1976 ಏಪ್ರಿಲ್ 1ರಂದು ಇವರಿಬ್ಬರೂ ಸೇರಿಕೊಂಡು ಆರಂಭಿಸಿದ್ದೆ  ಆ್ಯಪಲ್ ಕಂಪ್ಯೂಟರ್. ತನ್ನ 21ನೇ ವಯಸ್ಸಿನಲ್ಲಿ ಆ್ಯಪಲ್ ಕಂಪನಿಯನ್ನು ಶುರುಮಾಡಲು ಸ್ಟೀವ್ ಗೆ ಕತ್ತಲೆಯೇ ದಾರಿಯಾಯಿತು. ಕಂಪನಿ  ಆರಂಭವಾಗಿದ್ದು ಕೂಡ ಜಾಬ್ಸ್ ಮನೆಯ ಗ್ಯಾರೇಜ್ ನಲ್ಲಿ. ಅಂದು ಕಾಲೇಜ್ ನಿಂದ ಹೊರನಡೆಯದೆ ಇದ್ದಿದ್ದರೆ, ಕ್ಯಾಲಿಗ್ರಫಿ ಕಲಿಯದೇ ಇದ್ದಿದ್ದರೆ, ಇಂದು ವ್ಯಯಕ್ತಿಕ ಗಣಕಯಂತ್ರದಲ್ಲಿ ( ಪರ್ಸನಲ್ ಕಂಪ್ಯೂಟರ್ ) ಆದ್ಬುತವಾದ ಟೈಪೋಗ್ರಫಿ ಸೇರಿಸಲು ಸಾಧ್ಯವೇ ಆಗುತಿರಲ್ಲಿಲ್ಲ. ಇದನ್ನೆ  ಮೈಕ್ರೋಸಾಫ್ಟ್ ನಕಲು ಮಾಡಿ ವಿಶ್ವದ್ಯಾಂತ ಹೆಸರು ಮಾಡಿಕೊಂಡಿತ್ತು.

ಕಂಪೆನಿ ರೂಪಿಸಿದ ಆ್ಯಪಲ್ 1 ಮತ್ತು ಆ್ಯಪಲ್ 2 ಒಳ್ಳೆಯ ಹೆಸರು ಮತ್ತು ಹಣ ತಂದುಕೊಟ್ಟವು. ಆದರೇ 1981 ರಲ್ಲಿ ದುರದೃಷ್ಟವಶಾತ್ ವೋಝ್ನಿಯಾಕ್ ವಿಮಾನ ಅಪಘಾತವೊಂದರಲ್ಲಿ ಗಾಯಗೊಂಡರು. ತದನಂತರದಲ್ಲಿ ಸ್ಟೀವ್ ಜಾಬ್ಸ್ ಕಂಪೆನಿಯ ಸಿಇಓ ಆಗಿ ಜವಾಬ್ದಾರಿ ವಹಿಸಿಕೊಂಡರು. ತನ್ನ ಕಂಪನಿಯನ್ನು ಇನ್ನಷ್ಟು ವಿಸ್ತಾರಗೊಳಿಸಲು ಸ್ಟೀವ್ ಪೆಪ್ಸಿ ಕಂಪೆನಿಯ ಸಿಇಓ ಜಾನ್ ಸ್ಕೂಲಿಯ ಸಹಾಯಯಾಚಿಸಿದ. ಆದರೇ   ಆ ಕಾಲದಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿದ್ದ ಪೆಪ್ಸಿ ಯನ್ನು ಬಿಟ್ಟು ಬರಲು ಯಾರಿಗೆ ತಾನೆ ಮನಸ್ಸಾದೀತು. ಆದರೂ ಸ್ಟೀವ್ ಜಾಬ್ಸ್ ನ ಉತ್ಸಾಹ ಪರಿಗಣಿಸಿ 1983 ರಲ್ಲಿ ಜಾನ್ ಸ್ಕೂಲಿ ಅ್ಯಪಲ್ ಸೇರಿಕೊಂಡರು. 1984ರಲ್ಲಿ ಅ್ಯಪಲ್ ಕಂಪನಿ ಆಕರ್ಷಕ ಟಿವಿ ಜಾಹೀರಾತೊಂದನ್ನು ಹೊರತಂದಿತು. ಇದಾಗಿ ಎರಡು ದಿನಗಳಲ್ಲೆ ಅ್ಯಪಲ್ ಕಂಪೆನಿಯ ಷೇರುದಾರರ ಸಭೆಯಲ್ಲಿ ಮ್ಯಾಕಿಂತೋಷ್ ಕಂಪ್ಯೂಟರ್ (Macintosh ಆಪರೇಟಿಂಗ್ ಸಿಸ್ಟಂ) ಅನ್ನು ಅನಾವರಣಗೊಳಿಸಿದರು. ನಾವು ಇಂದು ಬಳಸುತ್ತಿರುವ ಮೌಸ್ ಮೊದಲಿಗೆ ಬಳಕೆಗೆ ಬಂದಿದ್ದೆ ಮ್ಯಾಕಿಂತೋಷ್ ನೊಂದಿಗೆ.

