ಕಾಮಗಾರಿ ನಡೆಸದೇ ಬಿಲ್‌: ತನಿಖೆಗೆ ಆಗ್ರಹ

Team Udayavani, Feb 26, 2020, 4:10 PM IST

kopala-tdy-2

ಕೊಪ್ಪಳ: ಕಳೆದ 2019-20ನೇ ಸಾಲಿನ ಜಿಪಂ ಅಭಿವೃದ್ಧಿ (ಶಾಸನಬದ್ಧ) ಅನುದಾನದ103.87 ಲಕ್ಷ ರೂ.ಗಳ ಕಾಮಗಾರಿಗಳು ನಡೆಸದೇ ಬಿಲ್‌ ಎತ್ತುವಳಿ ಮಾಡಿದ್ದಾರೆ. ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಪಂನ ಕಾಂಗ್ರೆಸ್‌ ಸದಸ್ಯರು ಸಿಇಒ ರಘುನಂದನ್‌ ಮೂರ್ತಿ ಅವರಿಗೆ ದೂರು ಸಲ್ಲಿಸಿದ್ದಾರೆ.

2019-20ನೇ ಸಾಲಿನಲ್ಲಿ ಬೋಗಸ್‌ಬಿಲ್‌ ಆಗಿವೆ ಎನ್ನುವ ದೂರುಗಳು ಕೇಳಿ ಬಂದಿವೆ. ಜಿಪಂ ಸದಸ್ಯರು ಚರ್ಚೆ ಮಾಡುವ ವೇಳೆ ಹಾಲಿ ಅಧ್ಯಕ್ಷರು ರಾಜೀನಾಮೆ ಕೊಡುತ್ತಿದ್ದಾರೆ ಎಂದು ಸುದ್ದಿ ಹರಡುತ್ತಿದೆ. ತಮ್ಮ ರಾಜೀನಾಮೆ ಅವಧಿ ಯ ವೇಳೆ ಎಲ್ಲ ಬೋಗಸ್‌ ಬಿಲ್‌ ಮಾಡಿ ಮೊದಲೇ ಹಣ ಮಾಡುವ ಹುನ್ನಾರ ನಡೆದಿದೆ.

ಗಂಗಾವತಿ ತಾಲೂಕಿನ ಸಿದ್ದಾಪುರ ಕ್ಷೇತ್ರದ ಗುಂಡೂರು ಕ್ಯಾಂಪಿನಲ್ಲಿ 3 ಲಕ್ಷ ರೂ. ರಸ್ತೆ ನಿರ್ಮಾಣ, ಲಕ್ಷ್ಮೀ ಕ್ಯಾಂಪಿನಲ್ಲಿ ರಸ್ತೆ ಅಭಿವೃದ್ಧಿಯ 2.50 ಲಕ್ಷ ರೂ. ಕಾಮಗುಂಡಪ್ಪ ಕ್ಯಾಂಪಿನಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕಾಗಿ 3 ಲಕ್ಷ, ಸಿಂಗನಾಳ ಗ್ರಾಮದ ಮಳೆಗಡ್ಡೆ ರಸ್ತೆ ಮರಂ ಹಾಕಲಿಕ್ಕೆ 2 ಲಕ್ಷ ರೂ., ಉಳೆನೂರು 2ನೇ ವಾರ್ಡ್‌ನಲ್ಲಿ ಸಿಸಿ, ಚರಂಡಿ ನಿರ್ಮಾಣಕ್ಕಾಗಿ 3 ಲಕ್ಷ ರೂ, ಸಿದ್ದಾಪುರ ಹರಿಜನ 2ನೇ ವಾರ್ಡ್ ನಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕಾಗಿ 3 ಲಕ್ಷ ರೂ., ಸಿದ್ದಾಪುರ 1ನೇ ವಾರ್ಡ್‌ನಲ್ಲಿ ಸಿ.ಸಿ ರಸ್ತೆ ನಿರ್ಮಾಣಕ್ಕೆ 2.50 ಲಕ್ಷ ರೂ., ಈಳಿಗನೂರು ಗ್ರಾಮದ ರಸ್ತೆ ಅಭಿವೃದ್ಧಿ ಪಡಿಸಲು 2.50ಲಕ್ಷ ರೂ., ಸಿದಾಪುರ ಗ್ರಾಮದ 5ನೇ ವಾರ್ಡ್ ನಲ್ಲಿ ರಸ್ತೆ ಅಭಿವೃದ್ಧಿ ಪಡಿಸಲು 2 ಲಕ್ಷ ರೂ ಸೇರಿ ವಿವಿಧೆಡೆ ಕಾಮಗಾರಿಗಳನ್ನು ಮಾಡದೇ 103.87 ಲಕ್ಷಗಳ ಅನುದಾನ ಬಿಲ್ಲು ಎತ್ತುವ ಪ್ರಯತ್ನ ನಡೆಸಿದ್ದಾರೆ. ಈ ಬಗ್ಗೆ ವ್ಯಾಪಕ ದೂರು ಕೇಳಿ ಬರುತ್ತಿವೆ. ಕೂಡಲೇ ಇದಕ್ಕೆ ಸಂಬಂಧಿ ಸಿದಂತೆ ವಿಶೇಷ ತಂಡ ರಚಿಸಿ ಕಾಮಗಾರಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಬೋಗಸ್‌ ಬಿಲ್‌ ಬಗ್ಗೆಯೂ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್‌ ಸದಸ್ಯರು ಮನವಿ ಸಲ್ಲಿಸಿದರು.

ಈ ವೇಳೆ ಸದಸ್ಯರಾದ ಹನುಮಂತಗೌಡ ಚಂಡೂರು, ಗೂಳಪ್ಪ ಹಲಿಗೇರಿ, ಚೆನ್ನುಪಾಟಿ ವಿಜಯಲಕ್ಷ್ಮೀ ಪ್ರಭಾಕರ, ಕೆ. ರಾಜಶೇಖರ ಹಿಟ್ನಾಳ, ಲಕ್ಷಮ್ಮ ನೀರಲೂಟಿ, ರತ್ನವ್ವ ಭರಮಪ್ಪ ನಗರ, ಅಗಸಿಮುಂದಿನ ಭಿಮಣ್ಣ ಶರಣಪ್ಪ, ಹನಮಗೌಡ ಮಾದೇವಗೌಡ, ಗಾಯತ್ರಿ ವೆಂಕಟೇಶ ವಿ., ಬೀನಾ ಗೌಸ್‌, ಅನಿತಾ ಜಿ. ಮಾರುತಿ, ಅಮರೇಶಪ್ಪ ಗೋನಾಳ, ಶಾಂತಾ ರಮೇಶ ನಾಯಕ, ಹೊಳೆಯಮ್ಮ ಪೊಲೀಸ್‌ ಪಾಟೀಲ್‌, ಗಿರಿಜಾ ರೇವಣಪ್ಪ ಸಂಗಟಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.