ಫಿರೋಜಾಬಾದ್‌ ದರ್ಶನ-ಅಧ್ಯಯನ


Team Udayavani, Nov 26, 2019, 10:58 AM IST

gb-tdy-2

ಕಲಬುರಗಿ: ವಿಶ್ವಪರಂಪರೆ ಸಪ್ತಾಹ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸರಕಾರಿ ವಸ್ತು ಸಂಗ್ರಹಾಲಯ ಹಾಗೂ ಇನ್‌ ಟ್ಯಾಕ್‌ ಅಧ್ಯಯನಗಳ ಸಂಯುಕ್ತ ಆಶ್ರಯದಲ್ಲಿ ಫಿರೋಜಾಬಾದ್‌ ದರ್ಶನ ಕಾರ್ಯಕ್ರಮವನ್ನು ಫಿರೋಜಾಬಾದ್‌ ಕೋಟೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಇತಿಹಾಸ ಪ್ರಾಧ್ಯಾಪಕ ಹಾಗೂ ಸಂಶೋಧಕರಾದ ಡಾ| ಶಂಭುಲಿಂಗ ಎಸ್‌. ವಾಣಿ ಉಪನ್ಯಾಸ ನೀಡಿ, ಫಿರೋಜಾಬಾದ್‌ಬಹಮನಿ ಸುಲ್ತಾನರ ಮೂರನೇ ರಾಜಧಾನಿ ಪಟ್ಟಣ. ಫಿರೋಜ್‌ ಶಹಾ ಬಹಮನಿಯು ಕ್ರಿ.ಶ. 1406ರಲ್ಲಿ ವಿಜಯನಗರದ ಮೇಲೆ ದಂಡಯಾತ್ರೆ ಮುಗಿಸಿಕೊಂಡು ಬರುವಾಗ ಅವನ ಸೈನ್ಯ ಹಾಗೂ ಸುಲ್ತಾನನು ಭೀಮಾ ನದಿಯ ದಂಡೆಯ ಮೇಲೆ ಕೆಲಕಾಲ ತಂಗಿತು. ಆಗ ಸುಲ್ತಾನನಿಗೆ ಇದು ಅತ್ಯಂತ ಸೂಕ್ತ ಮತ್ತು ಆಕರ್ಷಿಕ ಸ್ಥಳವಾಗಿ ಕಂಡುಬಂದಿತು ಎಂದು ವಿವರಿಸಿದರು.