ಇಂತಹ ಅದ್ಭುತ ಸಂಶೋಧನೆಯಿಂದ ಅ್ಯಪಲ್ 2 ಶತಕೋಟಿ ಡಾಲರ್ ಮೌಲ್ಯದ ಕಂಪೆನಿಯಾಗಿ ಹೊರಹೊಮ್ಮಿತು. ಆ ಕಾಲಕ್ಕೆ 4000 ಕೆಲಸಗಾರರು ಇರುವ ಕಂಪೆನಿಯಾಗಿ ಆ್ಯಪಲ್ ಅನ್ನು ದೊಡ್ಡ ಮಟ್ಟಕ್ಕೆ ಕಟ್ಟಿದರು. ಈ ನಡುವೆ ಸ್ಟೀವ್ ಮತ್ತು ಸ್ಕೂಲಿ ನಡುವೆ ಭಿನ್ನಭಿಪ್ರಾಯ ಕಾಣಿಸಿಕೊಂಡಿತು. ಅವರೇ ಸ್ಥಾಪಿಸಿದ ಕಂಪೆನಿಯಿಂದ ಅವರನ್ನೇ ತೆಗೆದರೆ ಏನಾಗಬಹುದು? ಅಡಳಿತ ಮಂಡಳಿಯ ಸದಸ್ಯರು ಕೂಡ ಸ್ಕೂಲಿ ಪರ ನಿಂತ ಕಾರಣ ಕಂಪೆನಿಯ ಸ್ಥಾಪಕನಾದ ಜಾಬ್ಸ್ ಅವರನ್ನೆ ಹೊರಹಾಕಲಾಯಿತು.

ಛಲಬಿಡದ ಸ್ಟೀವ್ ಜಾಬ್ಸ್ ಕಂಪ್ಯೂಟರ್ ಹಾರ್ಡವೇರ್ ಮತ್ತು ಸಾಫ್ಟವೇರ್ ತಯಾರಿಸುವ ಇನ್ನೊಂದು ಕಂಪನಿಯನ್ನು ಹುಟ್ಟುಹಾಕಲು ಯೋಚಿಸಿ, ಮುಂದಿನ 5 ವರುಷಗಳಲ್ಲಿ ನೆಕ್ಸ್ಟ್ (NEXT) ಎಂಬ ಕಂಪೆನಿ ಪ್ರಾರಂಭಿಸಿದ. ಮಾತ್ರವಲ್ಲದೆ ಜಾರ್ಜ್ ಲುಕಾಸ್ ಎಂಬವರಿಂದ ಪಿಕ್ಸರ್ ಎಂಬ ಡಿಜಿಟಲ್ ಗ್ರಾಫಿಕ್ಸ್ ಕಂಪೆನಿಯನ್ನು ಖರೀದಿ ಮಾಡಿದ. “Pixaar ಮೊದಲ ಅನಿಮೇಷನ್ ಚಲಚಿತ್ರ Toystory ತಯಾರಿಸಿತು ಮತ್ತು ಪ್ರಪಂಚದಲ್ಲೇ ಬೆಸ್ಟ್ ಅನಿಮೇಷನ್ ಸ್ಟುಡಿಯೋ ಆಗಿ ರೂಪಾಂತರಗೊಂಡಿತು. ಇದನ್ನು ಕಂಡು ಡಿಸ್ನಿ ಕಂಪೆನಿ 7.4 ಶತಕೋಟಿ ಡಾಲರ್ ಕೊಟ್ಟು ಪಿಕ್ಸರ್ ಅನ್ನು ಖರೀದಿ ಮಾಡಿತು. ಸ್ಟೀವ್ ಜಾಬ್ಸ್ ಡಿಸ್ನಿಯ ಅತಿ ದೊಡ್ಡ ಪಾಲುಗಾರರಲ್ಲೊಬ್ಬರಾಗಿದ್ದರು.

