ರಷ್ಯಾ ನೂರಾರು ಸಾವುಗಳ ಲೆಕ್ಕವೇ ಇಲ್ಲ

Team Udayavani, May 13, 2020, 10:18 AM IST

ರಷ್ಯಾ ನೂರಾರು ಸಾವುಗಳ ಲೆಕ್ಕವೇ ಇಲ್ಲ

ಮಾಸ್ಕೊ: ರಷ್ಯಾದಲ್ಲಿ ಕೋವಿಡ್ ವೈರಸ್‌ ಹಾವಳಿ ಪ್ರಾರಂಭವಾದದ್ದು ತಡವಾಗಿಯಾದರೂ ಅದು ಹರಡುತ್ತಿರುವ ವೇಗ ಕಳವಳಕಾರಿಯಾಗಿದೆ. ವೈರಸ್‌ ಪ್ರಸರಣ ಸುರುವಾದ ಕೆಲವೇ ದಿನಗಳಲ್ಲಿ ರಷ್ಯಾ ಅತಿ ಹೆಚ್ಚು ಸೋಂಕಿತರು ಇರುವ ದೇಶಗಳ ಪೈಕಿ ಮೂರನೇ ಸ್ಥಾನಕ್ಕೇರಿದೆ. ಅದಾಗ್ಯೂ ರಷ್ಯಾ ತನ್ನಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ವಾಸ್ತವ ಮಾತ್ರ ರಷ್ಯಾದ ಈ ಬಡಾಯಿಯನ್ನು ಅಣಕಿಸುತ್ತಿದೆ.

ರಷ್ಯಾದಲ್ಲಿ ಪ್ರತಿ 10 ಲಕ್ಷ ಜನರಿಗೆ ಬರೀ 13 ಮಂದಿ ಮಾತ್ರ ಕೋವಿಡ್ ಗೆ ಬಲಿಯಾಗಿದ್ದರು. ಜಾಗತಿಕವಾಗಿ ಇದು 36 ಇದ್ದು, ರಷ್ಯಾದ ಈ ತೀರಾ ಕಡಿಮೆ ಸಂಖ್ಯೆ ಸಂಶೋಧಕರಿಗೊಂದು ಜಟಿಲ ಪ್ರಶ್ನೆಯಾಗಿಯೇ ಉಳಿದಿತ್ತು. ಆದರೆ ಎಪ್ರಿಲ್‌ನಿಂದೀಚೆಗೆ ದತ್ತಾಂಶಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದಾಗ ರಷ್ಯಾದ ಹೇಳಿಕೆ ಸುಳ್ಳು ಎನ್ನುವುದು ಸಾಬೀತಾಗುತ್ತಿದೆ.

ಮಾಸ್ಕೊದ ಸರಕಾರಿ ಆಸ್ಪತ್ರೆ ಒದಗಿಸಿರುವ ಅಂಕಿಅಂಶದ ಪ್ರಕಾರ ಈ ಆಸ್ಪತ್ರೆಯಲ್ಲಿ ಎಪ್ರಿಲ್‌ನಲ್ಲಿ ಸಂಭವಿಸಿರುವ ಸಾವುಗಳು ಐದು ವರ್ಷದ ಎಪ್ರಿಲ್‌ ತಿಂಗಳ ಸರಾಸರಿ ಸಾವುಗಳಿಗಿಂತ ಐದು ಪಟ್ಟು ಹೆಚ್ಚು ಇದೆ. ಅಂದರೆ ಎಪ್ರಿಲ್‌ ತಿಂಗಳೊಂದರಲ್ಲೇ ಈ ಆಸ್ಪತ್ರೆಯಲ್ಲಿ 1,700ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆಯಂತೆ. ಆದರೆ ರಷ್ಯಾ ಕೋವಿಡ್ ನ ಅಂಕಿಅಂಶ ಬಿಡುಗಡೆ ಮಾಡುವಾಗ ಈ ಸಾವುಗಳನ್ನು ಲೆಕ್ಕಕ್ಕೆ ಹಿಡಿದಿರಲಿಲ್ಲ. ರಷ್ಯಾ ಒಟ್ಟಾರೆಯಾಗಿ ತನ್ನಲ್ಲಿ 642 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ ಎಂದು ಹೇಳಿಕೊಂಡಿತ್ತು.

