ಮಂತ್ರಿ ಸ್ಥಾನಕ್ಕಾಗಿ ಮನೆ ಮನೆಗೆ ಓಡಾಡಲ್ಲ

ಒಳ್ಳೆಯ ಸರಕಾರ ಕೊಡಬೇಕಿದ್ದರೆ ಒಳ್ಳೆಯ ಮಂತ್ರಿ ಇರಬೇಕು ನಾಯಕತ್ವಕ್ಕೆ ಮಹತ್ವ ಕೊಡಬೇಕು

Team Udayavani, Dec 11, 2019, 2:37 PM IST

11-December-18

ಶಿರಸಿ: ಮಂತ್ರಿ ಸ್ಥಾನಕ್ಕಾಗಿ ಯಾವುದೇ ಕಾರಣಕ್ಕೂ ಬಯೋಡಾಟಾ ಹಿಡಿದು ಮನೆ ಮನೆಗೆ ಓಡಾಟ ಮಾಡುವುದಿಲ್ಲ. ಒಳ್ಳೆಯ ಸರಕಾರ ಕೊಡಬೇಕಿದ್ದರೆ ಒಳ್ಳೆಯ ಮಂತ್ರಿ ಇರಬೇಕು ಎಂದು ಮಾಜಿ ಕೇಂದ್ರ ಸಚಿವ, ಬಿಜೆಪಿ ಶಾಸಕ ಬಸವರಾಜ ಪಾಟಿಲ ಯತ್ನಾಳ ಹೇಳಿದರು.

ಅವರು ಗೋಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾನು ಯಡಿಯೂರಪ್ಪ ಅವರ ಸರಕಾರದಲ್ಲಿ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಬೇಡಿಕೆ ಯಾಕೆ ಇಡಬೇಕು. ಅರ್ಹತೆ, ಯೋಗ್ಯತೆ, ನಮ್ಮದೇ ಕಾರ್ಯಶೈಲಿಯ ಬಗ್ಗೆ ನಮ್ಮ ಪಕ್ಷದ ಹೈ ಕಮಾಂಡ್‌ಗೂ ಗೊತ್ತಿದೆ. ತೀರ್ಮಾನ ಮುಖ್ಯಮಂತ್ರಿಗಳಿಗೆ, ಹೈ ಕಮಾಂಡ್‌ಗೆ ಬಿಟ್ಟದ್ದು ಎಂದರು.

ಮೂರುವರೆ ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳು. ಕೇಂದ್ರದವರಿಗೂ, ತೊಂದರೆ ಕೊಡುವವರಿಗೂ ಕರ್ನಾಟಕದಲ್ಲಿ ಇವರ ನೇತೃತ್ವ ಎಂಬುದನ್ನು ಮತದಾರರೂ ಸಾಬೀತು ಮಾಡಿದ್ದಾರೆ. ಮಹಾರಾಷ್ಟ್ರದ ಬಳಿಕ ಕೇಂದ್ರದವರೂ ತೊಂದರೆ ಕೊಡೋದಿಲ್ಲ. ಸ್ಥಳೀಯ ನಾಯಕತ್ವ, ರಾಜ್ಯ ನಾಯಕತ್ವಕ್ಕೆ ಮಹತ್ವ ಕೊಡಬೇಕು ಎಂಬುದು ಗೊತ್ತಾಗಿದೆ. ದಿಢೀರ್‌ ಸಾಹಸ ಮಾಡುವುದಿಲ್ಲ ಎಂದರು.

ಏಸಿ ರೂಮಿನಲಿ ಕುಳಿತರೆ ಏನೂ ಆಗದು. ಜನರ ಜೊತೆ ಸ್ಪಂದನೆ ಇಟ್ಟುಕೊಳ್ಳಬೇಕು. ಕಳೆದ ಉಪ ಚುನಾವಣೆಯಲ್ಲಿ ಸ್ಟಾರ್‌ ಪ್ರಚಾರಕರು ಬಂದರೆ ಹತ್ತು ಜನ ಕೂಡ ಸೇರಿರಲಿಲ್ಲ. ಜನ ಸೇರಿ ಅವರು ಸ್ಟಾರ್‌ ಪ್ರಚಾರಕರಾಗಬೇಕು. ಅವರನ್ನು ಜನ ಸ್ಟಾರ್‌ ಮಾಡುತ್ತಾರೆ. ಈ ಘಟನೆಗಳು ಗಂಭೀರ ನೋವಾಗಿದೆ. ಯತ್ನಾಳರ ಮುಗಿ ಬೀಳುತ್ತಿದ್ದಾರೆ ಎಂಬುದೂ ಗೊತ್ತಾಗಿದೆ ಎಂದೂ ಹೇಳಿದರು.

