ಪಾದರಾಯನಪುರದ 5 ರಸ್ತೆಗಳು ಅಪಾಯಕಾರಿ!


Team Udayavani, May 8, 2020, 3:13 PM IST

ಪಾದರಾಯನಪುರದ 5 ರಸ್ತೆಗಳು ಅಪಾಯಕಾರಿ!

ಬೆಂಗಳೂರು: ಪಾದರಾಯಪುರದಲ್ಲಿ ಕೋವಿಡ್ 19 ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇಷ್ಟಾದರೂ ಇಲ್ಲಿನ ಜನ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸರಿಗೆ ಸಹಕಾರ ನೀಡುತ್ತಿಲ್ಲ. ಅಲ್ಲದೆ, ಏ. 19ರಂದು ಈ ಭಾಗದಲ್ಲಿ ನಡೆದ ದಾಂಧಲೆ ಬಳಿಕ ಪೊಲೀಸರು ಸಹ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ಆದರೆ, ಜನರನ್ನು ಹೊರಬರದಂತೆ ತಡೆಯಲು ಸಾಧ್ಯವಾಗಿಲ್ಲ.

ಅಪಾಯ ತಪ್ಪಿಸಲು ಕ್ವಾರಂಟೈನ್‌: ಏ.19ರಂದು ಈ ಭಾಗದಲ್ಲಿನ ಕೋವಿಡ್ 19  ಸೋಂಕಿತರ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡಲು ನಿರ್ಧರಿಸಿದ್ದರ ಹಿಂದೆ ಎರಡು ಕಾರಣಗಳಿತ್ತು ಎನ್ನುತ್ತಾರೆ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು. ಮೊದಲನೆಯದು ಇಲ್ಲಿನ ಕೆಲವು ದ್ವಿತೀಯ ಸಂಪರ್ಕಿತರಲ್ಲೂ ಸೋಂಕು ದೃಢಪಟ್ಟಿತ್ತು. ಎರಡನೆಯದು ದ್ವಿತೀಯ ಸಂಪರ್ಕಿತರು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿದ್ದರು. ಅವರ ಮನೆಗಳಲ್ಲಿ ಸಾಮಾಜಿಕ ಅಂತರವೇ ಇಲ್ಲವಾಗಿತ್ತು. ಅಲ್ಲದೆ, ಹೀಗೆ ದ್ವಿತೀಯ ಸಂಪರ್ಕಿತರಿಂದಲೇ ಮೂರನೆಯವರಿಗೂ ಕೊರೊನಾ ಹರಡುವ ಸಾಧ್ಯತೆಯಿತ್ತು. ಎಲ್ಲವನ್ನೂ ಪರಿಶೀಲಿಸಿ, ದ್ವಿತೀಯ ಸಂಪರ್ಕಿತರನ್ನೂ ಕ್ವಾರಂಟೈನ್‌ ಮಾಡಲಾಗುತ್ತಿದೆ.

ಈ ಕುರಿತು ಉದಯವಾಣಿ ಜತೆ ಮಾತನಾಡಿದ ಪಶ್ಚಿಮ ವಲಯದ ಬಿಬಿಎಂಪಿ ಆರೋಗ್ಯಾಧಿಕಾರಿ ಮನೋರಂಜನ್‌ ಹೆಗ್ಡೆ, ಪಾದರಾಯನಪುರ ಒಂದರಲ್ಲೇ ಇಲ್ಲಿಯವರೆಗೆ 34 ಪ್ರಕರಣಗಳು ದೃಢಪಟ್ಟಿದ್ದು, ರ್‍ಯಾಂಡಮ್‌ ಚೆಕ್‌ ಮಾಡಿದ 70 ಜನರಲ್ಲಿ ಮೂವರಿಗೆ ಕೋವಿಡ್ 19  ದೃಢಪಟ್ಟಿದೆ. ಇನ್ನು 26 ಜನರನ್ನು ಪರೀಕ್ಷಿಸಿದ್ದು, ಯಾವುದೇ ಪಾಸಿಟಿವ್‌ ಪ್ರಕರಣ ದಾಖಲಾಗಿಲ್ಲ.

