ದೆಹಲಿ ವೈದ್ಯ, ಪತ್ನಿ ಹಾಗೂ ಪುತ್ರಿಗೂ ಕೋವಿಡ್ 19 ಸೋಂಕು: ಬಹುತೇಕರಿಗೆ ಕ್ವಾರಂಟೈನ್
ಮಾರ್ಚ್ 12ರಿಂದ 18ರವರೆಗೆ ಮೌಜ್ ಪುರದಲ್ಲಿರುವ ಕ್ಲಿನಿಕ್ ಭೇಟಿ ನೀಡಿದವರು ಎಲ್ಲರೂ ಕ್ವಾರಟೈನ್ ನಲ್ಲಿ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
Team Udayavani, Mar 26, 2020, 9:47 AM IST
Representative Image
ನವದೆಹಲಿ: ಈಶಾನ್ಯ ದೆಹಲಿಯ ಮೊಹಲ್ಲಾ ಕ್ಲಿನಿಕ್ ನ ವೈದ್ಯರೊಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿರುವುದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ವೈದ್ಯರ ಪತ್ನಿ ಹಾಗೂ ಮಗಳು ಕೂಡಾ ಕೋವಿಡ್ 19 ಪೀಡಿತರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಮಾರ್ಚ್ 12ರಿಂದ 18ರವರೆಗೆ ಮೌಜ್ ಪುರದಲ್ಲಿರುವ ಕ್ಲಿನಿಕ್ ಭೇಟಿ ನೀಡಿದವರು ಎಲ್ಲರೂ ಕ್ವಾರಟೈನ್ ನಲ್ಲಿ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಒಂದು ವೇಳೆ ವೈದ್ಯರ ತಪಾಸಣೆ ವೇಳೆ ಕೋವಿಡ್ 19 ಸೋಂಕು ತಗುಲಿದ್ದು, ಅಂತಹವರಿಗೆ ಕೋವಿಡ್ 19 ಲಕ್ಷಣ ಕಂಡು ಬಂದಲ್ಲಿ ಕೂಡಲೇ ಕ್ವಾರಂಟೈನ್ ನಲ್ಲಿ ಇರಬೇಕು ಎಂದು ಸೂಚಿಸಿದೆ.
ವೈದ್ಯರು ವಿದೇಶಕ್ಕೆ ತೆರಳಿದ್ದರೆ ಅಥವಾ ಅವರಿಗೂ ಇತರರಿಂದ ಕೋವಿಡ್ 19 ಸೋಂಕು ತಲುಲಿದೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಾಗಿದೆ ಎಂದು ವರದಿ ವಿವರಿಸಿದೆ. ಮೊಹಲ್ಲಾ ಕ್ಲಿನಿಕ್ಸ್ ಗಳು ಸಮುದಾಯ ಆರೋಗ್ಯ ಕೇಂದ್ರಗಳಾಗಿದೆ. ದಿಲ್ಲಿ ಸರ್ಕಾರ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆ ನೀಡಲು ಮೊಹಲ್ಲಾ ಕ್ಲಿನಿಕ್ ಆರಂಭಿಸಿತ್ತು.