ಈಡನ್ ಗಾರ್ಡನ್ಸ್ನಲ್ಲಿ ಮೊದಲ ಡೇ ನೈಟ್ ಟೆಸ್ಟ್?
ಭಾರತ - ಬಾಂಗ್ಲಾದೇಶ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ; ಹೊನಲು ಬೆಳಕಿನಲ್ಲಿ ನಡೆಸಲು ಬಿಸಿಸಿಐ ಬಿಸಿಬಿ ಚರ್ಚೆ
Team Udayavani, Oct 28, 2019, 8:36 PM IST
ಹೊಸದಿಲ್ಲಿ: ಭಾರತದಲ್ಲಿ ಮೊದಲ ಡೇ ನೈಟ್ ಪಂದ್ಯಕ್ಕೆ ಕಾಲ ಸನ್ನಿಹಿತವಾದಂತಿದೆ. ಈಡನ್ ಗಾರ್ಡನ್ಸ್ನಲ್ಲಿ ನಡೆಯುವ ಭಾರತ-ಬಾಂಗ್ಲಾದೇಶ ನಡುವಿನ ದ್ವಿತೀಯ ಟೆಸ್ಟ್ ಪಂದ್ಯವನ್ನು ಹೊನಲು ಬೆಳಕಿನಲ್ಲಿ ಆಡಿಸುವ ಕುರಿತು ಬಿಸಿಸಿಐ ಯೋಚಿಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಜತೆ ಚರ್ಚೆ ನಡೆಸಿದೆ.
ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಡೇ ನೈಟ್ ಟೆಸ್ಟ್ ಕುರಿತು ಒಲವು ತೋರಿದ್ದು, ನಾಯಕ ವಿರಾಟ್ ಕೊಹ್ಲಿ ಕೂಡ ಇದಕ್ಕೆ ಸಮ್ಮತಿಸಿದ್ದಾಗಿ ಈಗಾಗಲೇ ವರದಿಯಾಗಿದೆ.
“ಬಿಸಿಸಿಐ ಡೇ ನೈಟ್ ಟೆಸ್ಟ್ ಆಯೋಜಿಸುವ ಕುರಿತು ಚರ್ಚಿಸಿದೆ. ಈ ಬಗ್ಗೆ ಆಲೋಚಿಸಿ ಕೂಡಲೇ ನಿರ್ಧಾರ ತೆಗೆದುಕೊಳ್ಳಲಿದ್ದೇವೆ’ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಅಕ್ರಮ್ ಖಾನ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಾಂಗ್ಲಾ ಕ್ರಿಕೆಟ್ ಮಂಡಳಿ ಮುಖ್ಯಸ್ಥ ನಿಜಾಮುದ್ದೀನ್ ಚೌಧರಿ, “ಮೊದಲು ಆಟಗಾರರು ಮತ್ತು ತಂಡದ ಆಡಳಿತ ಮಂಡಳಿ ಜತೆ ಚರ್ಚಿಸಬೇಕಿದೆ. ಏಕೆಂದರೆ ಇದಕ್ಕೆ ಪಿಂಕ್ ಬಾಲ್ನಲ್ಲಿ ಆಡಿದ ಅನುಭವ ಬೇಕು. ಇದಕ್ಕೆ ಸೂಕ್ತ ಅಭ್ಯಾಸದ ಅಗತ್ಯವಿದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