ಬಂಡೀಪುರ ಸಂಚಾರ ತೆರವಿಗೆ ಸಿಎಂ ವಿಜಯನ್‌ಗೆ ರಾಹುಲ್‌ ಮನವಿ

Team Udayavani, Oct 2, 2019, 3:10 AM IST

bandipura

ನವದೆಹಲಿ: ಕರ್ನಾಟಕದ ಬಂಡೀಪುರ ಹುಲಿ ರಕ್ಷಿತಾರಣ್ಯದ ಮೂಲಕ ಕೇರಳಕ್ಕೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ವಿಧಿಸಲಾಗಿರುವ ರಾತ್ರಿ ಸಂಚಾರ ನಿಷೇಧವನ್ನು ತೆರವುಗೊಳಿಸಿ, ಕೇರಳಿಗರಿಗೆ ಈ ಮಾರ್ಗದಲ್ಲಿ ದಿನದ 24 ಗಂಟೆಗಳೂ ಸಂಚಾರ ಸಂಪರ್ಕ ಕಲ್ಪಿಸಬೇಕೆಂದು ವಯನಾಡ್‌ ಸಂಸದ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರನ್ನು ಆಗ್ರಹಿಸಿದ್ದಾರೆ.

ಮಂಗಳವಾರ, ವಿಜಯನ್‌ ಅವರನ್ನು ಕೇರಳ ಹೌಸ್‌ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಅವರು, ನಿರ್ಬಂಧ ತೆರವು ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ನಂತರ ಮಾಧ್ಯ ಮಗಳೊಂದಿಗೆ ಮಾತನಾಡಿ, ಕೇಂದ್ರ ಸಚಿವರ ಜತೆಗೆ ಮಾತನಾಡಿ ಸಮಸ್ಯೆ ಇತ್ಯರ್ಥಗೊಳಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.

ಸತ್ಯಾಗ್ರಹ: ಈ ನಡುವೆ, ರಕ್ಷಿತಾರಣ್ಯದ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವಂತೆ ಆಗ್ರಹಿಸಿ, ವಯನಾಡ್‌ನ‌ ಸಮರ ಸಮಿತಿ ಸಂಘಟ ನೆಯ ಯುವ ಕಾರ್ಯಕರ್ತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 7ನೇ ದಿನಕ್ಕೆ ಕಾಲಿಟ್ಟಿದೆ. ಅ. 3ರಂದು ವಯನಾಡ್‌ಗೆ ಭೇಟಿ ನೀಡಲಿರುವ ರಾಹುಲ್‌, ಸತ್ಯಾಗ್ರಹಿಗಳನ್ನು ಭೇಟಿ ಯಾಗಿ ಬೆಂಬಲ ಸೂಚಿಸಲಿದ್ದಾರೆಂದು ಕಾಂಗ್ರೆಸ್‌ ಪ್ರಕಟಿಸಿದೆ.

ಪಾದಯಾತ್ರೆ: ಹುಲಿ ರಕ್ಷಿತಾರಣ್ಯ ಸಂಚಾರ ನಿರ್ಬಂಧ ತೆರವಿಗೆ ಆಗ್ರಹಿಸಿ, ಮಂಗಳವಾರ ಕೇರಳದ ಸುಲ್ತಾನ್‌ ಬತೇರಿ ಯಿಂದ ಕರ್ನಾಟಕದ ಕೊನೆಯ ಹಳ್ಳಿ ಯಾದ ಮೂಲ ಹಳ್ಳಿಯವರೆಗೆ ನಡೆ ಸಲಾದ ಪಾದಯಾತ್ರೆಯಲ್ಲಿ ಸಾವಿರಾರು ವಿದ್ಯಾರ್ಥಿ ಗಳು, ರೈತರು, ಮಹಿಳೆಯರು ಭಾಗವಹಿಸಿದ್ದರು.

ಕೇಂದ್ರದ ಭರವಸೆ: ಬಂಡೀಪುರ ಹುಲಿ ರಕ್ಷಿತಾರಣ್ಯ ಸಂಚಾರ ನಿರ್ಬಂಧ ಸಮಸ್ಯೆಯನ್ನು ಅಧ್ಯಯನ ಮಾಡಲು ತಜ್ಞರ ಸಮಿತಿಯೊಂದನ್ನು ನೇಮಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಸಮಿತಿಯು ನೀಡುವ ವರದಿ ಯನ್ವಯ ಸಮಸ್ಯೆಯನ್ನು ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿದೆ. ಮಂಗಳವಾರ, ಕೇರಳ ಸಿಎಂ ಪಿಣರಾಯಿ ವಿಜಯನ್‌ ಹಾಗೂ ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ನಡುವಿನ ಮಾತುಕತೆಯ ನಂತರ, ಕೇಂದ್ರದಿಂದ ಈ ಪ್ರಕಟಣೆ ಹೊರಬಿದ್ದಿದೆ.

ಟಾಪ್ ನ್ಯೂಸ್

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Rahul Gandhi 3

PM Modiಗೆ ನಾಜಿ ಪ್ರಚಾರಕ ಗೋಬೆಲ್ಸ್‌ನೇ ಸ್ಫೂರ್ತಿ: ಕಾಂಗ್ರೆಸ್‌

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Rahul Gandhi 3

PM Modiಗೆ ನಾಜಿ ಪ್ರಚಾರಕ ಗೋಬೆಲ್ಸ್‌ನೇ ಸ್ಫೂರ್ತಿ: ಕಾಂಗ್ರೆಸ್‌

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.