ಅತ್ತ ಜಾಬ್ಸ್ ಅನುಪಸ್ಥಿತಿಯಲ್ಲಿ ಆ್ಯಪಲ್ ಕಂಪೆನಿ ನಷ್ಟವನ್ನು ಅನುಭವಿಸಲು ಆರಂಭಿಸಿತು. ಮತ್ತೆ ಆ್ಯಪಲ್ ತಲೆಯೆತ್ತಬೇಕಾದರೆ ಜಾಬ್ಸ್ ನ ನೆಕ್ಸ್ಟ್ ಕಂಪೆನಿಯ ಜೊತೆ ಕೈ ಜೋಡಿಸುವುದು ಅನಿವಾರ್ಯವಾಯಿತು. 1997 ರಲ್ಲಿ ನೆಕ್ಸ್ಟ್ ಅನ್ನು ಖರೀದಿ ಮಾಡಿದ ಆ್ಯಪಲ್, ಜಾಬ್ಸ್ ಅವರನ್ನು ಕಂಪೆನಿಯ ಸಿಇಓ ಆಗಿ ನೇಮಕ ಮಾಡಿತು. ಅದೃಷ್ಟ ಮತ್ತೆ ಸ್ಟೀವ್ ಜಾಬ್ಸ್  ಹಿಂದೆ ಬಿದ್ದಿತು. ಆ್ಯಪಲ್ ನಲ್ಲಿ ಮತ್ತೆ ಹೊಸ ಆವಿಷ್ಕಾರದ ದಿನಗಳು ಪ್ರಾರಂಭವಾಯಿತು.

ಆ್ಯಪಲ್ ಗೆ ಹಿಂದಿರುಗಿದ ಜಾಬ್ಸ್ Mac OS X  ಹೊಸ ಅಪರೇಟಿಂಗ್ ಸಿಸ್ಟಮ್ ಅನ್ನು ಹೊರತರುವ ಮೂಲಕ ಕಂಪೆನಿಗೆ ಮತ್ತೆ ಜೀವ ತುಂಬಲಾರಂಭಿಸಿದ. 1997 ರಲ್ಲಿ ಆತ ರೂಪಿಸಿದ ಐ ಮ್ಯಾಕ್ ಕಂಪ್ಯೂಟರ್ ಜಗತ್ತಿನ ಅತ್ಯಂತ ಹಗುರವಾದ ಪಿಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2001 ರಲ್ಲಿ ಜಾರಿಗೆ ತಂದ ಐ ಪಾಡ್ ಸಂಗೀತವನ್ನು ಆಲಿಸುವ ಪ್ರಕ್ರಿಯೆಗೆ ಹೊಸ ಅರ್ಥ ನೀಡಿತು. ಐ ಟ್ಯೂನ್ಸ್ ಸ್ಟೋರ್ ಹೊಸ ಶಕೆಯನ್ನು ಆರಂಭಮಾಡಿತು. 2007 ರಲ್ಲಿ ಜಾರಿಗೆ ತಂದ ಐ ಫೋನ್  ಜಗತ್ತಿನ ಮೊಬೈಲ್ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯಿತು. ಅದನ್ನು ಖರೀದಿಸಲು ಜನರು ಸಾಲುಗಟ್ಟಿ ನಿಂತಿದ್ದರು.

