ಅ. 4ಕ್ಕೆ ಇಳಿಕೆಯಾಗುತ್ತಾ ಸಾಲದ ಮೇಲಿನ ಬಡ್ಡಿ?
Team Udayavani, Sep 30, 2019, 5:21 AM IST
ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್‌ನ ತ್ತೈಮಾಸಿಕ ಸಾಲ ನೀತಿ ಪರಿಶೀಲನ ಸಭೆ ಅ. 2ರಿಂದ ಮುಂಬಯಿಯಲ್ಲಿ 3 ದಿನಗಳ ಕಾಲ ನಡೆಯಲಿದೆ.
ಅ. 4ರಂದು ಸಾಲಗಳ ಮೇಲಿನ ಬಡ್ಡಿ ದರ ಕಡಿಮೆ ಮಾಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ವರ್ಷದ ಜನವರಿಯಿಂದ ಈಚೆಗೆ ನಾಲ್ಕು ಬಾರಿ ರೆಪೋ ದರ ಕಡಿಮೆ ಮಾಡಿ ನಿರ್ಧಾರ ಕೈಗೊಂಡಿದೆ. ಅ. 1ರಿಂದ ರೆಪೋ ಆಧಾರಿತ ಬಡ್ಡಿ ದರದ ಅನ್ವಯವೇ ಸಾಲಕ್ಕೆ ಬಡ್ಡಿ ದರ ನಿಗದಿ ಮಾಡಬೇಕು ಎಂದು ಆರ್‌ಬಿಐ ಬ್ಯಾಂಕ್‌ಗಳಿಗೆ ಈಗಾಗಲೇ ಆದೇಶ ನೀಡಿರುವಂತೆಯೇ ತ್ತೈಮಾಸಿಕ ಸಭೆ ನಡೆಯಲಿದೆ.
ಮಧ್ಯಾಂತರ ಡಿವಿಡೆಂಡ್?: ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ 30 ಸಾವಿರ ಕೋಟಿ ರೂ. ಮಧ್ಯಾಂತರ ಡಿವಿಡೆಂಡ್ ಅನ್ನು ಸರಕಾರ ವಿನಂತಿಸುವ ಸಾಧ್ಯತೆಯಿದೆ. ವಿತ್ತ ಕೊರತೆ ಗುರಿ ಶೇ. 3.3 ಅನ್ನು ಪೂರೈಸುವ ನಿಟ್ಟಿನಲ್ಲಿ ಆರ್‌ಬಿಐನಿಂದ ಈ ಮೊತ್ತವನ್ನು ಸರಕಾರ ಆಗ್ರಹಿಸುವ ಸಾಧ್ಯತೆಯಿದೆ. ಮಧ್ಯಾಂತರ ಡಿವಿಡೆಂಡ್ ಆಗ್ರಹಿಸುವುದರ ಜತೆಗೆ, ಬಂಡವಾಳ ಹಿಂತೆಗೆತ, ಸಣ್ಣ ಹೂಡಿಕೆಗಳ ಸಂಗ್ರಹದ ಉತ್ತಮ ಬಳಕೆಯ ಮೂಲಕ ಸರಕಾರ ನಿರ್ವಹಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !