ಬೇಡಿಕೆಯೇ ದಲ್ಲಾಳಿಗಳಿಗೆ ವರದಾನ „ ಸಮೃದ್ಧಿ ಬೆಳೆ ಬಂದರೂ ರೈತರಿಗಿಲ್ಲ  ಲಾಭ

ಜೋರಾಗಿದೆ ಅವರೆಕಾಯಿ ಮಾರಾಟ

Team Udayavani, Dec 26, 2019, 6:05 PM IST

26-December-24

ತಿರುಮಲೆ ಶ್ರೀನಿವಾಸ್‌
ಮಾಗಡಿ: ಪಟ್ಟಣದ ಮಾರುಕಟ್ಟೆಯಲ್ಲಿ ಅವರೆ ಕಾಯಿ ಮಾರಾಟ ಭರದಿಂದ ನಡೆಯುತ್ತಿದ್ದು, ಇದರಿಂದಾಗಿ ಎಲ್ಲೆಡೆ ಅವರೆ ಕಾಯಿಯ ಸೊಗಡು ಗಮಗಮಿಸುತ್ತಿದೆ. ಮಾಗಡಿ ಕಲ್ಲುಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶವಾಗಿದೆ. ಇಲ್ಲಿನ ಕೆಂಪು ಮರಳು ಮಿಶ್ರಿತ ಮಣ್ಣಿನಲ್ಲಿ ಬೆಳೆದ ಅವರೆಕಾಯಿ ಬಹಳ ಚೆನ್ನಾಗಿ ಬರುತ್ತದೆ. ಬಿಸಿಲಿನ ತಾಪಮಾನ ಹೆಚ್ಚಾದಂತೆಲ್ಲ ಅವರೆಕಾಯಿಯ ಸೊಗಡು ಹೆಚ್ಚಾಗಿಯೇ ಇರುತ್ತದೆ. ರುಚಿಯೂ ಅಧಿಕವಾಗಿರುತ್ತದೆ. ಇದರಿಂದ ಬೆಂಗಳೂರಿನಲ್ಲಿ ಮಾಗಡಿ ಅವರೆಕಾಯಿಗೆ ಭಾರಿ ಬೇಡಿಕೆ ಇದೆ.

ದಲ್ಲಾಳಿಗಳ ಲಾಭ: ತಾಲೂಕಿನಲ್ಲಿ ಸುಮಾರು 3 ಸಾವಿರ ಹೇಕ್ಟರ್‌ ಪ್ರದೇಶದಲ್ಲಿ ಅವರೆಕಾಯಿ ಬೆಳೆಯುತ್ತಾರೆ. ರೈತರು ತಮ್ಮ ಹೊಲದಲ್ಲಿ ಅವರೆಕಾಯಿ ಕಿತ್ತು ಮುಂಜಾನೆಯೇ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ. ಇದಕ್ಕಾಗಿಯೇ ದಳ್ಳಾಳಿಗಳು ಬೆಂಗಳೂರಿನಿಂದ ಮಾಗಡಿಗೆ ಬಂದು ಕಡಿಮೆ ಬೆಲೆಗೆ ಖರೀದಿಸಿ, ಬೆಂಗಳೂ ರಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಕೊಳ್ಳುತ್ತಾರೆ.

ಹುಣುಸೂರು ಅವರೆಕಾಯಿ ಮಾರಾಟ: ಮಾಗಡಿ ಅವರೆಕಾಯಿಗೆ ಬೇಡಿಕೆ ಹೆಚ್ಚಾದಂತೆಲ್ಲ. ಬೆಲೆಯಲ್ಲಿಯೂ ಹೆಚ್ಚಾಗಿದ್ದು, ಮಾಗಡಿಯಲ್ಲಿ ಕೆ.ಜಿ. ಅವರೆಕಾಯಿಗೆ 35 ರಿಂದ 50 ರೂ. ವರೆಗೂ ಮಾರಾಟವಾಗುತ್ತಿದೆ. ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ಹುಣಸೂರಿನಿಂದ ಕಡಿಮೆ ಬೆಲೆಗೆ ಅವರೆಕಾಯಿ ಖರೀದಿಸಿ ತಂದು ಮಾಗಡಿ ಅವರೆಕಾಯಿ ಎಂದು ಸುಳ್ಳು ಹೇಳಿ ಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಜನರನ್ನು ಯಾಮಾರಿಸುವುದುಂಟು. ಮಾಗಡಿ ಪಟ್ಟಣದ ಕಲ್ಯಾಗೇಟ್‌ ವೃತ್ತ, ತಾಲೂಕಿನ ವೆಂಗಳಪ್ಪನಹಳ್ಳಿ, ಕುದೂರು, ಮರೂರು, ತಿಪ್ಪಸಂದ್ರ ರಸ್ತೆ ಬದಿಗಳಲ್ಲಿ ಅವರೆಕಾಯಿ ಮಾರಾಟದ ರಾಶಿ,ರಾಶಿ ಕಣ್ಣಿಗೆ ರಾಚುತ್ತದೆ. ಕಾರು,ಬೈಕ್‌ ನಲ್ಲಿ ರಸ್ತೆಯಲ್ಲಿ ಸಂಚರಿಸುವವರು ವಾಹನಗಳನ್ನು ನಿಲ್ಲಿಸಿ ಮಾಗಡಿ ಅವರೆಕಾಯಿ ಎಂದೇ ಖರೀದಿಸುತ್ತಾರೆ. ಕೆಲವೆಡೆ ಮಾಗಡಿ ಅವರೆಕಾಯಿ ಜತೆಗೆ ಹುಣುಸೂರಿನ ಅವರೆ ಕಾಯಿ ಮಿಶ್ರಣ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಜನರನ್ನು ಯಾಮಾರಿಸಿ ಹಣ ಗಳಿಸುವುದರಿಂದ ಗ್ರಾಹಕರ ಅಸಮಧಾನಕ್ಕೂ ಕಾರಣವಾಗಿದೆ.

