ಸಿರ್ಸಿ ಸೇತುವೆ ಸುತ್ತ ಸಂಚಾರ ದಟ್ಟಣೆ

Team Udayavani, Dec 17, 2019, 10:15 AM IST

bng-tdy-1

ಬೆಂಗಳೂರು: ಮೈಸೂರು ರಸ್ತೆಯ ಬಾಲಗಂಗಾಧರ ನಾಥ ಸ್ವಾಮೀಜಿ ಮೇಲ್ಸೇತುವೆಯ (ಸಿರ್ಸಿ ಮೇಲ್ಸೇತುವೆ) ಮೈಸೂರು ರಸ್ತೆಯಿಂದ ಪುರಭವನ ಕಡೆಯ ಮಾರ್ಗದಲ್ಲಿ ದುರಸ್ತಿ ಕಾಮಗಾರಿ ಸೋಮವಾರ ಪ್ರಾರಂಭವಾದ ಹಿನ್ನೆಲೆಯಲ್ಲಿ ಮೈಸೂರು ರಸ್ತೆ ಸೇರಿದಂತೆ ಸುತ್ತಮುತ್ತ ಭಾಗದಲ್ಲಿ ವಾಹನ ದಟ್ಟಣೆ ಉಂಟಾಗಿ ಜನ ಪರದಾಡುವಂತಾಯಿತು.

ಸಿರ್ಸಿ ಮೇಲ್ಸೇತುವೆಯ ಮೈಸೂರು ರಸ್ತೆಯಿಂದ ಪುರಭವನ ಕಡೆಗೆ ಸಾಗುವ ಮಾರ್ಗದಲ್ಲಿ ಸೋಮವಾರ ಮಧ್ಯಾಹ್ನ 12ಗಂಟೆಯಿಂದ ಡಾಂಬರೀಕರಣ ಕಾಮಗಾರಿ ಪ್ರಾರಂಭಿಸಲಾಗಿತ್ತು. ಸಾರ್ವಜನಿಕರಿಗೆ ಮಾರ್ಗ ಬದಲಾವಣೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ಸಂಚಾರ ದಟ್ಣಣೆ ಅಧಿಕವಾಗಿತ್ತು. ಪುರಭವನ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಸಾಗುವ ಒಂದು ಮಾರ್ಗವನ್ನು ಕಳೆದ ಮಾರ್ಚ್‌ನಲ್ಲಿ ನೂತನ ತಂತ್ರಜ್ಞಾನ ಬಳಸಿಕೊಂಡು ಡಾಂಬರೀಕರಣ ಮಾಡಲಾಗಿತ್ತು. ಈಗ ಮತ್ತೂಂದು ಭಾಗದ ರಸ್ತೆಗೆ ಡಾಂಬರೀಕರಣ ಕಾಮಗಾರಿಗೆ ನಗರ ಪೊಲೀಸ್‌ ಇಲಾಖೆ ಅನುಮತಿ ನೀಡಿದ್ದು, ಸೋಮವಾರದಿಂದ ಬಿಬಿಎಂಪಿ ಕಾಮಗಾರಿ ಪ್ರಾರಂಭಿಸಿದೆ. 2.65 ಕಿ.ಮೀ ಉದ್ದದ ಮೇಲ್ಸೇತುವೆಯನ್ನು ಒಟ್ಟು ಎರಡು ಹಂತದಲ್ಲಿ ಕಾಮಗಾರಿ ನಡೆಸುವುದಕ್ಕೆ ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.

