ಅಂತ್ಯೋದಯ ಆಧಾರಿತ ಆರ್ಥಿಕತೆಗೆ ಒತ್ತು


Team Udayavani, May 15, 2020, 7:46 AM IST

ottu

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ನಿರ್ಭರ ಆರ್ಥಿಕತೆಯ ಕನಸಿಗೆ ಪೂರಕವಾಗಿ ಬುಧವಾರ ಮೊದಲ ಹಂತದಲ್ಲಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ 3 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜನ್ನು ಘೋಷಿಸಿ ದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ ನ್‌, ಗುರುವಾರ ರೈತರು, ಬಡವರು, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳ ಸಬಲೀಕರಣ ಕ್ಕಾಗಿ ಮತ್ತೂಂದು ಸುತ್ತಿನ ಪ್ಯಾಕೇಜ್‌ ಹಾಗೂ ಸೌಲಭ್ಯಗಳನ್ನು  ಘೋಷಿಸಿದ್ದಾರೆ. ಇದೆಲ್ಲರ ಮುಖ್ಯ ಉದ್ದೇಶ – ದೇಶದ ಆರ್ಥಿಕತೆ ಯನ್ನು ಚುರುಕುಗೊಳಿಸುವುದಷ್ಟೇ ಅಲ್ಲದೆ, ಇಡೀ ದೇಶದ ಆರ್ಥಿಕತೆಯನ್ನು ಸ್ವಾವಲಂಬಿಯ ನ್ನಾಗಿಸುವತ್ತ ಹೆಜ್ಜೆ ಇರಿಸಲಾಗಿದೆ.

ಗುರುವಾರ ಪ್ರಕಟಿಸಲಾದ  ಯೋಜನೆಗಳನ್ನುಗಮನಿಸಿದಾಗ, ಬಹುಮುಖ್ಯವಾಗಿ ವಲಸೆ ಕಾರ್ಮಿಕರ, ಕೂಲಿಗಾರರ ಸಮಸ್ಯೆಗಳನ್ನು ನಿವಾರಿಸಲು ಅತ್ಯಂತ ಹೆಚ್ಚಿಗೆ ಗಮನವನ್ನು ನೀಡಿರುವುದು ಗಮನಕ್ಕೆ ಬರುತ್ತದೆ. ಈ ಹಿಂದೆ ಈಗಾಗಲೇ ಘೋಷಿಸಲಾಗಿದ್ದ ಒಂದು  ದೇಶ, ಒಂದು ಪಡಿತರ ಚೀಟಿ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಈಗ ಹೆಜ್ಜೆ ಇಡಲಾಗಿದೆ. ಆ ಮೂಲಕ ಯಾವುದೇ ಕೂಲಿ ಕಾರ್ಮಿಕ ತನ್ನಲ್ಲಿನ ಪಡಿತರ ಚೀಟಿಯನ್ನು ಬಳಸಿ ಕೊಂಡು ದೇಶದ ಯಾವುದೇ ನಗರ, ಪಟ್ಟಣ, ಹಳ್ಳಿ ಯಲ್ಲಿನ ನ್ಯಾಯಬೆಲೆ ಅಂಗಡಿಯಿಂದ ತನಗೆ ಸಿಗ ಬೇಕಾದ ಧವಸ, ಧಾನ್ಯಗಳನ್ನು ಪಡೆಯಬಹುದಾಗಿದೆ. ಇದು ಅನೇಕ ಕೂಲಿಗಾರರ ಹಸಿವನ್ನು ರಾಜ್ಯಗಳ ಗಡಿಯ ಹಂಗಿಲ್ಲದೆ ನೀಗಿಸು ತ್ತದೆ.

