ಸಮ್ಮೇಳನ ಸದಸ್ಯತ್ವ : ರಾಯಚೂರು ಮುಂದು

ಆತಿಥ್ಯ ವಹಿಸಿದ ಕಲಬುರಗಿಯಲ್ಲಿ 2,050 ಸದಸ್ಯತ್ವ ತುಮಕೂರಲ್ಲಿ 1,500-ರಾಯಚೂರಲ್ಲಿ 1,400 ಸದಸ್ಯತ್ವ ನೋಂದಣಿ ದಕ್ಷಿಣ ಕನ್ನಡದಲ್ಲಿ 11 ಜನರ ಸದಸ್ಯತ್ವ

Team Udayavani, Feb 2, 2020, 12:10 PM IST

2-Febraury-7

ರಾಯಚೂರು: ಕಲಬುರಗಿಯಲ್ಲಿ ಫೆ.5ರಿಂದ ನಡೆಯಲಿರುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೋಂದಣಿ ಮಾಡಿಕೊಂಡ ಜನರಲ್ಲಿ ರಾಯಚೂರಿಗೆ ಎರಡನೇ ಸ್ಥಾನ. ಈ ಮೂಲಕ ಜಿಲ್ಲೆಯ ಜನರು ಸಾಹಿತ್ಯ ಪ್ರೇಮ ಮೆರೆದಿರುವುದು ವಿಶೇಷ.

ರಾಯಚೂರಿನಲ್ಲಿ 82ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಆಗ
ಇಲ್ಲಿ ನೆರೆದ ಜನಸ್ತೋಮ ಕಂಡು ಗಣ್ಯರು- ಸಾಹಿತಿಗಳು ಬೆರಗಾಗಿದ್ದರು. ಬಂಡಾಯ ಸಾಹಿತ್ಯದ ನೆಲೆವೀಡಾದ ರಾಯಚೂರು ಜಿಲ್ಲೆ, ಇಂದಿಗೂ ಅಕ್ಷರ ಪ್ರೀತಿಯನ್ನು ಕಿಂಚಿತ್ತೂ ಕಳೆದುಕೊಂಡಿಲ್ಲ ಎನ್ನಲಿಕ್ಕೆ ಇದು ನಿದರ್ಶನವಾಗಿದೆ. ಬೆಂಗಳೂರು ಕೇಂದ್ರ ಸಾಹಿತ್ಯ ಪರಿಷತ್‌ 1453 ನೋಂದಣಿ ಮಾಡಿಸಿದ್ದರೆ, ಆತಿಥ್ಯ ವಹಿಸಿರುವ ಕಲಬುರಗಿ ಜಿಲ್ಲೆ 2050 ಸದಸ್ಯತ್ವ ನೋಂದಣಿ ಮಾಡಿಸಿದೆ. ಇದನ್ನು ಹೊರತಾಗಿಸಿ ಹೆಚ್ಚು ನೋಂದಣಿಯಾದ
ಜಿಲ್ಲೆಗಳ ಸಾಲಿನಲ್ಲಿ ತುಮಕೂರು ಮೊದಲಾದರೆ, ರಾಯಚೂರು ಎರಡನೇ ಸ್ಥಾನದಲ್ಲಿದೆ.
ತುಮಕೂರು ಜಿಲ್ಲೆಯ 1500 ಜನ ನೋಂದಣಿ ಮಾಡಿಸುವ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ; 1400 ಜನ ನೋಂದಣಿ ಮಾಡುವ ಮೂಲಕ ರಾಯಚೂರು ಎರಡನೇ ಸ್ಥಾನದಲ್ಲಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೇವಲ 11 ಸದಸ್ಯರು ನೋಂದಣಿ ಮಾಡಿಸಿದ್ದು, ಅತಿ ಕಡಿಮೆ ಎನಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇವಲ 15 ಜನ ನೋಂದಣಿ ಮಾಡಿಸಿದ್ದಾರೆ. ಕಸಾಪದಿಂದ 100 ರಶೀದಿಯುಳ್ಳ 239 ನೋಂದಣಿ ಪುಸ್ತಕಗಳನ್ನು ವಿತರಿಸಲಾಗಿತ್ತು. ಅದರಲ್ಲಿ 26 ರಶೀದಿ ಪುಸ್ತಕಗಳು ಉಳಿದಿವೆ. ಒಂಭತ್ತು ಜಿಲ್ಲೆಗಳಲ್ಲಿ ಶೇ.100 ಗುರಿ ತಲುಪಲಾಗಿದೆ. ಹುಬ್ಬಳ್ಳಿಯಲ್ಲಿ 10 ಪುಸ್ತಕಗಳ ಪೈಕಿ ಐದು ಮಾತ್ರ ಖರ್ಚಾದರೆ, ಶಿವಮೊಗ್ಗದಲ್ಲಿ 540 ನೋಂದಣಿಯಾಗಿದ್ದು, 460 ಬಾಕಿ ರಶೀದಿ ಉಳಿದಿವೆ. ಅಂದರೆ ಶೇ.54 ಗುರಿ ತಲುಪಲಾಗಿದೆ.