ಅವರೆಕಾಯಿಯ ಮೇಳ: ಅದರಲ್ಲೂ ಚುಮ ಚುಮ ಚಳಿಗೆ ಅವರೆಕಾಯಿಯ ಖ್ಯಾದಗಳನ್ನು ತಯಾರಿಸಿಕೊಂಡು ಸವಿಯಲು
ಹೇಳಿ ಮಾಡಿಸಿದಂತ ಧನುರ್ಮಾಸ. ಈ ಮಾಸದಲ್ಲೇ ಅವರೆಕಾಯಿಯಿಂದ ತಯಾರಿಸಿದ ಆಹಾರ ಮೇಳ ಸಹ ಹಲವು ವರ್ಷಗಳಿಂದಲೂ ಬೆಂಗಳೂರಿನ ವಿಶ್ವೇಶ್ವರಪುರಂನ ವಾಸವಿ ರಸ್ತೆಯಲ್ಲಿ ಮತ್ತು ಮಲ್ಲೇಶ್ವರಂನಲ್ಲಿ ನಡೆದುಕೊಂಡು ಬರುತ್ತಿದೆ. ಅವರೆಕಾಯಿಯ ಖ್ಯಾದ ಆಹಾರ ಪ್ರಿಯರನ್ನು ಬಾಯಿ ಚಪ್ಪರಿಸುವಂತೆ ಮಾಡುತ್ತದೆ.

ಕೆಂಪು, ಮರಳು ಮಿಶ್ರಿತ ಭೂಮಿಯಾಗಿರುವುದರಿಂದ
ಉತ್ತಮ ಇಳುವರಿಬರುತ್ತದೆ. ಸೊಗಡಿನಿಂದ ಕೂಡಿದ ಮಾಗಡಿ
ಅವರೆಕಾಯಿ ಬಹಳ ರುಚಿಯಾಗಿರುತ್ತದೆ. ಆದ್ದರಿಂದ ಪಟ್ಟಣ ನಗರ ಪ್ರದೇಶದಲ್ಲಿ ಅತ್ಯಂತಬೇಡಿಕೆಯೂ ಇದೆ.
ಶಿವಶೆಂಕರ್‌,
ಸಹಾಯಕ ಕೃಷಿ ನಿರ್ದೇಶಕ

ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ದಳ್ಳಾಳಿಗಳ ಕಪಿ ಮುಷ್ಠಿಗೆ ರೈತರು ಸಲಕಿ ನಷ್ಟ ಹೊಂದಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ಕಾರ ರೈತರು ಬೆಳೆದ ಬೆಳೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ತುಂಬ ಅನಕೂಲವಾಗುತ್ತದೆ.
ಸಿ. ರಾಜಣ್ಣ ,
ವಿಠಲಾಪುರ ರೈತ

ಟಾಪ್ ನ್ಯೂಸ್

1-qweqwqew

Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ

Why Modi doesn’t talk about ladies now: Priyanka Gandhi

Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ

1-wewqewewq

H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

1-qwweqwewq

Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

Priyanka Gandhi Slams PM Modi in Banaskantha Rally

ರಾಹುಲ್ ಸಾಮಾನ್ಯ ಜನರ ಕಷ್ಟ ಕೇಳಿದ್ದಾರೆ, ಆದರೆ ಮೋದಿ ಅರಮನೆಯಲ್ಲಿ ಕುಳಿತಿದ್ದಾರೆ:ಪ್ರಿಯಾಂಕಾ

Allu Arjun: ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿ ದಾಖಲೆ ಬರೆದ ʼಪುಷ್ಪ ಪುಷ್ಪʼ ಹಾಡು

Allu Arjun: ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿ ದಾಖಲೆ ಬರೆದ ʼಪುಷ್ಪ ಪುಷ್ಪʼ ಹಾಡು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Why Modi doesn’t talk about ladies now: Priyanka Gandhi

Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ

ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್‌ ತಂಗಡಗಿ

ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್‌ ತಂಗಡಗಿ

1-wewqewq

Belagavi; ಶೆಟ್ಟರ್ ಅವರಿಗೆ ಆಶೀರ್ವಾದ ಮಾಡಿದ ವಿವಿಧ ಮಠಾಧೀಶರು

ಗದಗ: ಸಂವಿಧಾನ ಧರ್ಮಗ್ರಂಥ ಎಂದವರು ಮೋದಿ- ಬೊಮ್ಮಾಯಿ

ಗದಗ: ಸಂವಿಧಾನ ಧರ್ಮಗ್ರಂಥ ಎಂದವರು ಮೋದಿ- ಬೊಮ್ಮಾಯಿ

ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ

ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqew

Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ

Why Modi doesn’t talk about ladies now: Priyanka Gandhi

Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ

kejriwal 2

AAP ಚುನಾವಣ ಪ್ರಚಾರ ಹಾಡನ್ನು ಅನುಮೋದಿಸಿದ ಆಯೋಗ; ಕೆಲ ಮಾರ್ಪಾಡು

1-wewqewewq

H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

1-qwweqwewq

Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.