ತಮಿಳುನಾಡಿಗೆ ಹೊರಟಿದ್ದ ಕಾರ್ಮಿಕರಿಗೆ ತಡೆ

Team Udayavani, Apr 14, 2020, 11:50 AM IST

ತಮಿಳುನಾಡಿಗೆ ಹೊರಟಿದ್ದ ಕಾರ್ಮಿಕರಿಗೆ ತಡೆ

ಪುತ್ತೂರು: ಮಂಗಳೂರಿನಿಂದ ತಮಿಳುನಾಡಿಗೆ ಕಾಲ್ನಡಿಗೆಯಲ್ಲಿ ಹೊರಟ 8 ಮಂದಿಯನ್ನು ಪುತ್ತೂರು ಪೊಲೀಸರು ನಗರದ ಹೊರವಲಯದ ಕಬಕದಲ್ಲಿ ತಡೆದು ತಹಶೀಲ್ದಾರ್‌ ನೇತೃತ್ವದಲ್ಲಿ 15 ದಿನಗಳ ಆಹಾರ ಪದಾರ್ಥಗಳೊಂದಿಗೆ ಮತ್ತೆ ವಾಪಸ್‌ ಮಂಗಳೂರಿಗೆ ವಾಹನದಲ್ಲಿ ಕಳುಹಿಸಿದ ಘಟನೆ ಸೋಮವಾರ ನಡೆದಿದೆ.

ಆರು ವರ್ಷಗಳಿಂದ ಮಂಗಳೂರಿನಲ್ಲಿ ಮೀನುಗಾರಿಕೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ 8 ಮಂದಿ ಮೂರು ತಿಂಗಳಿಂದ ಕೆಲಸವಿಲ್ಲದ ಕಾರಣ ತಮ್ಮ ಊರಾದ ತಮಿಳುನಾಡಿನ ಕಲ್ಲಕುರ್ಚಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದರು.

ಮಂಗಳೂರಿನಿಂದ ಪುತ್ತೂರು, ಮೈಸೂರು ಮೂಲಕ ತಮಿಳುನಾಡಿಗೆ ಹೋಗುವ ಉದ್ದೇಶ ಇರಿಸಿಕೊಂಡಿದ್ದರು.

ಕಾರ್ಮಿಕರು ಹೆದ್ದಾರಿಯಲ್ಲೇ ನಡೆದುಬಂದಿದ್ದರು. ಪೊಲೀಸ್‌ ಬ್ಯಾರಿಕೇಡ್‌ ಇರುವಲ್ಲಿ ಅಂತರ ಕಾಯ್ದುಕೊಂಡಿದ್ದರು. ಆದರೆ, ಕಬಕದಲ್ಲಿ ಪೊಲೀಸರು ಇವರನ್ನು ತಡೆದು, ವಿಚಾರಿಸಿ, ಪುತ್ತೂರು ಮಿನಿ ವಿಧಾನಸೌಧಕ್ಕೆ ಕರೆತಂದಿದ್ದಾರೆ.

ತಹಶೀಲ್ದಾರ್‌ ರಮೇಶ್‌ ಬಾಬು ಅವರ ಮಾರ್ಗದರ್ಶನದಂತೆ ಅವರಿಗೆ ಆಹಾರ ಸಾಮಗ್ರಿಗಳನ್ನು ನೀಡಿ, ವಾಹನದ ಮೂಲಕ ಮಂಗಳೂರಿಗೆ ವಾಪಸ್‌ ಕಳುಹಿಸಲಾಯಿತು.

ನಾವು ಮನೆಗೆ ಹೋಗುತ್ತೇವೆ
ಮಂಗಳೂರಿನಲ್ಲಿ ಊಟಕ್ಕೆ ಸಮಸ್ಯೆ ಇಲ್ಲದಿದ್ದರೂ ಕೆಲಸ ಇಲ್ಲದ ಕಾರಣ ನಮ್ಮೂರಿಗೆ ಹೊರಟಿದ್ದೆವು. ವಾಹನ ಇಲ್ಲದ ಕಾರಣ ಕಾಲ್ನಡಿಗೆಯೇ ಅನಿವಾರ್ಯವಾಗಿತ್ತು. ಬೆಳಗ್ಗಿನ ಜಾವ 3.30ಕ್ಕೆ ಮಂಗಳೂರಿನ ಮನೆಯಿಂದ ಹೊರಟಿದ್ದೇವೆ. ನಮ್ಮನ್ನು ಊರಿಗೆ ಕಳುಹಿಸಿ ಎಂದು ಕಾರ್ಮಿಕರಾದ ಕುಮಾರನ್‌, ಸೆಂಥಿಲ್‌, ಧರ್ಮ, ರಾಮ, ಚಿನ್ನದೊರೆ, ಶಕ್ತಿವೇಲು, ಸಾಮಿದ್ರಿ ಹಾಗೂ ಹರಿ ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.

