ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ರಿಲೇ ತಂಡ
Team Udayavani, Sep 29, 2019, 2:52 PM IST
ದೋಹಾ; ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 4*400 ಮೀಟರ್ ರಿಲೇಯಲ್ಲಿ ಫೈನಲ್ ಪ್ರವೇಶಿಸಿ ತೃತೀಯ ಸ್ಥಾನ ಪಡೆದ ಭಾರತ ಮಿಶ್ರ ರಿಲೇ ತಂಡ ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದೆ.
ಮೊಹಮ್ಮದ್ ಅನಾಸ್, ವಿ.ಕೆ. ವಿಸ್ಮಯ, ಜಿಸ್ನಾ ಮ್ಯಾಥ್ಯೂ, ನಿರ್ಮಲ್ ತೋಮ್ ರಿದ್ದ ಭಾರತದ ರಿಲೇ ತಂಡ 3.16.14 ಸೆಕಂಡ್ಸ್ ನಲ್ಲಿ ಗುರಿ ತಲುಪಿ ತೃತೀಯ ಸ್ಥಾನ ಪಡೆಯಿತು. ಮೊದಲೆರಡು ಸ್ಥಾನಗಳು ಪೋಲ್ಯಾಂಡ್ ಮತ್ತು ಬ್ರೆಜಿಲ್ ತಂಡಗಳ ಪಾಲಾಯಿತು.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಫೈನಲ್ ಗೆ ಅರ್ಹತೆ ಪಡೆದ ಮೊದಲ ಎಂಟು ದೇಶಗಳು ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿವೆ.
ಭಾರತದ ತಾರಾ ಸ್ಪ್ರಿಂಟರ್ ದ್ಯುತಿ ಚಂದ್ 100 ಮೀ. ಹೀಟ್ಸ್ ನಲ್ಲಿ ಕಳಪೆ ಪ್ರದರ್ಶನ ನೀಡಿ ಫೈನಲ್ ತಲುಪಲು ವಿಫಲರಾಗಿದ್ದರು.