ಕಾಫಿನಾಡಿನಲ್ಲಿ ಚೀನಾ ಪ್ರವಾಸಿಗ: ಕೋವಿಡ್ ಭೀತಿಯಿಂದ ಬೆಚ್ಚಿದ ಲಾಡ್ಜ್ ಮಾಲೀಕ, ಮುಂದೇನಾಯ್ತು?

Team Udayavani, Mar 19, 2020, 2:13 PM IST

ಕಾಫಿನಾಡಿನಲ್ಲಿ ಚೀನಾ ಪ್ರವಾಸಿಗ: ಕೋವಿಡ್ ಭೀತಿಯಿಂದ ಬೆಚ್ಚಿದ ಲಾಡ್ಜ್ ಮಾಲೀಕ, ಮುಂದೇನಾಯ್ತು?

ಚಿಕ್ಕಮಗಳೂರು: ಚೀನಾದ ವುಹಾನ್ ಪಟ್ಟಣದಲ್ಲಿ ಮೊದಲು ಕಾಣಿಸಿಕೊಂಡ ಕೋವಿಡ್-19 ಎಂಬ ಮಹಾಮಾರಿ ಸೋಂಕು ಈಗ ವಿಶ್ವದಾದ್ಯಂತ ಸಂಚಲನ ಉಂಟುಮಾಡಿದೆ. ನಮ್ಮ ರಾಜ್ಯದಲ್ಲೂ ಸೋಂಕಿನ ಕಪಿಮುಷ್ಟಿ ಬಿಗಿಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಚೀನಾ ಹೆಸರು ಕೇಳಿದರೆ ಜನರು ಭಯಭೀತರಾಗುತ್ತಿದ್ದಾರೆ. ಅಂಥದರಲ್ಲಿ ಚೀನಾದ ವ್ಯಕ್ತಿಯೇ ನಿಮ್ಮ ಎದುರಿಗೆ ಬಂದು ನಿಂತರೆ ಹೇಗಾಗಬೇಡ! ಇಂತಹ ಅನುಭವವಾಗಿದ್ದು ಕಾಫಿನಾಡು ಚಿಕ್ಕಮಗಳೂರಿನ ಕೊಟ್ಟಿಗೆಹಾರದ ಜನರಿಗೆ.

ಚೀನಾದಿಂದ ಭಾರತಕ್ಕೆ ಬಂದಿದ್ದ ಪುಂಗೀಮ್ ಎಂಬ ಪ್ರವಾಸಿಗ ಬುಧವಾರ ರಾತ್ರಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರಕ್ಕೆ ಬಂದಿದ್ದರು. ಇವರು ಚೀನಾ ಮೂಲದವರೆಂದು ತಿಳಿದು ಹೆದರಿದ ಸ್ಥಳೀಯ ಲಾಡ್ಜ್ ಮಾಲೀಕರು ತಂಗಲು ಕೋಣೆ ಕೊಡದ ಪ್ರಸಂಗ ನಡೆಯಿತು.

ತಿಂಗಳ ಹಿಂದೆ ಚೀನಾದಿಂದ ಮಹಾರಾಷ್ಟ್ರದ ಮುಂಬಯಿಗೆ ಬಂದಿದ್ದ ಪುಂಗೀಮ್ ಬುಲೆಟ್ ಮೂಲಕ ಭಾರತ ಪ್ರವಾಸಕ್ಕೆ ಹೊರಟಿದ್ದರು. ಕೆಲ ದಿನಗಳಿಂದ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದ ಪುಂಗೀಮ್ ಬುಧವಾರ ರಾತ್ರಿ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರಕ್ಕೆ ಬುಲೆಟ್ ಬೈಕ್ ನಲ್ಲಿ ಬಂದಿದ್ದರು. ತಡ ರಾತ್ರಿಯಾಗಿದ್ದ ಕಾರಣ ಕೊಟ್ಟಿಗೆಹಾರದಲ್ಲಿ ತಂಗಲು ನಿಶ್ಚಯಿಸಿ ಲಾಡ್ಜ್ ಗೆ ರೂಮ್ ಕೇಳಲು ಹೋಗಿದ್ದಾರೆ.

