ಜಾಜಿ: 2 ತಿಂಗಳಿಂದ ಯಥಾಸ್ಥಿತಿ, ಮಲ್ಲಿಗೆ ದರ ಕುಸಿತ
Team Udayavani, Feb 3, 2020, 1:45 AM IST
ಶಿರ್ವ: ಶಂಕರಪುರ ಮಲ್ಲಿಗೆ ದರ ಜ.30 ಮತ್ತು 31ರಂದು ಕಟ್ಟೆಯ ಗರಿಷ್ಠ ದರದಲ್ಲಿದ್ದುದು ರವಿವಾರ ಮತ್ತೆ ಕುಸಿತ ಕಂಡು 630ಕ್ಕೆ ಇಳಿದಿದೆ. ಜಾಜಿ ಮಲ್ಲಿಗೆ ದರ ಅಂದಾಜು ಎರಡು ತಿಂಗಳುಗಳಿಂದ ರೂ.90ರಲ್ಲಿಯೇ ಸ್ಥಿರವಾಗಿರುವುದು ವಿಶೇಷ.
ಶಂಕರಪುರ ಮಲ್ಲಿಗೆ ದರ ಜ.30 ಮತ್ತು 31ರಂದು ಕಟ್ಟೆಯ ಗರಿಷ್ಠ ದರ 1,250 ರೂ.ಗೇರಿತ್ತು. ಬಳಿಕ ಫೆ.1ರಂದು 1,050 ರೂ.ಗಳಿಗೆ ಕುಸಿದಿತ್ತು. ರವಿವಾರ ಮತ್ತಷ್ಟು ಇಳಿಕೆ ಕಂಡಿದೆ.
ಇದಕ್ಕೆ ಮುನ್ನ ಜ.27ರಂದು 540 ರೂ.ಗಳಲ್ಲಿದ್ದ ಅದು ಜ.28, 29ರಂದು ತುಸು ಏರಿಕೆ ದಾಖಲಿಸಿ 850 ರೂ.ಗಳಲ್ಲಿತ್ತು. ಜ.25ರಂದು 1,250 ರೂ.ಗಳಲ್ಲಿ ಮಾರಾಟವಾಗಿತ್ತು.
ಜಾಜಿ ಮಲ್ಲಿಗೆಯು ಎರಡು ತಿಂಗಳುಗಳಿಂದ 90 ರೂ.ಗಳಲ್ಲೇ ಇದೆ. ಡಿ.1ರಂದು ಅದು 260 ರೂ.ಗಳಲ್ಲಿದ್ದುದು ಬಳಿಕ 90 ರೂ.ಗಳಿಗೆ ಕುಸಿದಿತ್ತು. ಬಳಿಕ ಯಥಾಸ್ಥಿತಿ ಕಾಯ್ದುಕೊಂಡಿದೆ.