ಕಾಮಗಾರಿ ಸಕಾಲಕ್ಕೆ ಮುಗಿಯದಿದ್ದರೆ ಹಣವಿಲ್ಲ


Team Udayavani, Dec 12, 2019, 3:27 PM IST

kopala-tdy-1

ಕೊಪ್ಪಳ: 2017-18ನೇ ಸಾಲಿನ ಕಾಮಗಾರಿಗಳನ್ನು ಪೂರ್ಣಗೊಳಿಸಲು ಡಿಸೆಂಬರ್‌-2019ರ ಅಂತ್ಯದವರೆಗೆ ಕಾಲಮಿತಿ ನಿಗದಿ ಪಡಿಸಲಾಗಿತ್ತು. ಆದರೆ ಇಲ್ಲಿವರೆಗೂ ಬಹುತೇಕ ಕಾಮಗಾರಿಗಳು ಅಪೂರ್ಣವಾಗಿವೆ. ಇಂತಹ ಕಾಮಗಾರಿಗಳಿಗೆ ಡಿಸೆಂಬರ್‌ ಅಂತ್ಯದವರೆಗಿನ ಪ್ರಗತಿಗೆ ಸಂಬಂ ಧಿಸಿದ ಅನುದಾನ ಮಾತ್ರ ಬಿಡುಗಡೆ ಮಾಡಲಾಗುವುದುಎಂದು ಕೆಆರ್‌ಐಡಿಎಲ್‌ ಅ ಧಿಕಾರಿಗಳಿಗೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್‌ ಹೇಳಿದರು.

ನಗರದ ಜಿಪಂ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆಆರ್‌ಐಡಿಎಲ್‌ಗೆ ನೀಡಿದ 2016-17, 2017-18ನೇ ಸಾಲಿನ ಕಾಮಗಾರಿಗಳನ್ನು ಇದುವರೆಗೂ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಈ ಸಾಲಿನ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಂತಿಮವಾಗಿ ಡಿಸೆಂಬರ್‌-2019ರ ವರೆಗೆ ಕಾಲಮಿತಿ ನಿಗದಿ ಪಡಿಸಿದೆ. ಅಷ್ಟರಲ್ಲಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಆ ಅವಧಿವರೆಗಿನ ಕಾಮಗಾರಿ ವೆಚ್ಚವನ್ನು ಮಾತ್ರ ಮಂಡಳಿಯಿಂದ ಬಿಡುಗಡೆ ಮಾಡಲಾಗುವುದು. ಬಾಕಿ ಅನುದಾನವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಹಾಗೂ ಬಾಕಿ ಉಳಿದ ಕಾಮಗಾರಿಗೆ ಸಂಬಂಧಿಸಿದ ಅನುಷ್ಠಾನ ಏಜೆನ್ಸಿಯನ್ನೇ ನೇರ ಹೊಣೆ ಮಾಡಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆ, ಪಂ.ರಾ.ಇಂ. ವಿಭಾಗ, ನಿರ್ಮಿತಿ ಕೇಂದ್ರಗಳಿಗೆ ಸಂಬಂ ಧಿಸಿದ 2017-18 ಮತ್ತು 2018-19ನೇ ಸಾಲಿನ ಕಾಮಗಾರಿಗಳನ್ನು ಕಡ್ಡಾಯವಾಗಿ ಡಿಸೆಂಬರ್‌ ಅಂತ್ಯಕ್ಕೆ ಪೂರ್ಣಗೊಳಿಸಬೇಕು. ವಿಶೇಷ ಕಾಮಗಾರಿ ಪ್ರಕರಣಗಳಿಗೆ ಮಾತ್ರ ಕಾಲಮಿತಿ ವಿಸ್ತರಣೆಗೆ ಅವಕಾಶವಿದ್ದು, ಅವುಗಳಿಗೆ ಸೂಕ್ತ ಕಾರಣಗಳೊಂದಿಗೆ ದಾಖಲೆ ಒದಗಿಸಬೇಕು. ಮಂಡಳಿಯ ನಿಯಮದ ಪ್ರಕಾರ ರೂ. 30 ಲಕ್ಷದವರೆಗಿನ ಕಾಮಗಾರಿಯನ್ನು 3 ತಿಂಗಳು, ರೂ. 30 ಲಕ್ಷದಿಂದ 1 ಕೋಟಿಯವರೆಗಿನ ಕಾಮಗಾರಿಗೆ 5 ತಿಂಗಳು ಹಾಗೂ ರೂ. 1 ಕೋಟಿ ಹಾಗೂ ಮೇಲ್ಪಟ್ಟ ಕಾಮಗಾರಿಗಳನ್ನು 6 ತಿಂಗಳೊಳಗೆ ಆರಂಭಿಸಬೇಕು. ಕಾಮಗಾರಿ ಬದಲಾವಣೆ ಅಥವಾ ಅನುಷ್ಠಾನ ಏಜೆನ್ಸಿಯ ಬದಲಾವಣೆಯ ಅಗತ್ಯವಿದ್ದಲ್ಲಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆತ ಒಂದು ತಿಂಗಳೊಳಗಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದರು.