ಆದರೆ ಪುಂಗೀಮ್ ಅವರ ಚೀನಾದ ಐಡಿ ಕಾರ್ಡ್ ನೋಡಿ ದಂಗಾದ ಲಾಡ್ಜ್ ಮಾಲೀಕರು ರಾತ್ರಿ ತಂಗಲು ರೂಮ್ ನೀಡಲು ಹಿಂದೇಟು ಹಾಕಿದರು. ಕೋವಿಡ್-19 ವೈರಸ್ ಭೀತಿಯಿರುವ ಕಾರಣ ಸ್ಥಳದಲ್ಲಿದ್ದ ಸಾರ್ವಜನಿಕರು ಸಹ ಆತಂಕ ವ್ಯಕ್ತಪಡಿಸಿದರು.

ಆದರೆ ಪ್ರವಾಸಿ ಪುಂಗೀಮ್ ಮಹಾರಾಷ್ಟ್ರದಲ್ಲೇ ಕೋವಿಡ್ 19 ಪರೀಕ್ಷೆ ನಡೆಸಿದ್ದು, ನೆಗೆಟಿವ್ ವರದಿ ಬಂದಿತ್ತು. ಹಾಗಾಗಿ ಪುಂಗೀಮ್ ಅದರ ದಾಖಲೆಯನ್ನು ತೋರಿಸಿದ ನಂತರ ಸಾರ್ವಜನಿಕರು ನಿರಾಳರಾದರು. ಆದರೆ ರಾತ್ರಿ ತಂಗಲು ರೂಮ್ ಸಿಗದ ಕಾರಣ ಪುಂಗೀಮ್ ತನ್ನಲ್ಲಿದ್ದ ಟೆಂಟ್ ನಲ್ಲೇ ಮಲಗಿದರು.

ಕಾಫಿನಾಡಿನಲ್ಲಿ ಚೀನಾ ಪ್ರವಾಸಿಗ: ಕೋವಿಡ್ ಭೀತಿಯಿಂದ ಬೆಚ್ಚಿದ ಲಾಡ್ಜ್ ಮಾಲೀಕ, ಮುಂದೇನಾಯ್ತು?

ಇಂದು ಮುಂಜಾನೆ ಪುಂಗೀಮ್ ಬೇಲೂರು ಮಾರ್ಗವಾಗಿ ಬೆಂಗಳೂರಿನ ಕಡೆಗೆ ಬುಲೆಟ್ ಪ್ರಯಾಣ ಮಾಡಿದರು.  ಕೊಟ್ಟಿಗೆಹಾರದಿಂದ ಹೊರಡುವ ವೇಳೆ ಸಾರ್ವಜನಿಕರು ಚೀನಾ ಪ್ರವಾಸಿಗೆ ಮಾಸ್ಕ್ ನೀಡಿ ಬಿಳ್ಕೊಟ್ಟರು.

ಚೀನಾ ಪ್ರವಾಸಿ ಜಿಲ್ಲಾ ಪ್ರವಾಸಕ್ಕೆ ಬಂದಿರುವುದನ್ನು ಜಿಲ್ಲಾಡಳಿತ  ದೃಢಪಡಿಸಿದ್ದು, ಪ್ರವಾಸಿ ಪುಂಗೀಮ್ ತಪಾಸಣೆಗೊಳಗಾಗಿ ಕೊರೋನಾ ಮುಕ್ತರಾಗಿರುವ ಬಗ್ಗೆಯೂ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.

ಕಾಫಿನಾಡಿನಲ್ಲಿ ಚೀನಾ ಪ್ರವಾಸಿಗ: ಕೋವಿಡ್ ಭೀತಿಯಿಂದ ಬೆಚ್ಚಿದ ಲಾಡ್ಜ್ ಮಾಲೀಕ, ಮುಂದೇನಾಯ್ತು?

ಟಾಪ್ ನ್ಯೂಸ್

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1—dsdasd

Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.