ಆ್ಯಪಲ್ ನಿಂದ ಹೊರ ಬರದಿದ್ದರೆ, ಐಪಾಡ್, ಐಫೋನ್…. ಹೀಗೆ ಹೊಸ ಅವಿಷ್ಕಾರಗಳು ನಡೆಯುತ್ತಲೇ ಇರುತ್ತರಿರಲಿಲ್ಲವೇನೋ ! ಅವರ ಸಾಧನೆಯನ್ನು ಪರಿಗಣಿಸಿ ಬ್ಲೆಂಡರ್ ಮ್ಯಾಗಜಿನ್ ಜಾಬ್ಸ್ ಅವರನ್ನು ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿ ಎಂದು ಆ ಕಾಲದಲ್ಲಿ ಕರೆದಿತ್ತು. 75 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿ ಆ ಬಿರುದು ನೀಡಲಾಗಿತ್ತು. ಸ್ಟೀವ್ ಕಾಲೇಜು ಓದದಿದ್ದರೂ, ಜಗತ್ತಿನ ಅತ್ಯುತ್ತಮ ಕಾಲೇಜುಗಳು ಜಾಬ್ಸ್‌ ಅವರನ್ನು ಉಪನ್ಯಾಸಕ್ಕಾಗಿ ಕರೆಯುತ್ತಿದ್ದವು. ಅಂತಹ ಕಾಲೇಜುಗಳಲ್ಲಿ ವಿಶ್ವವಿಖ್ಯಾತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವೂ ಒಂದು. ಜಾಬ್ಸ್ ಮಾಡುವ ಭಾಷಣಗಳು “Stevenotes” ಎಂದೇ ಪ್ರಸಿದ್ಧಿಯಾದವು.

ಜಾಬ್ಸ್ ಜೀವನಶೈಲಿ ವಿಚಿತ್ರವಾಗಿದ್ದವು. ಪ್ರತಿದಿನವೂ ಬೆಳಗ್ಗೆ ಎದ್ದು ಕನ್ನಡಿಯ ಮುಂದೆ ನಿಂತು, ಇವತ್ತೇ ನನ್ನ ಜೀವಮಾನದ ಕಡೆಯ ದಿನ ಎಂದಾಗಿದ್ದರೆ ಇಂದು ಮಾಡಲು ಹೊರಟಿರುವ ಕೆಲಸವನ್ನು ಮಾಡುತ್ತಿದ್ದೆನೇ? ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಿದ್ದರು. ಏನಾದರೂ ಯೋಚಿಸುವ ಸಂದರ್ಭದಲ್ಲಿ ಕಾಲಿಗೆ ಚಪ್ಪಲಿ ಅಥವಾ ಶೂ ಧರಿಸುವುದನ್ನು ಇಷ್ಟಪಡುತ್ತಿರಲಿಲ್ಲ. ತಮ್ಮ ಕೊನೆ ದಿನಗಳವರೆಗೂ ಕಠಿಣ ಡಯಟ್ ಮಾಡಿ, ಕೇವಲ ತರಕಾರಿ ಮತ್ತು ಹಣ್ಣುಗಳನ್ನು ಮಾತ್ರ ಸೇವಿಸುತ್ತಿದ್ದರು. ವಾರಗಟ್ಟಲೆ ಉಪವಾಸ ಮಾಡಿದ ನಿದರ್ಶನವೂ ಇದೆ. ಯಾವಾಗಲೂ ವಿಕಲಚೇತನರಿಗೆ ಮೀಸಲಾಗಿದ್ದ ಜಾಗದಲ್ಲಿ ತಮ್ಮ ಕಾರನ್ನು ನಿಲ್ಲಿಸುತ್ತಿದ್ದರು. ಜಾಬ್ಸ್ ತಮ್ಮ ನೆಚ್ಚಿನ ಕಾರಿಗೆ ನಂಬರ್ ಪ್ಲೇಟ್ ಹಾಕಿಸಿರಲೇ ಇಲ್ಲ ಎಂಬುದು ನಂಬಲಾರದ ಸತ್ಯ. ಒಮ್ಮೆ ಸ್ಟೀವ್ ರನ್ನು   ಡೇ ಶಿಫ್ಟ್ ನಿಂದ ನೈಟ್ ಶಿಫ್ಟ್ ಗೆ ಬದಲಾಯಿಸಲಾಗಿತ್ತು. ಕಾರಣವೆಂದರೇ ಜಾಬ್ಸ್ ಪ್ರತಿದಿನ ಸ್ನಾನ ಮಾಡುತ್ತಿರಲಿಲ್ಲ. ಡಿಯೋಡ್ರಂಟ್‍ಗಳನ್ನೂ ಬಳಸುತ್ತಿರಲಿಲ್ಲ. ಬೀದಿಯುದ್ದಕ್ಕೂ ನಡೆಯುತ್ತಿದ್ದ ಅವರು, ಶಾಂತಿ ಮತ್ತು ಶುದ್ಧತೆಯನ್ನು ಅರಸುತ್ತಿದ್ದರು.  ದೇವರನ್ನು ಪೂಜಿಸುವುದರಲ್ಲಿ ಕೂಡ ಅವರಿಗೆ ನಂಬಿಕೆ ಇರಲಿಲ್ಲ.