ದುರಸ್ತಿಯ ಮೊದಲ ಹಂತ ಕಾಮಗಾರಿಯನ್ನು ಮೈಸೂರು ರಸ್ತೆ ಕಡೆಯಿಂದ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಒಟ್ಟು 1.6 ಕಿ.ಮೀ ಉದ್ದ ಮೇಲ್ಸೇತುವೆ ಕಾಮಗಾರಿ ನಡೆಸುವುದಕ್ಕೆ ಉದ್ದೇಶಿಸಲಾಗಿದೆ. ಈ ಕಾಮಗಾರಿ ಮುಗಿದ ನಂತರ ಎರಡನೇ ಹಂತದಲ್ಲಿ ಟಿ.ಸಿ.ಎನ್‌. ರಾಯನ್‌ ವೃತ್ತದಿಂದ ಪುರಭವನದ ಬಳಿ ಮೇಲ್ಸೇತುವೆ ಮುಕ್ತಾಯವಾಗುವವರೆಗೆ ನಡೆಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೋಮವಾರ ಉಳಿದ ದಿನಗಳಿಗಿಂತ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಕಾಮಗಾರಿ ನಡೆಸುವ ಪಥವನ್ನು ಸ್ಥಗಿತಗೊಳಿಸಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು. ರಸ್ತೆಯ ಮೇಲ್ಪದರ ತೆರವು ಕಾರ್ಯ ಆರಂಭಿಸಲಾಗಿದ್ದು, ಡಾಂಬರ್‌ ಫ್ರೆಮರ್‌ ಸಿಂಪಡಣೆ ಬುಧವಾರದ ವೇಳೆಗೆ ಪೂರ್ಣಗೊಳ್ಳಲಿದೆ. ನಂತರ ಟಿಕ್ಕಿ ಟಾಕ್‌ ಶೀಟ್‌ ಹರಡಿ ಡಾಂಬರೀಕರಣ ಮಾಡಲಾಗುವುದು ಎಂದು ಗುತ್ತಿಗೆದಾರ ಸಂಸ್ಥೆಯ ವ್ಯವಸ್ಥಾಪಕ ಸಿದ್ದರಾಮು ತಿಳಿಸಿದ್ದಾರೆ.

ಮೈಸೂರು ರಸ್ತೆ ಕಡೆಯಿಂದ ಮೇಲ್ಸೇತುವೆ ಆರಂಭದಿಂದ (ನಳಂದ ಚಿತ್ರಮಂದಿರ) ರಾಯನ್‌ ವೃತ್ತದವರೆಗೆ ಕಾಮಗಾರಿ ನಡೆಸುವುದಕ್ಕೆ ಪೊಲೀಸ್‌ ಇಲಾಖೆ 15 ದಿನ ಕಾಲಾವಕಾಶ ನೀಡಿದೆ.

ಮೇಲ್ಸೇತುವೆಯಲ್ಲಿ ಡಾಂಬರೀಕರಣ ಮಾಡಬೇಕಾದ ತುರ್ತು ಅಗತ್ಯವಿದೆ. ಹೀಗಾಗಿ, ಈ ಭಾಗದ ವಾಹನದಾರರು, ಸವಾರರಿಗೆ ಸಂಚಾರ ದಟ್ಟಣೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಸಮಸ್ಯೆ ಆಗದಂತೆ ಸಾಧ್ಯವಾದಷ್ಟು ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಅನಿಲ್‌ ಕುಮಾರ್‌, ಬಿಬಿಎಂಪಿ ಆಯುಕ್ತ

ಟಾಪ್ ನ್ಯೂಸ್

Bengaluru rain: ಮಳೆಗೆ ವಿದೇಶಿ ತಳಿ ಮರಗಳೇ ಹೆಚ್ಚು ಧರೆಗೆ

Bengaluru rain: ಮಳೆಗೆ ವಿದೇಶಿ ತಳಿ ಮರಗಳೇ ಹೆಚ್ಚು ಧರೆಗೆ

ದೇಶದಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ… ಅಲರ್ಟ್ ಆದ ಪೊಲೀಸರು

ದೇಶದಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ… ಅಲರ್ಟ್ ಆದ ಪೊಲೀಸರು

Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

Shivamogga: ಪೊಲೀಸರ ಮೇಲೆ ಹಲ್ಲೆ ಯತ್ನ… ರೌಡಿ ಶೀಟರ್ ಶೋಹಿಬ್ ಕಾಲಿಗೆ ಗುಂಡೇಟು

Shivamogga: ಪೊಲೀಸರ ಮೇಲೆ ಹಲ್ಲೆ ಯತ್ನ… ರೌಡಿ ಶೀಟರ್ ಶೋಹಿಬ್ ಕಾಲಿಗೆ ಗುಂಡೇಟು

ಆನೆ ಕಂಡು ಚರಂಡಿಗೆ ಇಳಿದ ಬೊಲೇರೋ… ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಿಟಿ

ಆನೆ ಕಂಡು ಚರಂಡಿಗೆ ಇಳಿದ ಬೊಲೆರೋ… ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಿಟಿ

Coconut Water ಹೆಚ್ಚಿದ ಬಿಸಿಲ ಬೇಗೆ: ಎಳನೀರಿಗೆ 60 ರೂ.!

