ಸಣ್ಣ ಸಾಗುವಳಿದಾರರಿಗೆ ಪರಿಹಾರದ ಫಲ ಸಿಕ್ಕೀತೇ?

ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ 15 ಸಾವಿರ ರೂ. ಪರಿಹಾರ ಘೋಷಣೆ

Team Udayavani, May 18, 2020, 2:52 PM IST

ಸಣ್ಣ ಸಾಗುವಳಿದಾರರಿಗೆ ಪರಿಹಾರದ ಫಲ ಸಿಕ್ಕೀತೇ?

ಬೆಳಗಾವಿ: ಕೋವಿಡ್ ಲಾಕ್‌ಡೌನ್‌ ಸಮಯದಲ್ಲಿ ಅಪಾರ ನಷ್ಟ ಅನುಭವಿಸಿದ ತರಕಾರಿ ಬೆಳೆಗಾರರ ಕಷ್ಟಕ್ಕೆ ಸರಕಾರ ಧಾವಿಸಿದೆ. ಆಗಿರುವ ಬೆಳೆ ನಷ್ಟಕ್ಕೆಪರಿಹಾರದ ಪ್ಯಾಕೇಜ್‌ ಪ್ರಕಟಿಸಿದೆ. ಆದರೆ ಸರಕಾರದ ಪರಿಹಾರದ ಪ್ಯಾಕೇಜ್‌ ನಿಜವಾದ ಫಲಾನುಭವಿಗಳಿಗೆ ತಲುಪಲಿದೆಯೇ ಎಂಬ ಅನುಮಾನ ಹಣ ಖಾತೆಗೆ ಜಮಾ ಆಗುವ ಮೊದಲೇ ಆರಂಭವಾಗಿದೆ.

ಸರಕಾರದ ಘೋಷಣೆಯಂತೆ ತರಕಾರಿ ಬೆಳೆಗಾರರು ಪ್ರತಿ ಹೆಕ್ಟೇರ್‌ಗೆ 15 ಸಾವಿರ ರೂ. ಪರಿಹಾರ ಪಡೆಯಲಿದ್ದಾರೆ. ರಾಜ್ಯದಲ್ಲಿ 50 ಸಾವಿರಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದ ಕ್ಯಾಬೀಜ್‌, ಟೊಮ್ಯಾಟೊ, ಸವತಿಕಾಯಿ, ಮೆಣಸಿನಕಾಯಿ, ಹೂ ಕೋಸು ಮೊದಲಾದ ತರಕಾರಿ ಬೆಳೆಗಾರರಿಗೆ ಇದರ ಪ್ರಯೋಜನ ಸಿಗಲಿದೆ. ಆದರೆ ತರಕಾರಿ ಬೆಳೆಗಾರರಿಗೆ ಸರಕಾರ ಘೋಷಣೆ ಮಾಡಿರುವ ಪರಿಹಾರದ ಹಣ ಪಡೆಯುವಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಲಿದೆ ಎಂದು ಸಣ್ಣ ರೈತರೇ ಹೇಳುತ್ತಿರುವುದು ನಿಜವಾದ ಫಲಾನುಭವಿಗಳು ಯೋಜನೆ ಲಾಭ ಪಡೆಯಲಿದ್ದಾರೆಯೇ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇದು ಕೇವಲ ಬೆಳಗಾವಿ ಜಿಲ್ಲೆಗೆ ಅಥವಾ ತಾಲೂಕಿಗೆ ಸೀಮಿತವಾದ ಸಮಸ್ಯೆ ಅಲ್ಲ. ರಾಜ್ಯದ ಎಲ್ಲ ಕಡೆ ಇದು ಸಣ್ಣ ರೈತರನ್ನು ಕಾಡುತ್ತಿದೆ. ತರಕಾರಿ ಬೆಳೆದವರು ಈಗ ಲಾಭದ ಬದಲು ಪರಿಹಾರಕ್ಕಾಗಿ ಪರಿತಪಿಸುತ್ತಿದ್ದಾರೆ. ರಾಜ್ಯದ ಬಹುತೇಕ ಕಡೆ ಸಣ್ಣ ಹಾಗೂ ಅತೀ ಸಣ್ಣ ರೈತರು ತಮ್ಮದೇ ಆದ ಸ್ವಂತ ಜಮೀನು ಹೊಂದಿಲ್ಲ. ದೊಡ್ಡ ಹಾಗೂ ಮಧ್ಯಮ ರೈತರ ಒಂದಿಷ್ಟು ಹೊಲವನ್ನು ಲಾವಣಿ ಆಧಾರದ ಮೇಲೆ ಪಡೆದು ಸಾಗುವಳಿ ಮಾಡುತ್ತಿದ್ದಾರೆ. ಆವರ ಬಳಿ ಹೊಲದ ಯಾವುದೇ ದಾಖಲೆ ಇಲ್ಲ. ಇದೇ ಸಮಸ್ಯೆ ಈಗ ಸರಕಾರದ ಪರಿಹಾರದ ಲಾಭ ಪಡೆಯಲು ಸಮಸ್ಯೆಯಾಗಿ ಪರಿಣಮಿಸಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 33 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಣಸಿನಕಾಯಿ, ಟೊಮ್ಯಾಟೊ, ಕುಂಬಳಕಾಯಿ, ವಿವಿಧ ಸೊಪ್ಪು, ಕ್ಯಾಬೀಜ, ಹೂ ಕೋಸು, ಬೀಟ್‌ ರೂಟ್‌ ಮೊದಲಾದ ತರಕಾರಿ ಬೆಳೆಯಲಾಗಿದೆ. ಲಾಕ್‌ಡೌನ್‌ದಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ರೈತರು ತಮ್ಮ ತರಕಾರಿಗಳನ್ನು ಮಾರಾಟ ಮಾಡದೆ ಅಪಾರ ನಷ್ಟ ಅನುಭವಿಸಿದ್ದಾರೆ. ಪ್ರತಿ ದಿನ ಗೋವಾ ಹಾಗೂ ಮಹಾರಾಷ್ಟ್ರದಿಂದ ಬರುತ್ತಿದ್ದ ಖರೀದಿದಾರರು ಸಹ ಬರದೇ ಹೋದ ಕಾರಣ ಬಹುತೇಕ ಬೆಳೆ ಹೊಲದಲ್ಲಿ ಕೊಳೆತು ಹೋಗಿದೆ.