ರಷ್ಯಾ ಮಾತ್ರವಲ್ಲದೆ ಇನ್ನೂ ಹಲವು ದೇಶಗಳು ಹೀಗೆ ಉದ್ದೇಶಪೂರ್ವಕವಾಗಿ ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸಿವೆ.
ಒಂದು ವಿಚಾರ ಈಗ ಸ್ಪಷ್ಟವಾಗುತ್ತಿದೆ. ಕೋವಿಡ್ ಬಲಿ ಸಂಖ್ಯೆ ಸರಕಾರ ಹೇಳಿರುವುದಕ್ಕಿಂತ ಕನಿಷ್ಠ ಮೂರು ಪಟ್ಟು ಹೆಚ್ಚು ಇದೆ. ನಿಜವಾದ ಸಾವಿನ ಸಂಖ್ಯೆಯನ್ನು ತಿಳಿಯಲು ವಿಶೇಷವಾದ ಅಧ್ಯಯನ ನಡೆಸುವ ಅಗತ್ಯವಿದೆ ಎನ್ನುತ್ತಾರೆ ಮಾಸ್ಕೊದ ಪ್ರಸಿಡೆನ್ಶಿಯಲ್‌ ಅಕಾಡೆಮಿ ಆ್ಯಂಡ್‌ ಪಬ್ಲಿಕ್‌ ಅಡ್ಮಿನಿಸ್ಟ್ರೇಶನ್‌ನ ಹಿರಿಯ ಸಂಶೋಧಕಿ ಟಟಿಯಾನ ಎನ್‌.ಮಿಖಾಯಿಲೋವ.

ಸರಕಾರದ ಬಡಾಯಿ
ನಮ್ಮ ದೇಶ ಜಗತ್ತಿನಲ್ಲೇ ಅತಿ ಕಡಿಮೆ ಕೋವಿಡ್ ಸಾವುಗಳನ್ನು ಕಂಡಿದೆ ಎಂದು ಕೆಲ ದಿನಗಳ ಹಿಂದೆಯಷ್ಟೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿಕೊಂಡಿದ್ದರು. ಸರಕಾರಿ ಟಿವಿ ವಾಹಿನಿಗಳಂತೂ ಕೋವಿಡ್ ವಿರುದ್ಧ ಸರಕಾರ ನಡೆಸುತ್ತಿರುವ ಸಶಕ್ತ ಹೋರಾಟದ ಬಗ್ಗೆ ಪುಂಖಾನುಪುಂಖವಾಗಿ ಸುದ್ದಿಗಳನ್ನು ಮತ್ತು ಜಾಹೀರಾತುಗಳನ್ನು ಬಿತ್ತರಿಸುತ್ತಿದ್ದವು.

ಕೋವಿಡ್ ವ್ಯಾಪಿಸುವಿಕೆ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸೋಮವಾರ ಪುಟಿನ್‌ ದೇಶವ್ಯಾಪಿ ಜಾರಿಯಲ್ಲಿದ್ದ ಕೆಲಸ “ರಹಿತ ಅವಧಿಯನ್ನು’ ವಜಾಗೊಳಿಸಿರುವುದಾಗಿ ಘೋಷಿಸಿದ್ದರು. ಇದರ ಬೆನ್ನಿಗೆ ರಷ್ಯಾದಲ್ಲಿ ಕೋವಿಡ್ ಗೆ ಬಲಿಯಾದವರ ಕುರಿತು ಅನುಮಾನಗಳು ವ್ಯಕ್ತವಾಗಿವೆ. ಮಾಸ್ಕೊದಲ್ಲಿ ಶೇ.70 ಮತ್ತು ಒಟ್ಟಾರೆ ದೇಶದಲ್ಲಿ ಶೇ.80 ಸಾವುಗಳನ್ನು ಅಧಿಕೃತವಾಗಿ ವರದಿಯೇ ಮಾಡಿಲ್ಲ. ಇದನ್ನು ಸೇರಿಸಿದರೆ ರಷ್ಯಾದ ಸಾವಿನ ಪ್ರಮಾಣ ಅಪಾರವಾಗಲಿದೆ ಎನ್ನುತ್ತಿದೆ ಒಂದು ಮೂಲ. ಹೆಚ್ಚಿನ ಸಾವುಗಳಿಗೆ ಅಂಗಾಂಗ ವೈಫ‌ಲ್ಯ, ಹೃದಯಾಘಾತ ಈ ಮುಂತಾದ ಕಾರಣಗಳನ್ನು ತೋರಿಸಲಾಗಿದೆ. ಇದು ರಷ್ಯಾದಲ್ಲಿ ಆರೋಗ್ಯ ಕ್ಷೇತ್ರ ಕಾರ್ಯ ನಿರ್ವಹಿಸುತ್ತಿರುವ ವ್ಯವಸ್ಥೆ ಎನ್ನುತ್ತಾರೆ ಮಿಖಾಯಿಲೋವ.