ರ್ಯಾಂಡಮ್ ಪರೀಕ್ಷೆಗೆ ಮೊದಲು ಜನ ಒಪ್ಪಲಿಲ್ಲ. ಅವರನ್ನು ಕ್ವಾರಂಟೈನ್‌ ಮಾಡುತ್ತಿಲ್ಲ ಪರೀಕ್ಷೆ ಮಾಡುತ್ತೇವೆ ಎಂದು ಮನವೊಲಿಸಿದೆವು. ಈ ಭಾಗದಲ್ಲಿ ಜನ ಸಂಚಾರ ನಿಲ್ಲಿಸುತ್ತಿಲ್ಲ. ಪೊಲೀಸರು ಗಸ್ತು ತಿರುಗುವಾಗ ಹಾಗೂ ಬಿಬಿಎಂಪಿ ಎಚ್ಚರಿಕೆ ಸಂದೇಶ ನೀಡುವಾಗ ಒಳಗೆ ಹೋಗುತ್ತಾರೆ. ಬಳಿಕ ಮತ್ತೆ ಹೊರಬರುತ್ತಾರೆ. ರ್‍ಯಾಂಡಮ್‌ ಚೆಕ್‌ಅಪ್‌ನಲ್ಲಿಯೂ ಕೋವಿಡ್ 19 ಸೋಂಕು ದೃಢಪಡುತ್ತಿರುವುದರಿಂದ ಜನ ಸಹಕಾರ ಅಗತ್ಯ ಎಂದರು.

ಆರ್ಥಿಕವಾಗಿ ಹಿಂದುಳಿದ ಪ್ರದೇಶ :  ಸೋಂಕು ತಡೆಗೆ ಪಾದರಾಯನಪುರದ ಮುಖ್ಯ ಸಮಸ್ಯೆಯೆಂದರೆ ಮನೆಗಳ ರಚನೆ ಹಾಗೂ ಪ್ರದೇಶಗಳು. ಇಲ್ಲಿ ಮನೆಗಳು ಒಂದಕ್ಕೊಂದು ಅಂಟಿಕೊಂಡ ರೀತಿಯಲ್ಲಿ ರಚನೆಯಾಗಿವೆ. ಚಿಕ್ಕ ಚಿಕ್ಕ ಮನೆಗಳಲ್ಲಿ ಅವಿಭಕ್ತ ಕುಟುಂಬಗಳು ನೆಲೆಸಿವೆ. ಶುದ್ಧ ಗಾಳಿ, ಬೆಳಕಿನ ಕೊರತೆ ಹಾಗೂ ಮುಖ್ಯವಾಗಿ ಸಾಮಾಜಿಕ ಅಂತರ ಕಾಯದಿರುವುದು ಸೋಂಕು ಹೆಚ್ಚಾಗಲು ಕಾರಣವಾಗಿದೆ.

ಅಪಾಯದ ತೊಟ್ಟಿಲು :  ಪಾದರಾಯನಪುರದ ಹರಫ‌ತ್‌ ನಗರವನ್ನು ಸೀಲ್‌ ಡೌನ್‌ ಮಾಡಲಾಗಿದೆ. ಈ ಭಾಗದ 6ರಿಂದ 11ನೇಕ್ರಾಸ್‌ ನಲ್ಲಿ ಅಂದಾಜು ಎರಡು ಸಾವಿರ ಮನೆಗಳಿವೆ. ಎಲ್ಲವೂ ಅಂಟಿಕೊಂಡಂತಿವೆ. ದೃಢಪಟ್ಟ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಿನವು ಈ ಐದು ರಸ್ತೆಯವೇ ಆಗಿದೆ. ಹೀಗಾಗಿ ಸೀಲ್‌ಡೌನ್‌ ಮಾಡಲಾಗಿದೆ. ಇದರ ಹೊರತಾಗಿಯೂ ಗಲ್ಲಿಗಳಲ್ಲಿ ಜನ ಸುತ್ತಾಡುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

 

 – ಹಿತೇಶ್‌. ವೈ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.