ಕಾರ್ಮಿಕರ ಕೈಗೆ ಮುದ್ರೆ
ತಮಿಳುನಾಡಿಗೆ ಈಗ ಹೋಗುವ ಹಾಗಿಲ್ಲ. ನಿಮಗೇನೂ ತೊಂದರೆಯಾಗದಂತೆ ನೋಡಿ ಕೊಳ್ಳುತ್ತೇವೆ. 15 ದಿನಗಳಿಗೆ ಬೇಕಾದ ದಿನಸಿ, ಆಹಾರ ವಸ್ತುಗಳನ್ನು ನೀಡುತ್ತೇವೆ. ಯಾವುದೇ ಕಾರಣಕ್ಕೂ ನಿಮ್ಮ ಮಂಗಳೂರಿನ ಮನೆ ಬಿಟ್ಟು ಹೊರಗೆ ಬರಬಾರದು ಎಂದು ಅಧಿಕಾರಿಗಳು ಸೂಚಿಸಿದರು. ಕಾರ್ಮಿಕರ ಕೈಗಳಿಗೆ ಮುದ್ರೆ ಹಾಕಿ, ಎರಡು ವಾಹನಗಳಲ್ಲಿ ಮಂಗಳೂರಿಗೆ ಕಳುಹಿಸಿದ್ದಾರೆ.

ಕಾಲ್ನಡಿಗೆಯಲ್ಲಿ ಬಂದ ನಿರಾಶ್ರಿತ ಮಹಿಳೆಯರು
ವಿಟ್ಲ : ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮೂಲದ ಮೂವರು ನಿರಾಶ್ರಿತ ಮಹಿಳೆಯರು ಕಾಲ್ನಡಿಗೆ ಮೂಲಕ ವಿಟ್ಲ ಪರಿಸರಕ್ಕೆ ಆಗಮಿಸಿದ್ದು, ಅವರನ್ನು ವಿಟ್ಲ ಠಾಣಾಧಿಕಾರಿ ವಿನೋದ್‌ ಎಸ್‌. ಕೆ. ಅವರು ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಹಾರಾಷ್ಟ್ರದ ನಾಸಿಕ್‌ನ ಈ ಮಹಿಳೆಯರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್‌ ಜಾರಿಯಾದ ಬಳಿಕ ರೈಲು ಹಾಗೂ ಬಸ್‌ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ನಡೆದುಕೊಂಡೇ ಬಂದಿದ್ದು, ಸಾಲೆತ್ತೂರು ಮೂಲಕ ಕೊಡಂಗಾಯಿಗೆ ತಲುಪಿದ್ದರು. ಅವರನ್ನು ಗಮನಿಸಿದ ಸ್ಥಳೀಯ ಯುವಕರು ವಿಟ್ಲ ಠಾಣೆಗೆ ಮಾಹಿತಿ ನೀಡಿದರು. ಫ್ರೆಂಡ್ಸ್‌ ವಿಟ್ಲ ಆ್ಯಂಬುಲೆನ್ಸ್‌ನಲ್ಲಿ ವಿಟ್ಲಕ್ಕೆ ಕರೆತರಲಾಯಿತು.

ವಿಟ್ಲ ಪ.ಪಂ. ಮುಖ್ಯಾಧಿಕಾರಿ ಮಾಲಿನಿ ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಅವರಿಗೆ ಆಶ್ರಯ ಕಲ್ಪಿಸಲು ಸೂಚಿಸಿದ್ದಾರೆ. ಬಂಟ್ವಾಳ ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌. ಅವರು ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯರಿಂದ ಮಾಹಿತಿ ಪಡೆದು, ಮಂಗಳೂರಿಗೆ ವರ್ಗಾಯಿಸುವುದಾಗಿ ತಿಳಿಸಿದರು. ವಿಟ್ಲ ಪಟ್ಟಣ ಪಂಚಾಯತ್‌ ಮುಖ್ಯಾ ಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಫ‌ಕೀರ ಮೂಲ್ಯ, ದಿವಾಕರ, ಸಿಬಂದಿ ಚಂದ್ರಶೇಖರ ವರ್ಮ, ಬಶೀರ್‌, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿ ಕಾರಿ ವೇದಾವತಿ ಬಲ್ಲಾಳ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ

Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

8-uv-fusion

UV Fusion: ಬಾಯಾರಿ ಬರುವ ಬಾನಾಡಿಗಳ ರಕ್ಷಿಸೋಣ

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್‌ ಪಡೀಲ್‌ ಆಯ್ಕೆ

ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್‌ ಪಡೀಲ್‌ ಆಯ್ಕೆ

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

rajinikanth

Rajinikanth ಬಯೋಪಿಕ್‌ಗೆ ಭರ್ಜರಿ ತಯಾರಿ; ಬಾಲಿವುಡ್‌ ನಿರ್ಮಾಪಕನಿಂದ ಸಿನಿಮಾ ನಿರ್ಮಾಣ

Udupi: ಪರಿಸರ ಸ್ನೇಹಿ ಸಿಎನ್‌ಜಿ ಬಸ್‌ ಸಂಚಾರ-ಸಿಎನ್‌ಜಿ ಲಭ್ಯತೆ ಸಮಸ್ಯೆ

Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ

Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ

ಬರಪೀಡಿತ ಪಟ್ಟಿಯಲ್ಲಿ ಸೇರಿದ ಕಾರ್ಕಳಕ್ಕೆ 152 ಕೆರೆಗಳೇ ಶ್ರೀರಕ್ಷೆ

ಬರಪೀಡಿತ ಪಟ್ಟಿಯಲ್ಲಿ ಸೇರಿದ ಕಾರ್ಕಳಕ್ಕೆ 152 ಕೆರೆಗಳೇ ಶ್ರೀರಕ್ಷೆ

Davanagere; ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರಿಗೆ ಮಾತೃ ವಿಯೋಗ

Davanagere; ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರಿಗೆ ಮಾತೃ ವಿಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.