5ರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ
Team Udayavani, Dec 7, 2019, 11:13 PM IST
ದರ್ಭಾಂಗ್(ಬಿಹಾರ): ಆಟೋ ರಿಕ್ಷಾ ಚಾಲಕನೊಬ್ಬ 5 ವರ್ಷ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಶುಕ್ರವಾರ ಇಲ್ಲಿಯ ಕರೌವ್ ಮೋರ್ ಪ್ರದೇಶದಲ್ಲಿ ನಡೆದಿದೆ.
ಬಾಲಕಿ ಮೂರು ವರ್ಷ ವಯಸ್ಸಿನ ಮತ್ತೂಂದು ಬಾಲಕಿ ಜೊತೆ ಆಟವಾಡುತ್ತಿದ್ದ ವೇಳೆ ರಿಕ್ಷಾ ಚಾಲಕ, ಇಬ್ಬರನ್ನೂ ಆಟೋದಲ್ಲಿ ಒಂದು ಸುತ್ತು ಕರೆದುಕೊಂಡು ಹೋಗುವುದಾಗಿ ಹೇಳಿ ಆಟೋ ಹತ್ತಿಸಿಕೊಂಡಿದ್ದಾನೆ. ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ 5 ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದಾನೆ. ಇದಾದ ಬಳಿಕ ಬಾಲಕಿ ಪ್ರಜ್ಞಾಹೀನಳಾಗಿದ್ದಾಳೆ. ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.