ಕೂಲಿಗಳ ಹಸಿವನ್ನು ನೀಗಿಸಿದ ನಂತರ  ವರ ಕೈಗಳಿಗೆ ದುಡಿಮೆಯನ್ನು ಕೊಡಲು ತೀರ್ಮಾನಿಸಲಾ ಗಿದೆ ಹಾಗೂ ದುಡಿದ ದುಡಿಮೆಗೆ ಸೂಕ್ತ ಕೂಲಿ ಯನ್ನೂ ಸಿಗುವಂತೆ ಪ್ರಯತ್ನ ಮಾಡಲಾಗಿದೆ. ಆ ಕಾರಣಕ್ಕಾಗಿಯೇ, ಕೂಲಿ ಕಾರ್ಮಿಕರ ನಿಗದಿತ ಕೂಲಿಯನ್ನು ಹೆಚ್ಚಿಸುವ, ನಗರ  ಪ್ರದೇಶಗಳಿಗೆ ಕೂಲಿಗಾಗಿ ವಲಸೆ ಬರುವ ಕಾರ್ಮಿಕರಿಗೆ ಸರ್ಕಾರಿ ಸ್ವಾಮ್ಯದ ಕಟ್ಟಡಗಳನ್ನು ವಸತಿ ಸಮುತ್ಛಯವಾಗಿ ಪರಿವರ್ತಿಸಿ ಕೂಲಿಗಾರರ ಕೈಗೆಟಕುವ ಬೆಲೆಯಲ್ಲಿ ಬಾಡಿಗೆಗೆ ನೀಡುವಂಥ ನಿರ್ಧಾರಗಳನ್ನು ಕೈಗೊಳ್ಳಲಾ ಗಿದೆ. ಇನ್ನು, ಅವರ ಕೂಲಿಯನ್ನು ಹೆಚ್ಚಿಸುವುದ ಕ್ಕಾಗಿ, ಕಾರ್ಮಿಕ ನೀತಿಗಳಲ್ಲೇ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.

ಲಾಕ್‌ಡೌನ್‌ನಿಂದಾಗಿ ನಷ್ಟಕ್ಕೊಳಗಾಗಿರುವ ಬೀದಿ ಬದಿಯ ವ್ಯಾಪಾರಿಗಳ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಅವರಿಗೆ  ಸುಮಾರು 5 ಸಾವಿರ ಕೋಟಿ ರೂ.ಗಳಷ್ಟು ಸಾಲ ವಿತರಣೆಗೆ ಮುಂದಾಗಿದೆ. ಅಂದರೆ, ಪ್ರತಿ ಬೀದಿ ಬದಿಯ ವ್ಯಾಪಾರಿಗೆ ತನ್ನ ವ್ಯಾಪಾರ ಪುನರಾರಂಭಿಸಲು 10,000 ರೂ.ಗಳನ್ನು ಸಾಲದ ರೂಪದಲ್ಲಿ ನೀಡಲು ನಿರ್ಧರಿಸಲಾಗಿದೆ. ದೇಶದಲ್ಲಿ  ನೋಂದಾಯಿಸಲ್ಪ ಟ್ಟಿರುವ ಸುಮಾರು 50 ಲಕ್ಷ ಬೀದಿ ವ್ಯಾಪಾರಿಗಳಿಗೆ ಇದರ ಪ್ರಯೋಜನ ಸಿಗಲಿದೆ. ಇನ್ನು, ಕೃಷಿ ವಲಯದಲ್ಲಿ ತೊಡಗಿಸಿಕೊಂಡಿರುವ ರೈತಾಪಿ ವರ್ಗದವರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ 2 ಲಕ್ಷ  ಕೋಟಿ ರೂ. ಸಾಲ ವ್ಯವಸ್ಥೆ,

ಇದರಿಂದ ರೈತರು ಮಾತ್ರವಲ್ಲದೆ, ಮೀನು ಗಾರರು, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ವರಿಗೂ ಇದರ ಉಪಯೋಗವನ್ನು ಪಡೆಯಬಹು ದಾಗಿದೆ. ಹೊಸದಾಗಿ, ಕಿಸಾನ್‌ ಕ್ರೆಡಿಟ್‌ ಕಾರ್ಡ್‌  ಇಲ್ಲದ ರೈತರಿಗಾಗಿ ಹೊಸ ಕ್ರಿಸಾನ್‌ ಕ್ರೆಡಿಟ್‌ ಕಾರ್ಡ್‌ ಗಳನ್ನು ನೀಡಲು ನಿರ್ಧರಿಸಲಾಗಿದೆ. ಇನ್ನು, ಮುದ್ರಾ ಯೋಜನೆಯಡಿ ನೀಡಲಾ ಗುವ ಶಿಶು ಸಾಲದ ಮೇಲೆ ವಿಧಿಸಲಾಗುತ್ತಿದ್ದ ಬಡ್ಡಿ ಯಲ್ಲಿ ಶೇ. 2ರಷ್ಟನ್ನು ಕಡಿಮೆ ಮಾಡುವಂಥ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇದರಿಂದ, ಈ ವಲಯದಲ್ಲಿ ಸಾಲಗಾರರ ಮೇಲೆ ಬೀಳುತ್ತಿದ್ದ ಬಡ್ಡಿಯ ಹೊರೆಯಲ್ಲಿ 15,000 ಕೋಟಿ ರೂ. ಕಡಿಮೆ ಯಾಗಲಿದೆ. ಜೊತೆಗೆ, 3 ಕೋಟಿ ಜನರಿಗೆ  ಇದರ ಉಪಯೋಗವಾಗಲಿದೆ ಎಂದು  ಹಣಕಾಸು ಸಚಿವರು ತಿಳಿಸಿದ್ದಾರೆ.