ಟಾಪ್ ನ್ಯೂಸ್

SSLC Exam Result; ರೈತ ಕುಟುಂಬದ ಅಂಕಿತಾ ರಾಜ್ಯಕ್ಕೆ ಪ್ರಥಮ

SSLC Exam Result; ರೈತ ಕುಟುಂಬದ ಅಂಕಿತಾ ರಾಜ್ಯಕ್ಕೆ ಪ್ರಥಮ

ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಯುವಕನ ಹತ್ಯೆ… ಗೆಳೆಯರ ಜೊತೆ ಪಾರ್ಟಿ ಮಾಡಿದ್ದ ಯುವಕ

ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಯುವಕನ ಹತ್ಯೆ… ಗೆಳೆಯರ ಜೊತೆ ಪಾರ್ಟಿ ಮಾಡಿದ್ದ ಯುವಕ

SSLC Exam Result; Here is the district wise result list

SSLC Exam Result; ಇಲ್ಲಿದೆ ಜಿಲ್ಲಾವಾರು ಫಲಿತಾಂಶ ಪಟ್ಟಿ

5-koratagere

Koratagere: ಹಲಸಿನ ಮರದಿಂದ ಕಾಲು ಜಾರಿ ಬಿದ್ದು ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು

Gangavathi: ಬಿರುಗಾಳಿ ಮಳೆಗೆ ಬಾಳೆ ತೋಟ ಸೇರಿ ಅಪಾರ ಪ್ರಮಾಣದ ಹಾನಿ

Gangavathi: ಬಿರುಗಾಳಿ ಮಳೆಗೆ ಬಾಳೆ ತೋಟ ಸೇರಿ ಅಪಾರ ಪ್ರಮಾಣದ ಹಾನಿ

sslc

SSLC ಫಲಿತಾಂಶ ಪ್ರಕಟ; ಶೇ. 73.40 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ; ಉಡುಪಿ ಜಿಲ್ಲೆ ಪ್ರಥಮ

ದಿಢೀರ್ ರಜೆ ಹಾಕಿದ ಸಿಬ್ಬಂದಿ… 30 ಉದ್ಯೋಗಿಗಳನ್ನು ವಜಾಗೊಳಿಸಿದ Air India Express

Mass Sick Leave… 30 ಸಿಬ್ಬಂದಿಗಳನ್ನು ವಜಾಗೊಳಿಸಿದ Air India Express

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”         

Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”         

7-

ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು: ಕೃತಜ್ಞತೆ, ಗೌರವ

Brazil Floods: ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್‌, ಸಾವಿನ ಸಂಖ್ಯೆ 90ಕ್ಕೆ ಏರಿಕೆ

Brazil Floods: ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್‌, ಸಾವಿನ ಸಂಖ್ಯೆ 90ಕ್ಕೆ ಏರಿಕೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

man hits his wife because he could not afford the treatment!

ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

SSLC Exam Result; ರೈತ ಕುಟುಂಬದ ಅಂಕಿತಾ ರಾಜ್ಯಕ್ಕೆ ಪ್ರಥಮ

SSLC Exam Result; ರೈತ ಕುಟುಂಬದ ಅಂಕಿತಾ ರಾಜ್ಯಕ್ಕೆ ಪ್ರಥಮ

ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಯುವಕನ ಹತ್ಯೆ… ಗೆಳೆಯರ ಜೊತೆ ಪಾರ್ಟಿ ಮಾಡಿದ್ದ ಯುವಕ

ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಯುವಕನ ಹತ್ಯೆ… ಗೆಳೆಯರ ಜೊತೆ ಪಾರ್ಟಿ ಮಾಡಿದ್ದ ಯುವಕ

SSLC Exam Result; Here is the district wise result list

SSLC Exam Result; ಇಲ್ಲಿದೆ ಜಿಲ್ಲಾವಾರು ಫಲಿತಾಂಶ ಪಟ್ಟಿ

5-koratagere

Koratagere: ಹಲಸಿನ ಮರದಿಂದ ಕಾಲು ಜಾರಿ ಬಿದ್ದು ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು

Gangavathi: ಬಿರುಗಾಳಿ ಮಳೆಗೆ ಬಾಳೆ ತೋಟ ಸೇರಿ ಅಪಾರ ಪ್ರಮಾಣದ ಹಾನಿ

Gangavathi: ಬಿರುಗಾಳಿ ಮಳೆಗೆ ಬಾಳೆ ತೋಟ ಸೇರಿ ಅಪಾರ ಪ್ರಮಾಣದ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.