250 ರೂ. ಶುಲ್ಕ: ಪ್ರತಿ ಸದಸ್ಯರಿಗೆ ನೋಂದಣಿ ಶುಲ್ಕ 250ರೂ. ನಿಗದಿಮಾಡಲಾಗಿದೆ. ಒಂದು
ಕಿಟ್‌, ಅದರಲ್ಲಿ ಆಹ್ವಾನ ಪತ್ರಿಕೆ, ನೋಟ್‌ಬುಕ್‌ ಮತ್ತು ಪೆನ್‌ ಇರಲಿದೆ. ಅದರ ಜತೆಗೆ ಸದಸ್ಯತ್ವ ಬ್ಯಾಡ್ಜ್ ನೀಡಲಾಗುತ್ತಿದೆ. ವಸತಿ, ಊಟ, ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮೆಡಿಕಲ್‌ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮೂರು ದಿನಗಳ ಕಾಲ ಎಲ್ಲ ಸೌಲಭ್ಯ ನಿಭಾಯಿಸಲು ಕಲಬುರಗಿ ಜಿಲ್ಲಾಡಳಿತ ಈಗಾಗಲೇ ಕಾರ್ಯಕ್ರಮ ರೂಪಿಸಿದೆ.

ಎಲ್ಲರಿಗೂ ಬರಲ್ಲ ಸಂದೇಶ
ರಾಜ್ಯದಿಂದ ಒಟ್ಟು 21,030 ಜನ ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲಾಡಳಿತ ಅವರಿಗೆ ಸೂಕ್ತ ಮಾಹಿತಿ ನೀಡಲು ಕಾಲ್‌ ಸೆಂಟರ್‌ ಮೂಲಕ ಏಕಕಾಲಕ್ಕೆ ಸಂದೇಶ ಕಳುಹಿಸುವ ವ್ಯವಸ್ಥೆ ಮಾಡಿದೆ. ಆದರೆ, ಬಹುತೇಕ ಸದಸ್ಯರಿಗೆ ಈ ಸಂದೇಶ ತಲುಪುವುದು ಕಷ್ಟ. ಏಕೆಂದರೆ ಕೆಲ ಜಿಲ್ಲೆಗಳಲ್ಲಿ ಕೇವಲ ಸದಸ್ಯತ್ವ ಹೆಸರು ಮಾತ್ರ ನೀಡಿದ್ದು, ಮೊಬೈಲ್‌ ಸಂಖ್ಯೆಯನ್ನೇ ನೀಡಿಲ್ಲ. ಹೀಗಾಗಿ ಸಮ್ಮೇಳನಕ್ಕೆ ಬರುವ ಸದಸ್ಯರು ತಮ್ಮ ವಸತಿ ಬಗ್ಗೆ ಖುದ್ದು ತೆರಳಿ ಖಚಿತಪಡಿಸಿಕೊಳ್ಳಬೇಕಿದೆ.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರಲು ನೋಂದಣಿ ಮಾಡಿಸಿದ ಸದಸ್ಯರಿಗೆ ಕಿಟ್‌ ನೀಡಲಾಗುವುದು. ಮೂರು ದಿನಗಳ ವಸತಿ, ಊಟದ ವ್ಯವಸ್ಥೆ, ಆರೋಗ್ಯ ಸಮಸ್ಯೆಗೆ ತುತ್ತಾದವರಿಗೆ ಮೆಡಿಕಲ್‌ ಸೌಲಭ್ಯ ಕಲ್ಪಿಸಲಾಗುವುದು. ಸಾಕಷ್ಟು ಜನ ಮೊಬೈಲ್‌ ಸಂಖ್ಯೆ ನೀಡದ ಕಾರಣ ಎಲ್ಲಿ ವಸತಿ ಮಾಡಲಾಗಿದೆ ಎಂದು ಸಂದೇಶ ತಲುಪಲ್ಲ. ಅಂಥವರು ಮಾಹಿತಿ ಕೇಂದ್ರಕ್ಕೆ ಸಂಪರ್ಕಿಸಿ ವಿವರ ನೀಡಿದರೆ ಅವರಿಗೆ ಸೌಲಭ್ಯ ಕಲ್ಪಿಸಲಾಗುವುದು. ಸಾಹಿತ್ಯಾಸಕ್ತರಿಗೆ ಯಾವುದೇ ಕೊರತೆಯಾಗದಂತೆ ಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗುತ್ತಿದೆ.
ಶರತ್‌, ಕಲಬುರಗಿ ಜಿಲ್ಲಾಧಿಕಾರಿ

