ಏರುತ್ತಲೇ ಇದೆ ಪೆಟ್ರೋಲ್ ಬೆಲೆ
Team Udayavani, Nov 27, 2019, 6:00 AM IST
ಹೊಸದಿಲ್ಲಿ: ನೀವು ವಾಹನ ಮಾಲಕರೇ? ಹಾಗಿದ್ದರೆ ಇಲ್ಲಿ ಕೇಳಿ, ಕಳೆದ ಕೆಲವು ದಿನಗಳಿಂದ ಏರುತ್ತಲೇ ಇರುವ ಪೆಟ್ರೋಲ್ ಬೆಲೆ ನಿಮ್ಮ ಜೇಬನ್ನು ನಿಮಗೆ ಗೊತ್ತಿಲ್ಲದೆಯೇ ಸುಡುತ್ತಿದೆ.
ಕಳೆದ 10 ದಿನಗಳಲ್ಲಿ ಒಂದು ರೂ. 10 ಪೈಸೆಗಳಷ್ಟು ಏರಿಕೆಯಾಗಿದೆ. ಅಂದರೆ ನ.16ರಿಂದ ಏರುಗತಿಯಲ್ಲೇ ಇರುವ ಪೆಟ್ರೋಲ್ ಬೆಲೆ ಮಧ್ಯದಲ್ಲಿ ಎರಡು ದಿನ ಮಾತ್ರ ಬದಲಾಗದೆ ಉಳಿದಿದೆ. ನ.16ರಂದು 76.29 ರೂ. ಇದ್ದ ಬೆಲೆ, ನ.26ರಂದು 77.32 ರೂ.ಗಳಾಗಿವೆ. ಆದರೆ ಪೆಟ್ರೋಲ್ನಷ್ಟು ಡೀಸೆಲ್ ಬೆಲೆ ಸುಡುತ್ತಿಲ್ಲ ಎನ್ನುವುದು ಸಮಾಧಾನದ ವಿಷಯ. ನ.16ರಿಂದ ಆರಂಭವಾಗುವ 10 ದಿನಗಳಲ್ಲಿ ಡೀಸೆಲ್ ಬೆಲೆ ಆರು ಪೈಸೆಗಳಷ್ಟು ಇಳಿಕೆಯಾಗಿದೆ.