ವೈದ್ಯರೇ ಇಲ್ಲದ ನೆರಿಯ ಪ್ರಾ.ಆ. ಕೇಂದ್ರ!

Team Udayavani, Apr 23, 2020, 6:08 AM IST

ವೈದ್ಯರೇ ಇಲ್ಲದ ನೆರಿಯ ಪ್ರಾ.ಆ. ಕೇಂದ್ರ!

ವಿಶೇಷ ವರದಿಮುಂಡಾಜೆ: ಬೆಳ್ತಂಗಡಿ ತಾಲೂಕು ಕೇಂದ್ರದಿಂದ 25 ಕಿ.ಮೀ. ದೂರದಲ್ಲಿರುವ ನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದೇ ಕಿರಿಯ ಆರೋಗ್ಯ ಸಹಾಯಕಿಯರಿಂದ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

ನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರವು ಚಿಬಿದ್ರೆ, ತೋಟ ತ್ತಾಡಿ, ನೆರಿಯ, ಚಾರ್ಮಾಡಿ, ಪುದುವೆಟ್ಟು ಈ ಐದು ಗ್ರಾಮ, ತೀರಾ ಹಿಂದುಳಿದ ಪ್ರದೇಶವಾದ ಬಾಂಜಾರು ಮಲೆ ವರೆಗಿನ ವ್ಯಾಪ್ತಿ ಯನ್ನು ಹೊಂದಿದೆ. ಸುಮಾರು 21,492 ಜನರು ಈ ಆರೋಗ್ಯ ಕೇಂದ್ರವನ್ನು ಅವಲಂಬಿ ಸಿದ್ದಾರೆ. ಲಾಕ್‌ಡೌನ್‌ ಆರಂಭಕ್ಕೂ ಮೊದಲು ಉಜಿರೆ ಪ್ರಾ.ಆರೋಗ್ಯ ಕೇಂದ್ರದ ವೈದ್ಯರು ಪ್ರತಿ ಮಂಗಳವಾರ, ಶುಕ್ರವಾರ ಭೇಟಿ ನೀಡುತ್ತಿದ್ದರು. ಬಳಿಕ ವಾಹನ ವ್ಯವಸ್ಥೆ ಇಲ್ಲದ ಕಾರಣ ಒಮ್ಮೆ ಬಂದಿರುತ್ತಾರೆ.

ಕಿರಿಯ ಆರೋಗ್ಯ
ಸಹಾಯಕಿಯರಿಂದ ಸೇವೆ
ಇಲ್ಲಿಗೆ ಬರುವ ಮಂದಿಗೆ ಕಿರಿಯ ಆರೋಗ್ಯ ಸಹಾಯಕಿಯವರೆ ಪರೀಕ್ಷಿಸಿ, ಔಷಧಗಳನ್ನು ನೀಡುತ್ತಿ ದ್ದಾರೆ. ಹೆಚ್ಚಿನ ತಪಾಸಣೆ ಬೇಕಿದ್ದಲ್ಲಿ ಇಲ್ಲಿಂದ 12 ಕಿ.ಮೀ. ದೂರದ ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಿದೆ. ಪುದುವೆಟ್ಟು, ಬೊಳಿ¾ನಾರ್‌, ಚಾರ್ಮಾಡಿ, ಗಂಡಿ ಬಾಗಿಲು, ತೋಟತ್ತಾಡಿ, ಚಿಬಿದ್ರೆಗಳಲ್ಲಿರುವ ಉಪಆರೋಗ್ಯ ಕೇಂದ್ರ ಗಳು ನೆರಿಯಾ ಆರೋಗ್ಯ ಕೇಂದ್ರದ ಅಡಿಯಲ್ಲಿ ಕಾರ್ಯ ನಿರ್ವಹಿ ಸುತ್ತಿದ್ದು, ಇಲ್ಲಿ ಓರ್ವ ಕಿರಿಯ ಆರೋಗ್ಯ ಸಹಾಯಕಿ ಹಾಗೂ ಒಂದು ಸಾವಿರ ಜನರಿಗೆ ಒಬ್ಬರಂತೆ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ.

ವಿಭಜನೆಯಾಗದ ಆ.ಕೇಂದ್ರ
ತೋಟತ್ತಾಡಿ ಗ್ರಾಮಗಳ ವ್ಯಾಪ್ತಿಗೆ ಸಂಬಂಧಪಟ್ಟಂತೆ ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ಪ್ರಾ. ಆರೋಗ್ಯ ಕೇಂದ್ರ ತೆರೆಯಲಾಗಿದೆ. ತಾಂತ್ರಿಕ ಸಮಸ್ಯೆಗಳಿಂದ ಅದು ಇನ್ನೂ ಕೂಡ ನೆರಿಯ ಪ್ರಾ.ಆ. ಕೇಂದ್ರದಿಂದ ವಿಭಜನೆ ಗೊಂಡಿಲ್ಲ. ಕಕ್ಕಿಂಜೆಯಲ್ಲಿ ಸರಿ ಯಾದ ಕಟ್ಟಡ, ವೈದ್ಯಾಧಿಕಾರಿ, ಸಿಬಂದಿ, ವೈದ್ಯ ಕೀಯ ಸೌಲಭ್ಯ ಇಲ್ಲದ ಕಾರಣ ಅಲ್ಲಿನವರು ನೆರಿಯ ಆರೋಗ್ಯ ಕೇಂದ್ರವನ್ನೇ ಆಶ್ರಯಿಸಬೇಕಿದೆ.

ವೈದ್ಯರು ಬರಲು ಹಿಂದೇಟು
ಗ್ರಾಮ ಸಭೆ, ಸಾಮಾನ್ಯ ಸಭೆಯಲ್ಲಿ ಖಾಯಂ ವೈದ್ಯರನ್ನು ನೇಮಿಸುವಂತೆ ನಿರ್ಣಯ ಮಾಡಿ ಶಾಸಕರಿಗೆ ,ತಾಲೂಕು ವೈದ್ಯಾಧಿಕಾರಿಗಳಿಗೆ ಕಳುಹಿಸಲಾಗಿದೆ. ತೀರಾ ಗ್ರಾಮೀಣ ಪ್ರದೇಶವಾದ ಕಾರಣ ಇಲ್ಲಿಗೆ ಬರಲು ವೈದ್ಯರು ಹಿಂದೇಟು ಹಾಕುತ್ತಾರೆ.
– ಪಿ. ಮಹಮ್ಮದ್‌, ಅಧ್ಯಕ್ಷರು, ಗ್ರಾ.ಪಂ.ನೆರಿಯ

ವೈದ್ಯರ ನಿಯೋಜನೆ
ನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗಿರಿಜನ ಸಂಚಾರಿ ಘಟಕದ ವೈದ್ಯರನ್ನು ನಿಯೋ ಜಿಸಲಾಗಿದ್ದು, ತತ್‌ಕ್ಷಣ ದಿಂದ ಕರ್ತವ್ಯಕ್ಕೆ ತೆರಳಲು ಸೂಚಿಸಲಾಗಿದೆ.
– ಡಾ| ಕಲಾಮಧು, ತಾ| ಆರೋಗ್ಯಾಧಿಕಾರಿ, ಬೆಳ್ತಂಗಡಿ

ಟಾಪ್ ನ್ಯೂಸ್

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.