ಹಣಕೊಟ್ಟು ಆಕ್ಸಿಜನ್ ಖರೀದಿಸಿ: ಈ ನಗರದಲ್ಲಿದೆ ಆಕ್ಸಿಜನ್ ಬಾರ್
Team Udayavani, Nov 15, 2019, 2:36 PM IST
ಹೊಸದಿಲ್ಲಿ: ರಾಜಧಾನಿ ಹೊಸದಿಲ್ಲಿಯ ವಾಯು ಮಾಲಿನ್ಯದ ಬಗ್ಗೆ ಪ್ರತಿದಿನ ಸುದ್ದಿಗಳನ್ನು ಓದಿರುತ್ತೀರ. ವಾಯುಮಾಲಿನ್ಯ ಪರಿಸ್ಥಿತಿ ಹದಗೆಟ್ಟ ಕಾರಣದಿಂದ ದಿಲ್ಲಿಯಲ್ಲೀಗ ಉಸಿರಾಡುವುದೂ ಕಷ್ಟವಾಗಿದೆ. ಆದರೆ ಇಲ್ಲೊಂದು ಕಡೆ ಇದಕ್ಕೆ ಪರಿಹಾರ ನೀಡಲು ಹೊಸ ಉಪಾಯ ಮಾಡಲಾಗಿದೆ.
ದೆಹಲಿಯಲ್ಲಿ ‘ಆಕ್ಸಿ ಪ್ಯೂರ್ ಬಾರ್’ ಆರಂಭವಾಗಿದೆ. ಆದರೆ ಇಲ್ಲಿ ಆಮ್ಲಜನಕ ಉಚಿತವಲ್ಲ, ಬದಲಾಗಿ ಇಂತಿಷ್ಟು ಎಂದು ಹಣ ಪಾವತಿ ಮಾಡಿದರೆ ಮಾತ್ರ ಆಮ್ಲಜನಕ ಸೇವಿಸಬಹುದು.
ದೆಹಲಿ ಜನತೆಗೆ ಪರಿಸರದಲ್ಲಿ ಸಿಗುವ ಉಚಿತ ಆಮ್ಲಜನಕ ಸೇವಿಸಲು ಸಾಧ್ಯವಾಗದೆ ಪರಿಸ್ಥಿತಿಯಲ್ಲಿದ್ದಾರೆ. ಹೀಗಾಗಿ ಈ ಆಕ್ಸಿ ಬಾರ್ ನಲ್ಲಿ ಶುದ್ಧ ಗಾಳಿ ಸೇವಿಸಬಹುದು.
ವಿಶೇಷವೆಂದರೆ ಇಲ್ಲಿ ಲೆಮೋನ್ ಗ್ರಾಸ್, ಆರೆಂಜ್, ಪೆಪ್ಪರ್ಮೆಂಟ್, ಲ್ಯಾವೆಂಡರ್ ಹೀಗೆ ಒಟ್ಟು ಏಳು ಅರೋಮಗಳಲ್ಲಿ ಇಲ್ಲಿ ಆಮ್ಲಜನಕ ಲಭ್ಯವಿದೆ. 15 ನಿಮಿಷ ಶುದ್ಧ ಆಮ್ಲಜನಕ ಸೇವಿಸಬೇಕಾದರೆ ನೀವು ಪಾವತಿ ಮಾಡಬೇಕಿರುವುದು ಕೇವಲ 299 ರೂಪಾಯಿ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