ಚಿಕನ್‌-ಮಟನ್‌ ಮಳಿಗೆ ಉದ್ಘಾಟನೆ ಯಾವಾಗ?

Team Udayavani, Dec 23, 2019, 4:09 PM IST

23-December-18

ದೇವಪ್ಪ ರಾಠೊಡ
ಮುದಗಲ್ಲ
: ಸ್ಥಳೀಯ ಪುರಸಭೆ ವತಿಯಿಂದ ತರಕಾರಿ ಮಾರುಕಟ್ಟೆ ಪಕ್ಕದಲ್ಲಿ ನಿರ್ಮಿಸಿರುವ ಚಿಕನ್‌ ಮತ್ತು ಮಟನ್‌ ಮಳಿಗೆಗಳ ಉದ್ಘಾಟನೆ ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

2013-14ರಲ್ಲಿ ಪುರಸಭೆಯ ಬಿಆರ್‌ಜಿಎಫ್‌ ಯೋಜನೆಯಡಿ ಸುಮಾರು 11ಲಕ್ಷ ರೂ. ಗಳಲ್ಲಿ 8 ಮೀನು ಮತ್ತು ಮಟನ್‌ ವ್ಯಾಪಾರ ಮಳಿಗೆ ನಿರ್ಮಿಸಲು ಉಮೇಶ ನಾಗರಬೆಂಚಿ ಎಂಬುವರಿಗೆ ಟೆಂಡರ್‌ ನೀಡಲಾಗಿತ್ತು. ಇನ್ನು 10 ಲಕ್ಷ ರೂ.ಗಳಲ್ಲಿ 8 ಚಿಕನ್‌ ವ್ಯಾಪಾರ ಮಳಿಗೆಯನ್ನು ಯಲ್ಲಪ್ಪ ಭೋವಿ ಎಂಬುವರಿಗೆ ಗುತ್ತಿಗೆ ನೀಡಿದ ಆಗಿನ ಪುರಸಭೆ ಆಡಳಿತ ಕಟ್ಟಡ ಕಾಮಗಾರಿ ಮುಗಿದು 1 ವರ್ಷ ಗತಿಸಿದರೂ ಪುರಸಭೆ ಅಧಿಕಾರಿಗಳು ಮಳಿಗೆಗಳನ್ನು ತಮ್ಮ ಸುಪರ್ದಿಗೆ ಪಡೆದು ಮಳಿಗೆ ಉದ್ಘಾಟನೆಗೆ ಮುಂದಾಗಿಲ್ಲ. ಹೀಗಾಗಿ ನಾವು ಸಮಸ್ಯೆ ಎದುರಿಸುವಂತಾಗಿದೆ ಎನ್ನುತ್ತಾರೆ ಚಿಕನ್‌, ಮಟನ್‌ ವ್ಯಾಪಾರಿಗಳು.

ಈ ಹಿಂದೇ ಇದೇ ಬಯಲು ಜಾಗದಲ್ಲಿ ಸುಮಾರು ವರ್ಷಗಳಿಂದ ಚಿಕನ್‌ ಮತ್ತು ಮಟನ್‌ ಕಡಿದು ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದೇವು. ಆದರೆ 2013-14ರಲ್ಲಿ ಚಿಕನ್‌ ಮತ್ತು ಮಟನ್‌ ವ್ಯಾಪಾರದ ಮಳಿಗೆ ನಿರ್ಮಿಸಿಕೊಡುವುದಾಗಿ ಹೇಳಿದ ಪುರಸಭೆ ಅಧಿಕಾರಿಗಳು, ನಮ್ಮ ಅಂಗಡಿಗಳನ್ನು ತೆರವುಗೊಳಿಸಿದ್ದರು. ಚಿಕನ್‌-ಮಟನ್‌ ಮಾರ್ಕೆಟ್‌ ಮಳಿಗೆ ನಿರ್ಮಿಸಿ ವರ್ಷಗಳೇ ಗತಿಸಿದರೂ ಪುರಸಭೆ ಅಧಿಕಾರಿಗಳು ಮಳಿಗೆಗಳನ್ನು ಉದ್ಘಾಟಿಸಿ ನಮಗೆ ನೀಡುತ್ತಿಲ್ಲ. ಹೀಗಾಗಿ ಚಿಕನ್‌, ಮಟನ್‌ ವ್ಯಾಪಾರವನ್ನು ಬಯಲು ಜಾಗೆ, ರಸ್ತೆ ಬದಿಯಲ್ಲಿ ನಡೆಸಲಾಗುತ್ತಿದೆ. ಬಯಲಲ್ಲಿ ಚಿಕನ್‌ ಮತ್ತು ಮಟನ್‌ ಕತ್ತರಿಸುವುದರಿಂದ ಬಿಸಿಲು, ಧೂಳು ಹಾಗೂ ಗಾಳಿಯಿಂದ ರಕ್ಷಣೆ ಮಾಡುವುದು ಕಷ್ಟವಾಗಿದೆ. ನಾಯಿ, ಹಂದಿ, ಕಾಗೆ ಕಾಟ ತಡೆಯಲು ಆಗುತ್ತಿಲ್ಲ. ಕುಳಿತು ವ್ಯಾಪಾರ ಮಾಡಲು ನೆರಳು, ನೀರಿಲ್ಲ. ತೆರೆದ ಪ್ರದೇಶದಲ್ಲಿ ಚಿಕನ್‌-ಮಟನ್‌ ಇಟ್ಟು ವ್ಯಾಪಾರ ಮಾಡುವುದರಿಂದ ಖರೀದಿಸಲು ಜನ ಹಿಂಜರಿಯುತ್ತಿದ್ದಾರೆ ಎಂದು ಮಾಂಸ ವ್ಯಾಪಾರಿಗಳಾದ ಮುನ್ನಾ, ಶಬ್ಬೀರ, ಮೈಹಿಬೂಬ್‌, ಅನೀಫ್‌, ರಹಿಮಾನ್‌, ಮಹೆಬೂಬ್‌, ಖಾಜಾಸಾಬ್‌ ಹಾಗೂ ಅಲೀಫ್‌ ಪತ್ರಿಕೆ ಮುಂದೆ ತಮ್ಮ ಗೋಳು ತೋಡಿಕೊಂಡರು.