ನಾನು ಕಳೆದ ಹಲವಾರು ವರ್ಷಗಳಿಂದ ಬೇರೆಯವರ ಹೊಲ ಗುತ್ತಿಗೆ ಪಡೆದು ಸಾಗುವಳಿ ಮಾಡುತ್ತಿದ್ದೇನೆ. ನನ್ನ ಹೆಸರಲ್ಲಿ ಕೇವಲ 30 ಗುಂಟೆ ಮಾತ್ರ ಜಮೀನು ಇದೆ. ಬೇರೆಯವರ ಮೂರು ಎಕರೆ ಭೂಮಿ ಪಡೆದು ಅದರಲ್ಲಿ ಕ್ಯಾಬೀಜ ಸೇರಿದಂತೆ ವಿವಿಧ ತರಕಾರಿ ಬೆಳೆಯುತ್ತಿದ್ದೇನೆ. ಇದರಲ್ಲಿ ಲಾಭ ಆಗಲಿ ಇಲ್ಲವೇ ನಷ್ಟವೇ ಆಗಲಿ ಒಪ್ಪಂದಂತೆ ಮಾಲೀಕರಿಗೆ ನಿರ್ದಿಷ್ಟ ಹಣ ಕೊಡಲೇಬೇಕು. ಕಳೆದ ಮೂರು ವರ್ಷಗಳಿಂದ ಅಪಾರ ನಷ್ಟವಾಗಿದೆ ಎಂದು ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ನಾಮದೇವ ದುಡುಂ ನೋವಿನಿಂದ ಹೇಳಿದರು.

