ತಗಡಿನ ತಾತ್ಕಾಲಿಕ ಶೆಡ್‌ನ‌ಲ್ಲೇ ಶಾಲೆ

Team Udayavani, Nov 10, 2019, 4:45 PM IST

gadaga-tdy-1

ನರಗುಂದ: ಲಕ್ಷಾಂತರ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಿದ, ಸುದೀರ್ಘ‌ 155 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಶಾಲೆಯ ಕಟ್ಟಡ ಪ್ರವಾಹದ ಹೊಡೆತಕ್ಕೆ ಸಿಲುಕಿ ವಿನಾಶದ ಅಂಚಿಗೆ ತಲುಪಿದ್ದು, ತಗಡಿನ ತಾತ್ಕಾಲಿಕ ಶೆಡ್‌ನ‌ಲ್ಲೇ ಅಕ್ಷರ ದಾಸೋಹ ಮುಂದುವರಿಸಿದೆ.

1864ರಲ್ಲೇ ನಿರ್ಮಾಣಗೊಂಡ ತಾಲೂಕಿನ ಕೊಣ್ಣೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ 14 ಕೊಠಡಿ ಹೊಂದಿದ್ದು, 7 ಕೊಠಡಿಗಳನ್ನು ಬ್ರಿಟಿಷ್‌ ಕಾಲದಲ್ಲಿಯೇ ನಿರ್ಮಿಸಲಾಗಿದೆ. ಉಳಿದ 7 ಕೊಠಡಿಗಳನ್ನು ದಶಕಗಳ ಹಿಂದೆ ನಿರ್ಮಿಸಲಾಗಿದೆ. ವಿಚಿತ್ರವೆಂದರೆ ನೂತನವಾಗಿ ನಿರ್ಮಿಸಿದ 7 ಕೊಠಡಿಗಳು ಬಹಳ ದಿನಗಳ ಹಿಂದೆಯೇ ಬಳಕೆಗೆ ಅಯೋಗ್ಯವಾಗಿದ್ದರೆ, ಹಳೆ ಕೊಠಡಿಗಳು ಆಗಸ್ಟ್‌ನಲ್ಲಿ ಉಂಟಾದ ಪ್ರವಾಹದಿಂದ ಜಲಾವೃತಗೊಂಡ ಸಂದರ್ಭದಲ್ಲಿ ಹಾನಿಗೊಳಗಾಗಿವೆ.

ತಾತ್ಕಾಲಿಕ ಶೆಡ್‌ಗೆ ಸ್ಥಳಾಂತರ: ಆಗಸ್ಟ್‌ನಲ್ಲಿ ಕೊಣ್ಣೂರು ಸಂಪೂರ್ಣ ಜಲಾವೃತಗೊಂಡ ಬಳಿಕ ಒಂದೂವರೆ ಶತಮಾನದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಅಲ್ಲಿನ ಕೆಜಿಎಸ್‌ ಶಾಲೆಯಲ್ಲಿ ಕೆಲ ಕಾಲ ಕಾರ್ಯ ನಿರ್ವಹಿಸಿ ಈಗ ತಾತ್ಕಾಲಿಕ ಶೆಡ್‌ಗೆ ಸ್ಥಳಾಂತರಗೊಂಡಿದೆ. 139 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ತಾತ್ಕಾಲಿಕ 7 ಶೆಡ್‌ಗಳಲ್ಲಿ ಬಿಸಿಯೂಟ ತಯಾರಿಕೆಗೆ ಹೊರತುಪಡಿಸಿ ಉಳಿದ 6 ಶೆಡ್‌ಗಳಲ್ಲಿ ವರ್ಗಗಳು ನಡೆಯುತ್ತಿವೆ.