ಮಳಿಗೆ ನೀಡುವಂತೆ ಶಾಸಕ ಹೂಲಗೇರಿ ಅವರಿಗೆ ಮನವಿ ಮಾಡಿದಾಗ ಕಟ್ಟಡದ ಕೆಲ ಭಾಗ ನಿರ್ಮಾಣ ಹಂತದಲ್ಲಿದೆ. ಕಾಮಗಾರಿ ಮುಗಿದ ತಕ್ಷಣ ಉದ್ಘಾಟಿಸಿ ಚಿಕನ್‌-ಮಟನ್‌ ವ್ಯಾಪಾರಸ್ಥರಿಗೆ ಕೊಡಿಸುವುದಾಗಿ ಹೇಳಿ ಎರಡು-ಮೂರು ತಿಂಗಳು ಗತಿಸಿದೆ ಎಂದು ಮಾಂಸ ವ್ಯಾಪಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ. ಇನ್ನಾದರೂ ಪುರಸಭೆ ನಿರ್ಮಿಸಿದ ಮಳಿಗೆಗಳನ್ನು ಉದ್ಘಾಟಿಸಿ ಮಾಂಸ ವ್ಯಾಪಾರಿಗಳಿಗೆ ಹಸ್ತಾಂತರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಈಗಾಗಲೇ ಸಿದ್ಧಗೊಂಡಿರುವ ಚಿಕನ್‌-ಮಟನ್‌ ಮಾರ್ಕೆಟ್‌ ಮಳಿಗೆಗಳನ್ನು ಬಹಿರಂಗ ಹರಾಜು ಹಾಕದೇ, ಪುರಸಭೆ ವತಿಯಿಂದ ಬಾಡಿಗೆ ನಿಗದಿ  ಮಾಡಿ ಇದೇ ಸ್ಥಳದಲ್ಲಿ ಚಿಕನ್‌
-ಮಟನ್‌ ಮಾರಾಟ ಮಾಡುತ್ತಿದ್ದವರಿಗೆ
ನೀಡಬೇಕು.

ಮುನ್ನಾ, ಮಾಂಸ ವ್ಯಾಪಾರಿ ಹೊಸದಾಗಿ ಅಧಿಕಾರ ವಹಿಸಿಕೊಳ್ಳಲಾಗಿದೆ. ಪುರಸಭೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸುವೆ.
ಡಾ| ದಿಲೀಶ್‌ ಶಶಿ ,
ಉಪವಿಭಾಗಾಧಿಕಾರಿಗಳು,
ಆಡಳಿತಾಧಿಕಾರಿ, ಪುರಸಭೆ ಮುದಗಲ್ಲ

ಟಾಪ್ ನ್ಯೂಸ್

Swati Maliwal Arvind Kejriwal’s aide repeatedly kicked her in stomach

AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್

17

ಕಾರ್ತಿಕ್‌ – ಸೂರ್ಯ ಕಾಂಬಿನೇಷನ್ ನ ಬಹು ನಿರೀಕ್ಷಿತ ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ?

Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್

Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್

ಪ್ರಭಾಸ್‌ ಜೀವನಕ್ಕೆ ಬರಲಿದ್ದಾರೆ ವಿಶೇಷ ವ್ಯಕ್ತಿ.. ಮದುವೆ ಆಗಲಿದ್ದಾರಾ ʼಸಲಾರ್‌ʼ ನಟ?

ಪ್ರಭಾಸ್‌ ಜೀವನಕ್ಕೆ ಬರಲಿದ್ದಾರೆ ವಿಶೇಷ ವ್ಯಕ್ತಿ.. ಮದುವೆ ಆಗಲಿದ್ದಾರಾ ʼಸಲಾರ್‌ʼ ನಟ?

Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-

Doddaballapura: ಹೇಮಂತ್ ಗೌಡ ಹತ್ಯೆ ಪ್ರಕರಣ: ಗುಂಡು ಹಾರಿಸಿ ಆರೋಪಿಯ ಬಂಧನ

Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್

Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್

Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ

Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ

Vijayapura; ತ್ಯಾಜ್ಯನೀರಿನ ಸಂಸ್ಕರಣಾಘಟಕ ದುರಂತ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ

Vijayapura; ತ್ಯಾಜ್ಯನೀರಿನ ಸಂಸ್ಕರಣಾಘಟಕ ದುರಂತ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Swati Maliwal Arvind Kejriwal’s aide repeatedly kicked her in stomach

AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್

17

ಕಾರ್ತಿಕ್‌ – ಸೂರ್ಯ ಕಾಂಬಿನೇಷನ್ ನ ಬಹು ನಿರೀಕ್ಷಿತ ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ?

5-

Doddaballapura: ಹೇಮಂತ್ ಗೌಡ ಹತ್ಯೆ ಪ್ರಕರಣ: ಗುಂಡು ಹಾರಿಸಿ ಆರೋಪಿಯ ಬಂಧನ

The Judgement;

The Judgement; ಭವಿಷ್ಯ ನಿರ್ಧರಿಸುವ ಜಡ್ಜ್ಮೆಂಟ್‌: ರವಿಚಂದ್ರನ್‌

Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್

Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.