ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ : ವರ್ಷದ 11ನೇ ಪ್ರಶಸ್ತಿಯತ್ತ ಕೆಂಟೊ ಮೊಮೊಟ
Team Udayavani, Dec 14, 2019, 11:03 PM IST
ಗ್ವಾಂಗ್ಜೂ: ಜಪಾನಿನ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕೆಂಟೊ ಮೊಮೊಟ ವರ್ಷದ 11ನೇ ಪ್ರಶಸ್ತಿಯತ್ತ ದಾಪುಗಾಲಿಕ್ಕಿದ್ದಾರೆ. ರವಿವಾರ ನಡೆಯುವ “ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್’ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಪ್ರಶಸ್ತಿ ಕಾಳಗದಲ್ಲಿ ಅವರು ಇಂಡೋನೇಶ್ಯದ ಆ್ಯಂಟನಿ ಸಿನಿಸುಕ ಗಿಂಟಿಂಗ್ ಸವಾಲನ್ನು ಎದುರಿಸಲಿದ್ದಾರೆ.
ವಿಶ್ವದ ನಂಬರ್ ವನ್ ಬ್ಯಾಡ್ಮಿಂಟನ್ ಆಟಗಾರನಾಗಿರುವ ಕೆಂಟೊ ಮೊಮೊಟ ಶನಿವಾರದ ಸೆಮಿಫೈನಲ್ನಲ್ಲಿ ತೈವಾನ್ನ ವಾಂಗ್ ಜು ವೀ ಅವರನ್ನು 21-17, 21-12 ನೇರ ಗೇಮ್ಗಳಲ್ಲಿ ಮಣಿಸಿದರು.
ಇನ್ನೊಂದು ಸೆಮಿ ಫೈನಲ್ನಲ್ಲಿ ವಿಶ್ವದ ನಂ. 8 ಆಟಗಾರ ಗಿಂಟಿಂಗ್ 21-15, 21-15ರಿಂದ ಚೀನದ ಹಾಲಿ ಒಲಿಂಪಿಕ್ ಚಾಂಪಿಯನ್ ಚೆಂಗ್ ಲಾಂಗ್ ವಿರುದ್ಧ ಜಯ ಸಾಧಿಸಿದರು.
ವನಿತಾ ಸಿಂಗಲ್ಸ್ ಫೈನಲ್
ವನಿತಾ ಫೈನಲ್ನಲ್ಲಿ ವಿಶ್ವದ ನಂ.2 ಆಟಗಾರ್ತಿ ಚೀನದ ಚೆನ್ ಯುಫಿ ಮತ್ತು ತೈವಾನ್ನ ಅಗ್ರ ಶ್ರೇಯಾಂಕಿತೆ ತೈ ಜು ವಿಂಗ್ ನಡುವೆ ನಡೆಯಲಿದೆ.
ಚೆನ್ ಯುಫಿ ಜಪಾನಿನ ಅಕಾನೆ ಯಮಾಗುಚಿ ಅವರನ್ನು 21-18, 21-9 ಅಂಕಗಳಿಂದ, ತೈ ಜು ವಿಂಗ್ ಮತ್ತೋರ್ವ ಜಪಾನಿ ಆಟಗಾರ್ತಿ ನೊಜೊಮಿ ಒಕುಹಾರಾ ಅವರನ್ನು 21-15, 21-18 ಅಂತರದಿಂದ ಮಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