ಮಾಜಿ ಗಾಲ್ಫರ್ ಸ್ಯಾಂಡರ್ಸ್ ನಿಧನ
Team Udayavani, Apr 14, 2020, 5:33 AM IST
ನ್ಯೂಯಾರ್ಕ್: ಯುಎಸ್ ಪಿಜಿಎ ಟೂರ್ನ ಅತ್ಯಂತ ಪ್ರಭಾವಿ ಗಾಲ್ಫ್ ಆಟಗಾರರಲ್ಲಿ ಒಬ್ಬರಾಗಿದ್ದ ಡೌಗ್ ಸ್ಯಾಂಡರ್ಸ್ ಅವರು ವಯೋ ಸಹಜ ಕಾರಣಗಳಿಂದ ನಿಧನ ಹೊಂದಿದರು.
“ಪೀಕಾಕ್ ಆಫ್ ದಿ ಫೇರ್ವೆàಸ್’ ಖ್ಯಾತಿಯ 86ರ ಹರೆಯದ ಸ್ಯಾಂಡರ್ಸ್ 1956ರ ಕೆನಡಿಯನ್ ಓಪನ್ ಸಹಿತ ಇಪ್ಪತ್ತು ಬಾರಿ ಪಿಜಿಎ ಟೂರ್ನಿ ಪ್ರಶಸ್ತಿ ಜಯಿಸಿದ್ದಾರೆ. ಅವರು ಹ್ಯೂಸ್ಟನ್ನಲ್ಲಿ ರವಿವಾರ ತಡರಾತ್ರಿ ಮೃತಪಟ್ಟಿದ್ದಾರೆ. ಜಾರ್ಜಿಯಾದಲ್ಲಿ ಜನಿಸಿದ ಸ್ಯಾಂಡರ್ಸ್, ಫ್ಲೋರಿಡಾ ವಿಶ್ವ ವಿದ್ಯಾಲಯದಲ್ಲಿ ಗಾಲ್ಫರ್ ಕೌಶಲಗಳನ್ನು ಮೈಗೂಡಿಸಿಕೊಂಡಿದ್ದರು.