ನೆಲಸಮಕ್ಕೆ ಸಜ್ಜು: ಶಾಲೆ ಕೊಠಡಿಗಳು ಬಳಕೆಗೆ ಸಂಪೂರ್ಣ ಅಯೋಗ್ಯವಾಗಿದ್ದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಯ ಎಲ್ಲ ಕಟ್ಟಡಗಳನ್ನು ನೆಲಸಮಗೊಳಿಸಿ ಮರು ನಿರ್ಮಾಣಕ್ಕೆ ಮುಂದಾಗಿದೆ.  ನರಗುಂದ ಕೇಂದ್ರ ಸ್ಥಾನದಿಂದ 20 ಕಿಮೀ ದೂರದ ಕೊಣ್ಣೂರಲ್ಲಿ ಹೆದ್ದಾರಿಗೆ ಹೊಂದಿಕೊಂಡ ಮಾದರಿ ಶಾಲೆ ಮಲಪ್ರಭಾ ನದಿ ಪ್ರವಾಹ ಉಕ್ಕಿ ಹರಿದರೆ ಮೊದಲಿಗೆ ಚುಂಬಿಸುವುದೇ ಈ ಶಾಲೆ ಕಟ್ಟಡ. ನಿರಂತರ ಪ್ರವಾಹದ ಒಡಲಾಳಿಗೆ ನಲುಗಿದ ಒಂದೂವರೆ ಶತಮಾನ ಹಿನ್ನೆಲೆಯ ಈ ಶಾಲೆ ಕಟ್ಟಡ ನೆಲಸಮಗೊಳಿಸುವ ಸ್ಥಿತಿಗೆ ಬಂದಿರುವುದು ವಿಪರ್ಯಾಸ.

ಸರಕಾರಿ ಮಾದರಿ ಶಾಲೆ ನೆಲಸಮಗೊಳಿಸಿ ಮರು ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಿಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಸೂಚಿಸಿದ್ದಾರೆ. ಶಾಲೆ ಕಟ್ಟಡಗಳ ನೆಲಸಮಕ್ಕೆ ಶೀಘ್ರ ಚಾಲನೆ ನೀಡಲಾಗುವುದು. –ಎನ್‌.ಎಚ್‌.ನಾಗೂರ, ಜಿಲ್ಲಾ ಉಪ ನಿರ್ದೇಶಕರು. ಸಾರ್ವಜನಿಕ ಶಿಕ್ಷಣ ಇಲಾಖೆ.

-ಸಿದ್ಧಲಿಂಗಯ್ಯ ಮಣ್ಣೂರಮಠ

ಟಾಪ್ ನ್ಯೂಸ್

Hubli; ಸಭೆ ಮೊಟಕುಗೊಳಿಸಿದ ಅಧಿಕಾರಿಗಳು; ಪ್ರತಿಭಟನೆ ನಡೆಸಿದ ಮಠಾಧೀಶರು

Loksabha; ಪ್ರಚಾರಕ್ಕೆ ಸಿಗದ ಹಣಕಾಸು ನೆರವು..: ಟಿಕೆಟ್ ಮರಳಿಸಿದ ಕಾಂಗ್ರೆಸ್ ಅಭ್ಯರ್ಥಿ

Loksabha; ಪ್ರಚಾರಕ್ಕೆ ಸಿಗದ ಹಣಕಾಸು ನೆರವು..: ಟಿಕೆಟ್ ಮರಳಿಸಿದ ಕಾಂಗ್ರೆಸ್ ಅಭ್ಯರ್ಥಿ

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ

Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

Interview: “ಈ ಭಾಗದಲ್ಲಿ  ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’

Interview: “ಈ ಭಾಗದಲ್ಲಿ ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’

Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ

Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ಸಭೆ ಮೊಟಕುಗೊಳಿಸಿದ ಅಧಿಕಾರಿಗಳು; ಪ್ರತಿಭಟನೆ ನಡೆಸಿದ ಮಠಾಧೀಶರು

2-uv-fusion

UV Fusion: ಆರಾಮಕ್ಕಿರಲಿ  ವಿರಾಮ…

Desi Swara: ಅಮೆರಿಕ-ಸೌರಮಾನ ಯುಗಾದಿ ಆಚರಣೆ

Desi Swara: ಅಮೆರಿಕ-ಸೌರಮಾನ ಯುಗಾದಿ ಆಚರಣೆ

Loksabha; ಪ್ರಚಾರಕ್ಕೆ ಸಿಗದ ಹಣಕಾಸು ನೆರವು..: ಟಿಕೆಟ್ ಮರಳಿಸಿದ ಕಾಂಗ್ರೆಸ್ ಅಭ್ಯರ್ಥಿ

Loksabha; ಪ್ರಚಾರಕ್ಕೆ ಸಿಗದ ಹಣಕಾಸು ನೆರವು..: ಟಿಕೆಟ್ ಮರಳಿಸಿದ ಕಾಂಗ್ರೆಸ್ ಅಭ್ಯರ್ಥಿ

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.