ಕಲಬುರಗಿ ಕೋಟೆ ವಿಸ್ತಾರಗೊಳಿಸಲು ಸಾಧ್ಯವಿಲ್ಲದಿದ್ದಾಗ ಮತ್ತು ಕುದುರೆಗಳಿಗೆ, ಆನೆಗಳಿಗೆ ವಿಶಾಲ ಸ್ಥಳ ಹಾಗೂ ಕುಡಿಯಲು ನೀರಿನ ಅನುಕೂಲಕ್ಕಾಗಿ ಮತ್ತು ರಾಜ್ಯಕ್ಕೆ ನದಿಯಿಂದ ರಕ್ಷಣೆ ದೊರೆಯುತ್ತಿದೆ ಎನ್ನುವ ಹಲವು ಕಾರಣಗಳಿಗೆ ಹೊಸ ರಾಜಧಾನಿಯ ನಿರ್ಮಾಣ ಕಾರ್ಯ ಆರಂಭಗೊಂಡಿತು.ಮುಂದಿನ 8-10 ವರ್ಷಗಳಲ್ಲಿ ವಿಶಾಲವಾದ ಕೋಟೆ, ನಾಲ್ಕು ದಿಕ್ಕಿನಲ್ಲಿ ಬೃಹತ್‌ ಪ್ರಮಾಣದ ಪ್ರವೇಶ ದ್ವಾರಗಳು, ಮೂರು ಅಂತಸ್ತಿನ ಅರಮನೆ, ವಿಶಾಲವಾದ ಜಾಮಿ ಮಸೀದಿ, ಸಭಾ ಭವನ, ಸುಲ್ತಾನರ ವಿಶ್ರಾಂತಿ ಸ್ಥಳಗಳು, ಸೈನಿಕರಿಗೆ, ಆನೆಗಳಿಗೆ ಹಾಗೂ ಕುದುರೆಗಳಿಗೆ ವಿಶೇಷ ಸ್ಥಳಾವಕಾಶವನ್ನು ಫಿರೋಜ್‌ ಶಹಾ ಈ ಕೋಟೆಯ ಒಳಭಾಗದಲ್ಲಿ ಕಲ್ಪಿಸಿಕೊಟ್ಟಿರುವುದನ್ನು ವಿವರಿಸಿದರು. ಫಿರೋಜಾಬಾದ್‌ ಕೋಟೆಯ ಪ್ರವೇಶಕ್ಕೆ ಯಾವುದೇ ಸೂಕ್ತ ಪ್ರವೇಶ ದ್ವಾರಗಳು ಅಥವಾ ರಸ್ತೆಗಳು ಇರುವುದಿಲ್ಲ. ಇಡಿ ಕೋಟೆಯ ಆವರಣದ ಭೂಮಿಯನ್ನು ಕೃಷಿಗೆ ಅಳವಡಿಸಲಾಗಿದ್ದು, ಇದರ ಕಲ್ಲುಗಳು ಹೊಲಕ್ಕೆ ರಕ್ಷಣೆಗೆ ಬಳಸಿಕೊಂಡಿದ್ದು, ಪ್ರಮುಖ ದ್ವಾರಗಳ ಮುಂಭಾಗದಲ್ಲಿ ತಂತಿಯ ಬೇಲಿ ಹಾಕಿ ಪ್ರವೇಶಕ್ಕೆ ಅಡ್ಡಿ ಮಾಡಲಾಗಿದೆ. ಒಳಭಾಗದ ಕಟ್ಟಡಗಳನ್ನು ನಾಶಗೊಳಿಸುವ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದು ಕಂಡುಬರುತ್ತದೆ. ನಿಧಿಯ ಆಸೆಗಾಗಿ ಕಟ್ಟಡಗಳನ್ನು ನೆಲಸಮಗೊಳಿಸುವ ಚಟುವಟಿಕೆ ನಡೆಯುತ್ತಿದೆ. ಈ ರೀತಿಯ ಚಟುವಟಿಕೆಗಳು ಹಾಗೆ ಮುಂದುವರೆದರೆ ಮುಂದಿನ ಕೆಲವೇ ದಶಕಗಳಲ್ಲಿ ಕೋಟೆ ಸಂಪೂರ್ಣವಾಗಿ ನಾಶಗೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ವಸ್ತು ಸಂಗ್ರಹಾಲಯ ಇಲಾಖೆಯ ಅನ್ವೇಷಕ ಶಬ್ಬೀರ್‌ ಅಹಮ್ಮದ್‌, ಸರಕಾರಿ (ಸ್ವಾಯತ್ತ) ಕಾಲೇಜು ಸ್ನಾತಕೋತ್ತರ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ|ಟಿ.ವಿ.ಅಡಿವೇಶ, ಪ್ರೊ| ಚಂದ್ರಶೇಖರ ಅನಾದಿ, ಸರಕಾರಿ ಮಹಿಳಾ ಕಾಲೇಜು ಸ್ನಾತಕೋತ್ತರ ಇತಿಹಾಸ ವಿಭಾಗದ ಮುಖ್ಯಸ್ಥ ಡಾ| ಶಶಿಶೇಖರ ರೆಡ್ಡಿ, ಡಾ| ಭೀಮಣ್ಣ ಘನಾತೆ, ಪ್ರೊ| ಶರಣಪ್ಪ ಗುಂಡಗುರ್ತಿ, ಪ್ರೊ| ರವಿಕುಮಾರ, ಸಂಶೋಧನಾರ್ಥಿಗಳು, ಎರಡು ಕಾಲೇಜುಗಳ ಸ್ನಾತಕೋತ್ತರ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.