Coconut Water ಹೆಚ್ಚಿದ ಬಿಸಿಲ ಬೇಗೆ: ಎಳನೀರಿಗೆ 60 ರೂ.!

Hijab ಧಾರಿಣಿ ಮೊದಲ ಮುಸ್ಲಿಂ ಪ್ರಧಾನಿ: ಸಂಸದ ಅಸಾದುದ್ದೀನ್‌ ಒವೈಸಿ

Hijab ಧಾರಿಣಿ ಮೊದಲ ಮುಸ್ಲಿಂ ಪ್ರಧಾನಿ: ಸಂಸದ ಅಸಾದುದ್ದೀನ್‌ ಒವೈಸಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru rain: ಮಳೆಗೆ ವಿದೇಶಿ ತಳಿ ಮರಗಳೇ ಹೆಚ್ಚು ಧರೆಗೆ

Bengaluru rain: ಮಳೆಗೆ ವಿದೇಶಿ ತಳಿ ಮರಗಳೇ ಹೆಚ್ಚು ಧರೆಗೆ

14

ಡ್ರೈವಿಂಗ್‌ ಸೀಟ್‌ನಲ್ಲಿ ಕೂತು ಎಕ್ಸಿಲೇಟರ್‌ ತುಳಿದ ಬಾಲಕ: ಕಾರು ಹರಿದು 5ರ ಮಗು ಮೃತ್ಯು

Theft: ಮಹಿಳೆಯ ಕೊಂದು ಚಿನ್ನದ ಸರ ದೋಚಿದ

Theft: ಮಹಿಳೆಯ ಕೊಂದು ಚಿನ್ನದ ಸರ ದೋಚಿದ

Bengaluru: 20 ಸಾವಿರ ರೂ. ಸಾಲ ವಾಪಸ್‌ ಕೊಡದಿದ್ದಕ್ಕೆ ಸ್ನೇಹಿತನ ಕೊಲೆ

Bengaluru: 20 ಸಾವಿರ ರೂ. ಸಾಲ ವಾಪಸ್‌ ಕೊಡದಿದ್ದಕ್ಕೆ ಸ್ನೇಹಿತನ ಕೊಲೆ

Crime: ರಿಯಲ್‌ ಎಸ್ಟೇಟ್‌ ಉದ್ಯಮಿ ಕೊಲೆ ಕೇಸ್‌; 9 ಮಂದಿ ಬಂಧನ

Crime: ರಿಯಲ್‌ ಎಸ್ಟೇಟ್‌ ಉದ್ಯಮಿ ಕೊಲೆ ಕೇಸ್‌; 9 ಮಂದಿ ಬಂಧನ

MUST WATCH

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

ಹೊಸ ಸೇರ್ಪಡೆ

Bengaluru rain: ಮಳೆಗೆ ವಿದೇಶಿ ತಳಿ ಮರಗಳೇ ಹೆಚ್ಚು ಧರೆಗೆ

Bengaluru rain: ಮಳೆಗೆ ವಿದೇಶಿ ತಳಿ ಮರಗಳೇ ಹೆಚ್ಚು ಧರೆಗೆ

ದೇಶದಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ… ಅಲರ್ಟ್ ಆದ ಪೊಲೀಸರು

ದೇಶದಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ… ಅಲರ್ಟ್ ಆದ ಪೊಲೀಸರು

3

Sandalwood: ನಿರುದ್ಯೋಗದ ಸುತ್ತ ಗಾಂಧಿನಗರ

Sandalwood: ಟ್ರೇಲರ್‌ನಲ್ಲಿ ಮೂರನೇ ಕೃಷ್ಣಪ್ಪ

Sandalwood: ಟ್ರೇಲರ್‌ನಲ್ಲಿ ಮೂರನೇ ಕೃಷ್ಣಪ್ಪ

Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.