ಕೇಂದ್ರ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಹೆಚ್ಚು ನೋಂದಣಿ ಮಾಡಿದ್ದು,
ತುಮಕೂರು ಬಿಟ್ಟರೆ ರಾಯಚೂರು ಜಿಲ್ಲೆ. ಕೆಲ ವರ್ಷಗಳ ಹಿಂದೆ ರಾಯಚೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಸದಸ್ಯತ್ವ ನೋಂದಣಿಯಲ್ಲೂ ನಮ್ಮ ಜಿಲ್ಲೆಯ ಸಾಹಿತ್ಯಾಸಕ್ತರು ಮುಂಚೂಣಿಯಲ್ಲಿದ್ದಾರೆ.
ಡಾ|ಬಸವಪ್ರಭು ಪಾಟೀಲ
ಕಸಾಪ ಜಿಲ್ಲಾಧ್ಯಕ್ಷ, ರಾಯಚೂರು

„ಸಿದ್ಧಯ್ಯಸ್ವಾಮಿ ಕುಕನೂರು

ಟಾಪ್ ನ್ಯೂಸ್

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌

Amit Shah

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ

congress

Congress ತಮಿಳುನಾಡಿನಲ್ಲಿ ಸ್ವಂತ ಬಲದಿಂದ ಸರಕಾರ ರಚನೆ ಯಾವಾಗ?: ಕೆ.ಸೆಲ್ವ ಪೆರುಂತಗೈ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ಶ್ರೀ ಬಸವೇಶ್ವರ ಜಯಂತಿ ಆಚರಣೆ

Raichur; ಶ್ರೀ ಬಸವೇಶ್ವರ ಜಯಂತಿ ಆಚರಣೆ

Raichur; ಚುನಾವಣೆ ನಿರತ ಬಿಎಲ್‌ಒ ಸಾವು

Raichur; ಚುನಾವಣೆ ಕರ್ತವ್ಯನಿರತ ಬಿಎಲ್‌ಒ ಸಾವು

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-wqeqewqe

Traffic ದಂಡವನ್ನು ತಪ್ಪಿಸಲು ಹೆಲ್ಮೆಟ್‌ ಧರಿಸಿ ಕಾರು ಚಾಲನೆ!

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

rain

Kerala; ಮೂರ್ನಾಲ್ಕು ದಿನ ಭಾರಿ ಮಳೆ: ಹವಾಮಾನ ಇಲಾಖೆ

marriage 2

Wedding gifts ಪಟ್ಟಿ ಇರಿಸಿಕೊಳ್ಳುವುದು ಕಡ್ಡಾಯ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.