ಕಾಳಿಗೂ, ಮೇವಿಗೂ ಸೈ “ಪುಲೆ ಯಶೋಧಾ’ ತಳಿ


Team Udayavani, Jan 25, 2020, 1:22 PM IST

kopala-tdy-2

ಕುಷ್ಟಗಿ: ತಾಲೂಕಿನ ಗುಮಗೇರಾದ ರೈತ ಶರಣಗೌಡ ಮಾಲಿಪಾಟೀಲ ಹಿಂಗಾರು ಹಂಗಾಮಿಗೆ “ಪುಲೆ ಯಶೋಧಾ ತಳಿ ಜೋಳ’ ಬೆಳೆಯುವ ಮೂಲಕ ಗಮನ ಸೆಳೆದಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ| ಎಂ.ಡಿ. ಕಾಚಾಪೂರ ಅವರು ಉತ್ತರ ಕರ್ನಾಟಕದ ಮುಂಗಾರು-ಹಿಂಗಾರು ದೇಶಿ ಜೋಳದ ತಳಿ ಅಧ್ಯಯನ ಸಂದರ್ಭದಲ್ಲಿ ಮಾಲ್ದಂಡಿ ಬಿಳಿಜೋಳದಿಂದ ಅಭಿವೃದ್ಧಿ ಪಡಿಸಿದ ಪುಲೆ ಯಶೋಧಾ ಹೆಸರಿನ ಬಿಳಿಜೋಳ ತಳಿಯ ಬಿತ್ತನೆ ಬೀಜವನ್ನು ಗುಮಗೇರಾದ ರೈತ ಶರಣಗೌಡ ಮಾಲಿಪಾಟೀಲರಿಗೆ ನೀಡಿದ್ದರು.

ಈ ಪ್ರದೇಶದಲ್ಲಿ ಮೊದಲ ಬಾರಿ ಪುಲೆ ಯಶೋಧ ವಿಶೇಷ ತಳಿ ಬಿಳಿ ಜೋಳ ಉತ್ತಮವಾಗಿ ಬೆಳೆಸಿರುವುದನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಖುದ್ದು ಭೇಟಿ ನೀಡಿ ವೀಕ್ಷಿಸಿದ್ದರು. ರೈತ ಶರಣಗೌಡ ಮಾಲಿಪಾಟೀಲ ಕಳೆದ ವರ್ಷ ನಾಲ್ಕು ಎಕರೆ ಎರೆಭೂಮಿಯಲ್ಲಿ ಪುಲೆ ಯಶೋಧಾ ಬಿಳಿ ಜೋಳ ಬೆಳೆದಿದ್ದರು. ಈ ಬಾರಿಯೂ ಒಂದು ಎಕರೆಯಲ್ಲಿ ಬೆಳೆದಿದ್ದಾರೆ.

5-6 ಅಡಿ ಎತ್ತರ ಬೆಳೆಯುವ ಈ ತಳಿ ಇತರೇ ದೇಶಿ ಜೋಳಕ್ಕಿಂತ ತೆನೆಯ ಗಾತ್ರ ಹೆಚ್ಚು. ಎಕರೆಗೆ ಸರಿ ಸುಮಾರು 7ರಿಂದ 8 ಕ್ವಿಂಟಲ್‌ ಇಳುವರಿ ನಿರೀಕ್ಷಿಸಬಹುದಾಗಿದೆ. ಈ ಬೆಳೆಯ ಸೊಪ್ಪು (ಕಣಕಿ) ಒಣಗಿದರೂ ಮಿದುವಾಗಿದ್ದು, ಜಾನುವಾರುಗಳಿಗೆ ತಿನ್ನುವಾಗ ಸಿಬಿರು ಚುಚ್ಚಲ್ಲ. ಈ ಹಿನ್ನೆಲೆಯಲ್ಲಿ ಜಾನುವಾರುಗಳು ಈ ದಂಟನ್ನು ಬಿಡದೇ ತಿನ್ನುತ್ತವೆ ಎನ್ನುತ್ತಾರೆ ರೈತ ಶರಣಗೌಡ ಮಾಲಿಪಾಟೀಲ.

ತಾಲೂಕಿನ ಪ್ರದೇಶದಲ್ಲಿ ಹಿಂಗಾರು ಹಂಗಾಮಿಗೆ ಮಾಲ್ದಂಡಿ, ನಿಡಶೇಸಿ ಭಾಗದ ಗಟ್ಟಿ ತೆನೆ ಜೋಳ, ಯಕ್ಕರನಾಳ ಜೋಳ ಸೇರಿದಂತೆ ದೇಶಿ ತಳಿಯ ಬೆಳೆ ಬೆಳೆಯಲಾಗುತ್ತಿದೆ. ಆದರೆ ಗುಮಗೇರಾದ ರೈತ ಶರಣಗೌಡ ಮಾಲಿಪಾಟೀಲ 10 ವರ್ಷದಿಂದ ಪುಲೆ ಯಶೋಧಾ ಜೋಳ ಬಿಟ್ಟರೆ ಇನ್ಯಾವುದು ತಳಿ ಜೋಳ ಬೆಳೆದಿಲ್ಲ. ಪ್ರತಿ ವರ್ಷ ತಪ್ಪದೇ ಬೆಳೆಯುವ ಇವರು ಪುಲೆ ಯಶೋಧಾ ಜೋಳದಿಂದ ಉತ್ತಮ ಇಳುವರಿ ಪಡೆದಿದ್ದಾರೆ. ಈ ತಳಿಯ ಬಿತ್ತನೆ ಬೀಜಗಳನ್ನು ಯಾರಾದ್ರೂ ಬಿತ್ತನೆ ಮಾಡಲು ಮುಂದೆ ಬಂದರೆ ಉಚಿತವಾಗಿ ನೀಡಲಾಗುವುದು. ಒತ್ತಾಯಪೂರ್ವಕವಾಗಿ ಬಿತ್ತನೆ ಬೀಜ ಕೊಡಲು ಮನಸ್ಸು ಒಪ್ಪಲ್ಲ ಎನ್ನುತ್ತಾರೆ ಶರಣಗೌಡ ಮಾಲಿಪಾಟೀಲ.

ಪುಲೆ ಯಶೋಧಾ ತಳಿ ಮಾಲ್ದಂಡಿ ಮೂಲ ದೇಶಿ ತಳಿಯಿಂದ ಅಭಿವೃದ್ಧಿ ಪಡಿಸಲಾಗಿದೆ. ಮಹಾರಾಷ್ಟ್ರ ಹಾಗೂ ಧಾರವಾಡ, ಬೆಳಗಾವಿಯಲ್ಲಿ ಅಲ್ಲಲ್ಲಿ ಈ ತಳಿ ಬೆಳೆಯಲಾಗುತ್ತಿದೆ. ಆದರೆ ಈ ಪ್ರದೇಶದಲ್ಲೂ ಬೆಳೆಯಬಹುದಾಗಿದ್ದು, ಕಾಳುಗಳು ದಪ್ಪವಾಗಿರುತ್ತವೆ.  ಡಾ|ಎಂ.ಬಿ. ಪಾಟೀಲ,ಕೃಷಿ ಸಂಶೋಧನಾ ಕೇಂದ್ರ ಕೊಪ್ಪಳ.

 

-ಮಂಜುನಾಥ ಮಹಾಲಿಂಗಪುರ

ಟಾಪ್ ನ್ಯೂಸ್

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.