ಪಾಕ್ ಕ್ರಿಕೆಟಿಗನ ಬ್ಯಾಟ್ ಅನ್ನು 7 ಕೋಟಿ ರೂ. ಕೊಟ್ಟು ಖರೀದಿಸಿದ ಪುಣೆಯ ಸಂಸ್ಥೆ
Team Udayavani, May 9, 2020, 4:00 PM IST
ಪುಣೆ: ಕೋವಿಡ್-19 ಮಹಾಮಾರಿ ಹಿನ್ನೆಲೆಯಲ್ಲಿ ದೇಣಿಗೆ ನೀಡುವುದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ಟೆಸ್ಟ್ ನಾಯಕ ಅಜರ್ ಅಲಿ ಆನ್ ಲೈನ್ ನಲ್ಲಿ ಹರಾಜಿಗಿಟ್ಟಿದ್ದರು. ಈ ಬ್ಯಾಟ್ ಅನ್ನು ಮಹಾರಾಷ್ಟ್ರದ ಪುಣೆ ಮೂಲದ ಸಂಸ್ಥೆಯೊಂದು ಏಳು ಕೋಟಿ ರೂ. ಕೊಟ್ಟು ಖರೀದಿಸಿದೆ.
ಪುಣೆ ಮೂಲದ ಬ್ಲೇಡ್ಸ್ ಆಫ್ ಗ್ಲೋರಿ ಕ್ರಿಕೆಟ್ ಮ್ಯೂಸಿಯಂ ಅಜರ್ ಅಲಿಯ ಈ ಬ್ಯಾಟನ್ನು ಏಳು ಕೋಟಿ ರೂ. ಕೊಟ್ಟು ಪಡೆದುಕೊಂಡಿದೆ.
2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಇದೇ ಬ್ಯಾಟ್ನಿಂದ ಅಜರ್ ಅಲಿ 302 ರನ್ ಬಾರಿಸಿದ್ದರು.
2017ರ ಚಾಂಪಿಯನ್ ಟ್ರೋಫಿ ಫೈನಲ್ ನಲ್ಲಿ ಧರಿಸಿದ್ದ ಜೆರ್ಸಿಯನ್ನೂ ಅಜರ್ ಅಲಿ ಹರಾಜಿಗೆ ಇಟ್ಟಿದ್ದರು. ಪೂರ್ಣ ಪಾಕಿಸ್ಥಾನ ತಂಡದ ಸಹಿ ಇದರಲ್ಲಿತ್ತು. ಈ ಜೆರ್ಸಿಯನ್ನು ಪಾಕಿಸ್ಥಾನಿ ಮೂಲದ ಕ್ಯಾಲಿಫೋರ್ನಿಯಾದಲ್ಲಿರುವ ಕಾಶ್ ವಿಲಾನಿ ಎಂಬವರು ಸುಮಾರು 8.30 ಕೋಟಿ ರೂ ಗೆ ಖರೀದಿಸಿದ್ದಾರೆ.