ಲಂಡನ್ ನಲ್ಲಿ ಸೇತುವೆ ಮೇಲೆ ಮತ್ತೆ ಉಗ್ರ ದಾಳಿ, ಇಬ್ಬರ ಸಾವು; ಎನ್ ಕೌಂಟರ್ ಗೆ ಉಗ್ರ ಬಲಿ
Team Udayavani, Nov 30, 2019, 11:42 AM IST
ಲಂಡನ್:ಸೂಸೈಡ್ ಬಾಂಬರ್ ನಂತೆ ನಕಲಿಯಾಗಿ ವೇಷಧರಿಸಿದ್ದ ಶಸ್ತ್ರಧಾರಿ ವ್ಯಕ್ತಿಯೊಬ್ಬ ಲಂಡನ್ ಸೇತುವೆ ಮೇಲೆ ಇಬ್ಬರನ್ನು ಹತ್ಯೆಗೈದಿದ್ದು, ಕ್ಷಿಪ್ರ ಕಾರ್ಯಾಚರಣೆಯಲ್ಲಿ ಲಂಡನ್ ಪೊಲೀಸರ ಎನ್ ಕೌಂಟರ್ ಗೆ ಶಸ್ತ್ರಧಾರಿ ವ್ಯಕ್ತಿ ಬಲಿಯಾಗಿರುವುದಾಗಿ ವರದಿ ತಿಳಿಸಿದೆ.
ಈ ಭಯೋತ್ಪಾದನಾ ದಾಳಿಯಲ್ಲಿ ಹಲವರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ. ಕಳೆದ ಎರಡು ವರ್ಷಗಳ ಹಿಂದೆ ಮೂವರು ಲಂಡನ್ ಸೇತುವೆ ಮೇಲೆ ದಾಳಿ ನಡೆಸಿದ್ದ ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದರು ಎಂದು ವರದಿ ವಿವರಿಸಿದೆ.
ಜನನಿಬಿಡ ಪ್ರದೇಶದಲ್ಲಿಯೇ ಈ ಘಟನೆ ನಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇಬ್ಬರನ್ನು ಚೂರಿಯಿಂದ ಇರಿದ ವ್ಯಕ್ತಿಯನ್ನು ಸಮೀಪದಲ್ಲಿಯೇ ನಿಂತಿದ್ದ ಹಲವಾರು ಮಂದಿ ಆತನನ್ನು ಹಿಡಿದು, ಚೂರಿಯನ್ನು ಕಸಿದುಕೊಂಡಿದ್ದರು. ನೆಲದಲ್ಲಿ ಬಿದ್ದಿದ್ದ ದಾಳಿಕೋರ ಮೇಲಕ್ಕೆ ಏಳುತ್ತಿದ್ದಂತೆಯೇ ಶಸ್ತ್ರಸಜ್ಜಿತ ಲಂಡನ್ ಪೊಲೀಸ್ ಅಧಿಕಾರಿ ಗುಂಡಿನ ದಾಳಿ ನಡೆಸಿ ಆತನನ್ನು ಹೊಡೆದುರುಳಿಸಿರುವುದಾಗಿ ವರದಿ ತಿಳಿಸಿದೆ.
ಪೊಲೀಸರು ಬರುವ ಮುನ್ನವೇ ಸಾರ್ವಜನಿಕರು ಧೈರ್ಯ ತೋರಿ ಆತನನ್ನು ಹಿಡಿದಿರುವುದಕ್ಕೆ ಲಂಡನ್ ಮೇಯರ್ ಸಾದಿಕ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ರಜಿನಿಕಾಂತ್ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ
Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ
ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