ಇಂಡೋನೇಷ್ಯಾದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ
Team Udayavani, Sep 26, 2019, 9:26 AM IST
ಜಕಾರ್ತಾ: ಇಂಡೋನೇಷ್ಯಾದ ಪೂರ್ವ ಪ್ರಾಂತ್ಯದ ಮಾಲುಕು ಪ್ರದೇಶದ ಸೆರಾಮ್ ದ್ವೀಪದಲ್ಲಿ 6.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ಹಲವು ಕಟ್ಟಡಗಳಿಗೆ ಹಾನಿಯಾಗಿದೆ.
ಭೂಕಂಪದಿಂದ ಸುನಾಮಿ ಉಂಟಾಗುವ ಸಾಧ್ಯತೆಯಿದ್ದು ತೀವ್ರ ಕಟ್ಟೆಚ್ಚರ ಕೈಗೊಳ್ಳಲಾಗಿದೆ.
2018ರ ಸೆಪ್ಟೆಂಬರ್ ನಲ್ಲಿ ಮಾಲುಕು ಬಳಿಯ ಸುಲಾವೆಸಿ ದ್ವೀಪದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿ 4000 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು.
2004ರಲ್ಲಿ ಸುಮಾತ್ರಾ ದ್ವೀಪದಲ್ಲಿ ಸಂಭವಿಸಿದ ಸುನಾಮಿಯು ಹಿಂದೂ ಮಹಾಸಾಗರದಾದ್ಯಂತ ಸುನಾಮಿಯನ್ನು ಉಂಟು ಮಾಡಿತ್ತು. ಅದರ ಪರಿಣಾಮವಾಗಿ 14 ದೇಶಗಳಲ್ಲಿ 2 ಲಕ್ಷ 26 ಸಾವಿರ ಜನ ಸಾವನ್ನಪ್ಪಿದ್ದರು. ಅವುಗಳಲ್ಲಿ 1 ಲಕ್ಷದ 20 ಸಾವಿರಕ್ಕೂ ಹೆಚ್ಚು ಜನ ಇಂಡೋನೇಷ್ಯಾದಲ್ಲಿ ಮೃತಪಟ್ಟಿದ್ದರು.