ಸಾವಿನಿಂದ ಪಾರು: ಜಪಾನ್ಗೆ ತೆರಳಿದ ಕೆಂಟೊ ಮೊಮೊಟ
Team Udayavani, Jan 16, 2020, 4:19 PM IST
ಕೌಲಾಲಂಪುರ (ಮಲೇಷ್ಯಾ): ಇಲ್ಲಿ ಮೊನ್ನೆ ಸೋಮವಾರ ಬೆಳಗ್ಗಿನ ಜಾವ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವಿನಿಂದ ಪಾರಾಗಿದ್ದ ಜಪಾನಿನ ವಿಶ್ವವಿಖ್ಯಾತ ಬ್ಯಾಡ್ಮಿಂಟನ್ ಆಟಗಾರ ಕೆಂಟೊ ಮೊಮೊಟ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಅವರು ಬುಧವಾರ ಜಪಾನ್ಗೆ ಮರು ಪ್ರಯಾಣ ಬೆಳೆಸಿದ್ದಾರೆ. ಆದರೆ ಇನ್ನೂ ಎರಡು ತಿಂಗಳು ಅವರು ಕ್ರೀಡೆಗೆ ಮರಳುವುದಿಲ್ಲ. ಮೊಮೊಟ ಇತ್ತೀಚೆಗೆ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದಿದ್ದರು. ಅದರ ಮರುದಿನ ಸೋಮವಾರ ಬೆಳಗ್ಗೆ 4.30ರ ಸುಮಾರಿಗೆ ಕೌಲಾಲಂಪುರದ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಹೊರಟಿದ್ದರು.
ಆ ವೇಳೆ ಅವರು ಹೊರಟಿದ್ದ ಕಾರು, ಮುಂದೆ ಚಲಿಸುತ್ತಿದ್ದ ಟ್ರಕ್ಗೆ ಹೋಗಿ ಗುದ್ದಿದೆ. ಘಟನೆಯಲ್ಲಿ ಚಾಲಕ ತೀರಿಕೊಂಡಿದ್ದರೆ, ಮುಖಕ್ಕೆ ಏಟು ಮಾಡಿಕೊಂಡಿದ್ದ ಮೊಮೊಟ ಆಸ್ಪತ್ರೆಗೆ ದಾಖಲಾಗಿದ್ದರು.