ಆಡಳಿತಾತ್ಮಕ ಅನುಮೋದನೆ ದೊರೆತ ವರ್ಷಗಳ ನಂತರವೂ ಬಹುತೇಕ ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ ತನವನ್ನು ತೋರಿಸುತ್ತದೆ. ಕೆಕೆಆರ್‌ಡಿಬಿ ಅಡಿ ಬರುವ ಆರು ಜಿಲ್ಲೆಗಳಲ್ಲಿ ಪ್ರಸಕ್ತ ವರ್ಷ ಕೊಪ್ಪಳ ಜಿಲ್ಲೆಯು ಆರ್ಥಿಕ ಸಾಧನೆ ಹಾಗೂ ಭೌತಿಕ ಸಾಧನೆಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಈ ಸಂಗತಿಯು ಸರ್ಕಾರದ ಗಮನಕ್ಕೂ ಬಂದಿದೆ. ಮುಂದಿನ ದಿನಗಳಲ್ಲಿ ಈ ಕುರಿತು ನಡೆಯುವ ಪ್ರಗತಿ ಪರಿಶೀಲನಾ ಸಭೆಗೆ ಎಲ್ಲ ಅನುಷ್ಠಾನ ಏಜೆನ್ಸಿಗಳ ಅಧಿ ಕಾರಿಗಳು ಹಾಜರಾಗಿ ವರದಿ ಸಲ್ಲಿಸಬೇಕು ಎಂದರು.

ಅಧಿಕಾರಿಗಳು ಕ್ರಿಯಾಶೀಲರಾಗಬೇಕು. ಸರ್ಕಾರದ ಕಾಮಗಾರಿಗಳು ಅಭಿವೃದ್ಧಿ ಉದ್ದೇಶ ಹೊಂದಿರುತ್ತವೆ. ಈ ಬಗ್ಗೆ ಸಂಬಂಧಿ ಸಿದ ಅಧಿ ಕಾರಿಗಳ ಜವಾಬ್ದಾರಿ ಹೊಂದಿರಬೇಕು. ಪ್ರಗತಿ ಪರಿಶೀಲನಾ ಸಭೆಗೆ ಬರುವಾಗ ಸಂಪೂರ್ಣ ಮಾಹಿತಿಯೊಂದಿಗೆ ಬರಬೇಕು. ಕೈಯಲ್ಲಿರುವ ಕಾಗದವನ್ನು ನೋಡಿ ಗಿಣಿಪಾಠ ಮಾಡುವುದಲ್ಲ. ನಿಮ್ಮ ಉಸ್ತುವಾರಿಯಲ್ಲಿ ನಡೆಯುವ ಕಾಮಗಾರಿಗಳ ಕುರಿತು ನಿಮಗೆ ಪೂರ್ಣ ಮಾಹಿತಿ ಇಲ್ಲವೆಂದರೆ ನೀವು ಮಾಡುತ್ತಿರುವ ಕೆಲಸವಾದರೂ ಏನು ಎಂದು ಅವರು ಅಧಿಕಾರಿಗಳಿಗೆ ಪ್ರಶ್ನಿಸಿದರು.

ಕೆಕೆಆರ್‌ಡಿಬಿ ಅನುದಾನದಡೆ ಜಿಲ್ಲೆಯ ವಿವಿಧೆಡೆ ನಿರ್ಮಾಣವಾಗುತ್ತಿರುವ ಬಸ್‌ನಿಲ್ದಾಣಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಬಸ್‌ ನಿಲ್ದಾಣವನ್ನು ಶೀಘ್ರ ಉದ್ಘಾಟಿಸಬೇಕು ಎಂದು ಎನ್‌ಇಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಸತಿ ಶಾಲೆಗಳ ಕಟ್ಟಡ, ಗಂಗಾವತಿಯ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿ, ಜಿಲ್ಲೆಯ ವಿವಿಧೆಡೆ ಸ್ಥಾಪಿಸಬೇಕಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿ, ಮುಂತಾದವುಗಳ ಕುರಿತು ಪ್ರಗತಿ ವರದಿ ಪರಿಶೀಲಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌, ಜಿಪಂ ಸಿಇಒ ರಘುನಂದನ್‌ ಮೂರ್ತಿ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ನೇಹಾ ಜೈನ್‌ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಅನುಷ್ಠಾನ ಏಜೆನ್ಸಿಗಳ ಅಧಿ ಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.