ಮಾವಿನ ಹಣ್ಣು ತುಂಬಿದ್ದ ಟ್ರಕ್ ಪಲ್ಟಿ: ಐವರು ಕಾರ್ಮಿಕರು ದುರ್ಮರಣ, 11 ಜನರಿಗೆ ಗಾಯ
Team Udayavani, May 10, 2020, 7:40 AM IST
ಮಧ್ಯಪ್ರದೇಶ: ಟ್ರಕ್ ಪಲ್ಟಿಯಾದ ಕಾರಣ ಐವರು ಕಾರ್ಮಿಕರು ಮೃತಪಟ್ಟು 11 ಜನ ಗಂಭೀರ ಗಾಯಗೊಂಡ ಘಟನೆ ನರಂಸಿಂಗಪುರದ ಪಾಥಾ ಎಂಬ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.
ಮಾವಿನ ಹಣ್ಣು ತುಂಬಿದ್ದ ಟ್ರಕ್ನಲ್ಲಿ ಈ ಕಾರ್ಮಿಕರು ಹೈದರಾಬಾದ್ನಿಂದ ಉತ್ತರ ಪ್ರದೇಶದ ಆಗ್ರಾಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಟ್ರಕ್ನಲ್ಲಿ ಸುಮಾರು ಒಟ್ಟು 18 ಮಂದಿ ಕಾರ್ಮಿಕರಿದ್ದರು. ನರಸಿಂಗ್ಪುರದ ಪಾಥಾ ಗ್ರಾಮದ ಬಳಿ ಟ್ರಕ್ ಪಲ್ಟಿಯಾದಾಗ ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು 11 ಮಂದಿ ಗಂಭೀರವಾಗಿ ಗಾಯಗೊಂಡರು ಎಂದು ನರಸಿಂಗ್ಪುರದ ಜಿಲ್ಲಾಧಿಕಾರಿ ದೀಪಕ್ ಸಕ್ಸೇನಾ ಹೇಳಿದ್ದಾರೆ.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲವಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ಕಳ್ಳರು & ದರೋಡೆಕೋರರ ಗ್ಯಾಂಗ್ ಚುಚ್ಚಿದ್ದ ವಿಷಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಮೃತ್ಯು
Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ
Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್ ಉತ್ಸುಕವಾಗಿದೆ: ಪ್ರಧಾನಿ ಮೋದಿ