ಚುಟು.. ಚುಟು.. ಹಾಡಿಗೆ 100 ಮಿಲಿಯನ್ ವೀಕ್ಷಣೆ
ಸಂಭ್ರಮದಲ್ಲಿ ಆನಂದ್ ಆಡಿಯೋ
Team Udayavani, Feb 18, 2020, 7:02 AM IST
ನಟ ಶರಣ್ ಹಾಗೂ ಆಶಿಕಾ ರಂಗನಾಥ್ ಜೋಡಿಯಾಗಿ ಹೆಜ್ಜೆ ಹಾಕಿದ್ದ “ರ್ಯಾಂಬೋ-2′ ಚಿತ್ರದ “ಚುಟು ಚುಟು ಅಂತೈತಿ…’ ಹಾಡನ್ನು ಬಹುತೇಕರು ನೋಡಿರುತ್ತೀರಿ. 2018ರ ಮಾರ್ಚ್ 21ರಂದು ಬಿಡುಗಡೆಯಾದ ಈ ಹಾಡು ಇದೀಗ ಯು-ಟ್ಯೂಬ್ನಲ್ಲಿ ಹೊಸ ದಾಖಲೆ ಬರೆದಿದೆ. ಹೌದು, “ರ್ಯಾಂಬೋ-2′ ಚಿತ್ರದ “ಚುಟು ಚುಟು ಅಂತೈತಿ…’ ಹಾಡು ಇದೀಗ ಆನಂದ್ ಆಡಿಯೋ ಯು-ಟ್ಯೂಬ್ ಚಾನಲ್ನಲ್ಲಿ ಬರೋಬ್ಬರಿ 100 ಮಿಲಿಯನ್ ವೀಕ್ಷಣೆಯ ಗಡಿ ದಾಟಿದೆ.
ಈ ಮೂಲಕ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದ ಹಾಡೊಂದು 100 ಮಿಲಿಯನ್ ವೀಕ್ಷಣೆಯ ಗಡಿ ದಾಟಿದ್ದು, ಆ ಹೆಗ್ಗಳಿಕೆಗೆ “ಚುಟು ಚುಟು ಅಂತೈತಿ…’ ಹಾಡಿನ ಪಾಲಾಗಿದೆ. “ರಾಂಬೋ-2′ ಸಿನಿಮಾದ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದರು. ಉತ್ತರ ಕರ್ನಾಟಕ ಶೈಲಿಯಲ್ಲಿ, ಜಾನಪದ ಸೊಗಡಿನಲ್ಲಿ ಮೂಡಿಬಂದ ಈ ಹಾಡು ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಿತ್ತು. ಶಿವು ಬೇರ್ಗಿ ಸಾಹಿತ್ಯವಿದ್ದ ಈ ಹಾಡಿಗೆ ರವೀಂದ್ರ ಸೊರಗಾವಿ, ಶಮಿತಾ ಮಲ್ನಾಡ್ ಸೊಗಸಾಗಿ ಧ್ವನಿಯಾಗಿದ್ದರು.
ಇತ್ತೀಚೆಗೆ ಇದೇ ಸಂಭ್ರಮವನ್ನು ಹಂಚಿಕೊಳ್ಳಲು ಸಮಾರಂಭವನ್ನು ಆಯೋಜಿಸಿದ್ದ “ಆನಂದ್ ಆಡಿಯೋ’, ಚಿತ್ರದ ಹಾಡಿನ ಯಶಸ್ಸಿಗೆ ಕಾರಣರಾದ ಚಿತ್ರತಂಡದ, ಕಲಾವಿದರು, ತಂತ್ರಜ್ಞರನ್ನು ಸನ್ಮಾನಿಸಿತು. ಸಮಾರಂಭದಲ್ಲಿ ನಟ ಶ್ರೀಮುರಳಿ, ಶರಣ್, “ಆನಂದ್ ಆಡಿಯೋ’ ಪರವಾಗಿ ಆನಂದ್ ಛಾಬ್ರಿಯಾ, ಶ್ಯಾಂ ಛಾಬ್ರಿಯಾ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