2004 ಸ್ಟೀವ್ ಬದುಕಿನ ದುರಂತ ವರ್ಷ. ಅವರು ಪಿತ್ತಕೋಶದ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಆರು ತಿಂಗಳಿಗಿಂತ ಹೆಚ್ಚು ಕಾಲ ಬದುಕುವುದಿಲ್ಲ ಎಂದು ವೈದ್ಯರು ಹೇಳಿಯೂ ಬಿಟ್ಟಿದ್ದರು. ಮನೆಗೆ ಹೋಗಿ ಬಾಕಿ ಉಳಿದಿರುವ ಕೆಲಸಗಳನ್ನು ಮುಗಿಸಿಬಿಡು ಎಂದ ಸಲಹೆ ನೀಡಿದರು. ಆದರೇ ನಂತರದ ಪರೀಕ್ಷೆಗಳಲ್ಲಿ ತೋರಿದ ಸತ್ಯವೇನೆಂದರೆ ಅದೃಷ್ಟವಶಾತ್, ಅದು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದಾದ ಕ್ಯಾನ್ಸರ್ ಆಗಿತ್ತು! ಅಂದು ನಾನು ಸಾವನ್ನು ಮುಟ್ಟಿನೋಡಿ ಬಂದಿದ್ದೆ ಎಂದು ಸ್ಟೀವ್ ವಿವರಿಸಿದ್ದರು.

2008 ರಲ್ಲೇ ಮೊಬೈಲ್ ನ ಭವಿಷ್ಯದ ಬಗ್ಗೆ ಕೆಲವು ಊಹೆಗಳನ್ನು ಮಾಡಿದ್ದ ಸ್ಟೀವ್, ಭವಿಷ್ಯದಲ್ಲೊಂದು ದಿನ ಮೊಬೈಲ್ ಬಹಳ ಪ್ರಯೋಜನಕ್ಕೆ ಬರಲಿದೆ ಎಂಬುದನ್ನು ತಿಳಿಸಿದ್ದರು. ಆ ನಂತರ ಸೋಲನ್ನೇ ಕಾಣದ ಸ್ಟೀವ್ ಜಾಬ್ಸ್, ಆ್ಯಪಲ್‌ನ್ನು ವಿಶ್ವದ ನಂಬರ್ ಒನ್ ಕಂಪನಿಯನ್ನಾಗಿ ರೂಪಿಸಿದ್ದರು. ಆ್ಯಪಲ್‌ನ ಬಹು ಬೇಡಿಕೆಯ ಗೆಜೆಟ್ ಉತ್ಪನ್ನಗಳಾದ ಐಫೋನ್, ಐಪ್ಯಾಡ್‌ಗಳ ಗುಣಮಟ್ಟವನ್ನು ಉನ್ನತ ಮಟ್ಟಕ್ಕೇರಿಸುವುದರೊಂದಿಗೆ ವಿಶ್ವದೆಲ್ಲೆಡೆ ಬರಪೂರ ಬೇಡಿಕೆ ತಂದುಕೊಟ್ಟಿದ್ದರು.

2009ರಿಂದೀಚೆಗೆ ಅನಾರೋಗ್ಯ ನಿಮಿತ್ತ ನಿಯಮಿತವಾಗಿ ರಜೆ ತೆಗೆದುಕೊಳ್ಳುತ್ತಿದ್ದರು. ಸತತ ಹದಿನಾಲ್ಕು ವರ್ಷಗಳ ಕಾಲ ಆ್ಯಪಲ್ ಕಂಪನಿಯನ್ನು ಮುನ್ನಡೆಸಿದ್ದ ಅವರು ಮೇದೋಜಿರಕಾಂಗ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಾರಣ ಸೇವೆಗೆ ನಿವೃತ್ತಿ ಘೋಷಿಸಿದ್ದರು. ಆ್ಯಪಲ್ ಕಂಪನಿ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದರೂ ಸ್ಟೀವ್ ಅವರನ್ನು ಕಂಪನಿ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ಆದರೇ ದುರಾದೃಷ್ಟವಶಾತ್ ಸುದೀರ್ಘ ಅನಾರೋಗ್ಯದ ಪರಿಣಾಮವಾಗಿ 2011ರ ಅಕ್ಟೋಬರ್ 5ರಂದು ವಿಧಿವಶರಾದರು. ತಂತ್ರಜ್ಞಾನ ಕ್ಷೇತ್ರ ತನ್ನ ಅಮೂಲ್ಯ ರತ್ನವೊಂದನ್ನು ಅಂದು ಕಳೆದುಕೊಂಡಿತ್ತು.