ಇದರ ಜೊತೆಗೆ, ಉಚಿತ ಧಾನ್ಯ ವಿತರಣೆ, ರಾಜ್ಯಗಳ ವಿಪತ್ತು ನಿರ್ವಹಣಾ ನಿಧಿಗೆ ಕೇಂದ್ರ ನೀಡಿರುವ 11,000 ಕೋಟಿ ರೂ.ಗಳ ನ್ನು ನಗರದಲ್ಲಿರುವ ಬಡವರ ಸಬಲೀಕರಣಕ್ಕೆ ಬಳಸಿಕೊಳ್ಳಲು ಕೇಂದ್ರ  ಸೂಚಿಸಿದೆ. ಇನ್ನು ಕೆಳ ಮಧ್ಯಮ ಕುಟುಂಬಗಳ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಸಬ್ಸಿಡಿಯ ಸಹಾ ಯದೊಂದಿಗೆ ಸ್ವಂತ ಮನೆ ಕಲ್ಪಿಸಲು ಅವಕಾಶ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 70,000 ಕೋಟಿ ರೂ.  ನೀಡಲು ತೀರ್ಮಾನಿಸಲಾ ಗಿದೆ. ಇದಲ್ಲದೆ, ಹೊಸದಾಗಿ 7,200 ಹೊಸ ಸ್ವಸಹಾ ಯ ಗುಂಪುಗಳನ್ನು ರಚಿಸಲು ತೀರ್ಮಾನಿಸಲಾ ಗಿದೆ. ಇನ್ನು, ಕ್ಯಾಂಪಾ ಯೋಜನೆಯಡಿಯಲ್ಲಿ ಆದಿ ವಾಸಿಗಳಿಗೆ ಉದ್ಯೋಗಾವಕಾಶದಂಥ ಯೋಜನೆ ಗಳನ್ನು ಪ್ರಕಟಿಸಲಾಗಿದೆ. ಜೊತೆಗೆ ಇನ್ನೂ ಹತ್ತು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಬಡವರ, ಕೂಲಿಗಳ, ನಿರ್ಗತಿಕರ, ರೈತರ ಅಭಿವೃದಿಗೆ ಕ್ರಮ ಕೈಗೊಳ್ಳಲಾಗಿದೆ.

ಕಾರ್ಮಿಕರಿಗೆ ನರೇಗಾ ನೆರವು: ಕಾರ್ಮಿಕರಿಗೆ ನೆರವು ನೀಡಲು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಗಳನ್ನು ಹೆಚ್ಚಿಸಲಾಗುತ್ತಿದೆ. 2020 ಮೇ 13ರವರೆಗೆ 14.62 ಕೋಟಿ ಮಾನವ ದಿನಗಳಷ್ಟು ಕೆಲಸ ಸೃಷ್ಟಿಸಲಾಗಿದೆ. ಇಲ್ಲಿಯವರೆಗೆ 10,000 ಕೋಟಿ ರೂ. ಖರ್ಚಾಗಿದೆ. 1.87 ಲಕ್ಷ ಗ್ರಾಮ ಪಂಚಾಯತ್‌ಗಳಲ್ಲಿನ 2.33 ಕೋಟಿ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. 2019 ಮೇ ತಿಂಗಳಿಗೆ ಹೋಲಿಸಿದರೆ, ಈ ಬಾರಿ ಶೇ. 40ರಿಂದ 50ರಷ್ಟು ಹೆಚ್ಚುವರಿಯಾಗಿ ಸೇರಿಸಿಕೊಳ್ಳಲಾಗಿದೆ. ಸರಾಸರಿ ದಿನಗೂಲಿ 182 ರೂ.ಗಳಿಂದ 202 ರೂ.ಗಳಿಗೇರಿದೆ. ತಂತಮ್ಮ ರಾಜ್ಯಗಳಿಗೆ ಹಿಂತಿರುಗುತ್ತಿರುವ ವಲಸಿಗರಿಗೆ ನೆರವು ನೀಡಲು ರಾಜ್ಯಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.