ರಾಜ್ಯಾಧ್ಯಕ್ಷರು ಬಹಳ ಒಳ್ಳೆಯವರು. ಮುಗ್ಧರು. ಒಮ್ಮೊಮ್ಮೆ ಅದೂ ದುರುಪಯೋಗ ಆಗುತ್ತದೆ ಎಂದೂ ಮಾರ್ಮಿಕವಾಗಿ ನುಡಿದ ಅವರು, ಉತ್ತರ ಕರ್ನಾಟಕಕ್ಕೆ ಅನೇಕ ಮೂಲಭೂತ ಸೌಲಭ್ಯಗಳು ಅಗತ್ಯವಾಗಿದೆ. ಪ್ರವಾಹದ ಪರಿಣಾಮದಿಂದ ಅನೇಕ ಶಾಶ್ವತ ಕೆಲಸಗಳೂ ಆಗಬೇಕಿದೆ. ಮುಖ್ಯಮಂತ್ರಿಗಳೂ ಉತ್ತರ ಕರ್ನಾಟಕಕ್ಕೂ ಆದ್ಯತೆ ನೀಡುವುದಾಗಿ ಹೇಳಿದ್ದರೆ. ಉತ್ತರ ಕರ್ನಾಟಕ ಕೂಡ ಇಂದು ಬಿಜೆಪಿಯ ಭದ್ರಕೋಟೆ. ದೇವೇಗೌಡರ ಭದ್ರಕೊಟೆ ಕೆ.ಆರ್‌. ಪೇಟೆಯಲ್ಲೂ ಬಿಜೆಪಿ ಬಂದಿದೆ.

ಬೀದರ್‌ದಿಂದ ಚಾಮರಾಜನಗರ, ಕೊಡಗಿನಿಂದ ಕೋಲಾರ ತನಕ ಸಂಪೂರ್ಣ ಕರ್ನಾಟಕ ಬಿಜೆಪಿ ಆಗಿದೆ ಎಂದರು. ಉತ್ತರ ಕರ್ನಾಟಕ, ಸರಕಾರದಲ್ಲಿ ಈ ಎರಡರ ಆಯ್ಕೆ ಬಂದರೆ ನಾನು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪ್ರವಾಹ ಪೀಡಿತರಿಗೆ ನೆರವಾಗಲು ಕೇಂದ್ರದ ವಿರುದ್ಧನೂ ಧ್ವನಿ ಎತ್ತಿ ಆಗ್ರಹಿಸಿದ್ದೇನೆ.

ಅಗತ್ಯ ಬಿದ್ದರೆ ವಿಧಾನ ಸಭೆ, ಹೊರಗೂ ಧ್ವನಿ ಎತ್ತುತ್ತೇನೆ. 40 ಸಾವಿರ ಕೋಟಿ ರೂ. ಸಾವಿರದ 1200 ಕೋಟಿ ಮಾತ್ರ ಕಳಿಸಿದ್ದಾರೆ. ಸರಕಾರ ವರದಿ ಕಳಿಸಿದ ಬಳಿಕ ಎರಡು ಹಾಗೂ ಮೂರನೇ ಕಂತು ಹಣ ಬರಬಹುದು ಎಂದ ಅವರು, ಎರಡನೇ ಕಂತು ಮೂರನೇ ಕಂತು ಕೊಡುತ್ತಾರೆ ಎಂಬ ವಿಶ್ವಾಸವಿದೆ. ಸರಕಾರ ನೆರೆಯ ಹಾನಿಗೆ, ಸಾಲ ಮನ್ನಾ, ನೀರಾವರಿ ಯೋಜನೆ ಸೇರಿದಂತೆ ಅನೇಕ ಕಾರ್ಯಗಳು ಆಗಬೇಕಿದೆ ಎಂದರು.

ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಅವರು ಅಂದು ಆಡಿದ ಮಾತುಗಳು ಚುನಾವಣೆಗೆ ಮಾತ್ರ ಸೀಮಿತವಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ ಎಂದೂ ಹೇಳಿದರು.

ಟಾಪ್ ನ್ಯೂಸ್

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.