ನಾನೇದರೂ ವಿಭಿನ್ನವಾದುದು ಮಾಡಬೇಕೆಂಬ ಹಂಬಲ, ಹುಚ್ಚು ಭ್ರಮೆ ಎನ್ನುವುದನ್ನು ವಾಸ್ತವಕ್ಕಿಳಿಸಲು ಸ್ಟೀವ್ ಶತ ಪ್ರಯತ್ನ ಪಟ್ಟಿದ್ದರು. ಐ ಮ್ಯಾಕ್, ­ಐ ಪಾಡ್, ಐ ಟ್ಯೂನ್, ಐ ವರ್ಕ್, ಐ ಲೈಫ್, ಐ ಫೋನ್ ಇವುಗಳು ಮಾತ್ರವಲ್ಲದೆ ಅವರ ಬಗ್ಗೆ ಬರೆಯಲಾಗಿರುವ ಆತ್ಮ ಚರಿತ್ರೆ ‘ಐಕಾನ್’ನಲ್ಲೂ ಐ ಇದೆ. ಅವರ  ವಿಭಿನ್ನ ಹಂಬಲವನ್ನು ಕೆಲವರು ಹೀಗಳೆದಿದ್ದು ಇದೆ. ಆದರೆ ಅದಕ್ಕೆ ಕಲಿಯುವ ಹಸಿವು, ಏನಾದರೂ ಮಾಡಬೇಕೆಂಬ ಹಂಬಲ, ಯಾರನ್ನೂ ಲೆಕ್ಕಿಸದೆ ತೋಚಿದ್ದನ್ನು ಸಾಧಿಸುವ ಎದೆಗಾರಿಕೆ ಬೇಕು. ಅದಕ್ಕೇ ಜಾಬ್ಸ್ ಹೇಳಿದ್ದು Stay Hungry, Stay Foolish!

“ಕತ್ತಲೆಯಲ್ಲಿ ನಡೆದ ದಿನಗಳು, ಕಷ್ಟ ಮತ್ತು ಒಳ್ಳೆಯ ಸಮಯಗಳಲ್ಲಿ ಜೀವನವನ್ನು ಹೆದರಿಸುವ ಶಕ್ತಿಯನ್ನು, ನೆಟ್ಟ ಗುರಿಗೆ, ದಿಟ್ಟ ಹೆಜ್ಜೆಯನ್ನು ಇಡುವಂತೆ ಪ್ರೇರೇಪಿಸುತ್ತದೆ” – ಸ್ಟೀವ್ ಜಾಬ್ಸ್.

ಟಾಪ್ ನ್ಯೂಸ್

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World War III Cinema: ಜಗತ್ತಿನಲ್ಲಿ 3ನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು?

World War III Cinema: ಜಗತ್ತಿನಲ್ಲಿ 3ನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು?

ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ

ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ

World Mother’s Day 2024: ಅಮ್ಮನಾಗಿ ಅಮ್ಮನನ್ನು ಅರಿತಾಗ….

World Mother’s Day 2024: ಅಮ್ಮನಾಗಿ ಅಮ್ಮನನ್ನು ಅರಿತಾಗ….

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

Mount Rushmore National Memorial: ಮೌಂಟ್‌ ರಶ್ಮೋರ್‌ನ ಸಿಕ್ಸ್‌ ಗ್ರಾಂಡ್‌ ಫಾದರ್ಸ್‌

Mount Rushmore National Memorial: ಮೌಂಟ್‌ ರಶ್ಮೋರ್‌ನ ಸಿಕ್ಸ್‌ ಗ್ರಾಂಡ್‌ ಫಾದರ್ಸ್‌

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.