ಆರ್ಬಿಐನಿಂದ ಬಾಂಡ್ ವಹಿವಾಟು
Team Udayavani, Dec 20, 2019, 11:14 PM IST
ಮುಂಬಯಿ: ದೇಶದಲ್ಲಿ ವಿತ್ತೀಯ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಆರ್ಬಿಐ ಇದೇ ಮೊದಲ ಬಾರಿಗೆ ಸರಕಾರಿ ಬಾಂಡ್ಗಳನ್ನು ಮಾರುವ ಮತ್ತು ಕೊಳ್ಳುವ ಪ್ರಕ್ರಿಯೆ ನಡೆಸಲು ನಿರ್ಧರಿಸಿದೆ. ಬಾಂಡ್ಗಳ ಮಾರಾಟ ಮತ್ತು ಕೊಳ್ಳುವಿಕೆಗೆ 10 ಸಾವಿರ ಕೋಟಿ ವಿನಿಯೋಗ ಮಾಡಲಾಗುತ್ತಿದ್ದು, ಡಿ.23ರಂದು ಈ ಪ್ರಕ್ರಿಯೆ ನಡೆಯಲಿದೆ.
ಅಮೆರಿಕದಲ್ಲಿ ದಶಕಗಳ ಹಿಂದೆ “ಆಪರೇಷನ್ ಟ್ವಿಸ್ಟ್’ ಎಂಬ ಹೆಸರಿನಲ್ಲಿ ಇದೇ ಮಾದರಿಯ ಪ್ರಕ್ರಿಯೆಯನ್ನು ಏಕ ಕಾಲದಲ್ಲಿ ನಡೆಸಲಾಗಿತ್ತು. ಡಿ.5ರಂದು ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಬಳಿಕ ಬಾಂಡ್ಗಳಿಗೆ ಹೆಚ್ಚಿನ ಬೇಡಿಕೆ ಇದೆ. 2020ರಲ್ಲಿ ಮೆಚ್ಯುರಿಟಿಯಾಗಲಿರುವ 10 ವರ್ಷದ ಅವಧಿ ಪೂರೈಸಿರುವ ಸರಕಾರಿ ಬಾಂಡ್ಗಳನ್ನು ಮಾರಾಟ ಮಾಡಲಿದೆ. ಜತೆಗೆ 2029ರಲ್ಲಿ ಮೆಚ್ಯುರಿಟಿಯಾಗಲಿರುವ ಮತ್ತೂಂದು ಹಂತದ ಸರಕಾರಿ ಬಾಂಡ್ಗಳನ್ನು ಹರಾಜಿನ ಮೂಲಕ ಖರೀದಿ ಮಾಡಲಿದೆ. ಯಾರು ಎಷ್ಟು ಪ್ರಮಾಣದಲ್ಲಿ ಬಾಂಡ್ ಖರೀದಿ ಮಾಡಬೇಕು ಎಂಬ ಪ್ರಮಾಣವನ್ನು ತಾನೇ ನಿರ್ಧರಿಸುವುದಾಗಿ ಆರ್ಬಿಐ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