ಬೇರೆಯವರ ಹೊಲದಲ್ಲಿ ಉಳಿಮೆ ಮಾಡುತ್ತಿರುವ ರೈತರ ನೆರವಿಗೆ ಸರಕಾರ ಧಾವಿಸಬೇಕು. ಭೂ ಮಾಲೀಕರು ಬೇರೆಯವರಾಗಿರುವದರಿಂದ ಉತಾರ ಹಾಗೂ ಬ್ಯಾಂಕ್‌ ಖಾತೆಗಳು ಅವರ ಹೆಸರಿನಲ್ಲಿರುತ್ತವೆ. ಸರಕಾರದ ಪರಿಹಾರ ಸಹ ಅವರ ಹೆಸರಿಗೆ ಬರುತ್ತದೆ. ನಾವು ಕೇಳಿದರೆ ಭೂ ಮಾಲೀಕರಿಂದ ನೀವೇ ಪಡೆದುಕೊಳ್ಳಿ. ಅದಕ್ಕೆ ಒಪ್ಪಂದ ಮಾಡಿಕೊಳ್ಳಿ ಎನ್ನುತ್ತಾರೆ. ವಾಸ್ತವದಲ್ಲಿ ಇದು ಸಾಧ್ಯವೇ. ಭೂ ಮಾಲೀಕರು ಸಣ್ಣ ರೈತರ ಜೊತೆ ಇಂತಹ ಒಪ್ಪಂದ ಮಾಡಿಕೊಳ್ಳುವರೇ ಎಂಬುದು ಹಾನಿ ಅನುಭವಿಸಿರುವ ರೈತರ ಪ್ರಶ್ನೆ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಬರೀ ನಷ್ಟವನ್ನೇ ಅನುಭವಿಸಿದ್ದೇವೆ. ಈ ಬಾರಿ ಒಳ್ಳೆಯ ಬೆಳೆ ಬಂದಿದ್ದರೂ ಕೋವಿಡ್ ವೈರಸ್‌ ಹಾವಳಿ ಎಲ್ಲವನ್ನೂ ಹಾಳುಮಾಡಿದೆ.

ಹೊಲದಲ್ಲಿ ರಾಶಿ ರಾಶಿಯಾಗಿ ಇದ್ದ ಬೆಳೆಯನ್ನು ಯಾರೂ ಖರೀದಿ ಮಾಡಲು ಬರದೇ ಇದ್ದರಿಂದ ಎಲ್ಲವೂ ಹೊಲದಲ್ಲೇ ಕೊಳೆತಿದೆ. ಕಾರಣ ಸರಕಾರವೇ ನಿಯಮಾವಳಿಗಳನ್ನು ಬದಲಾಯಿಸಿ ಸಾಗುವಳಿ ಮಾಡುತ್ತಿರುವವರಿಗೆ ಪ್ರತಿ ಹೆಕ್ಟೇರ್‌ ಗೆ 50 ಸಾವಿರ ರೂ ಪರಿಹಾರ ನೀಡಬೇಕು ಎಂಬುದು ರೈತರ ಒತ್ತಾಯ.

ಸರಕಾರ ತರಕಾರಿ ಬೆಳೆಗಾರರಿಗೆ ಪರಿಹಾರ ಘೋಷಣೆ ಮಾಡಿದೆ. ಇದು ಸ್ವಾಗತಾರ್ಹ. ಆದರೆ ಬೇರೆಯವರ ಹೊಲ ಪಡೆದು ಉಳಿಮೆ ಮಾಡುತ್ತಿರುವ ರೈತರಲ್ಲಿ ಯಾವುದೇ ದಾಖಲೆ ಇರುವುದಿಲ್ಲ. ಉತಾರ ಭೂ ಮಾಲೀಕರ ಹೆಸರಲ್ಲಿ ಇರುತ್ತದೆ. ಹೀಗಾಗಿ ಸರಕಾರದ ಪರಿಹಾರ ಸಹ ಉಳಿಮೆ ಮಾಡಿದ ರೈತರ ಬದಲು ಭೂಮಿ ಮಾಲೀಕರಿಗೆ ಹೋಗುತ್ತದೆ. ಕಾರಣ ಈ ನಿಯಮವನ್ನು ಬದಲಿಸಿ ನಿಜವಾದ ಫಲಾನುಭವಿಗಳಿಗೆ ಪರಿಹಾರ ಕೊಡಬೇಕು. –ಅಪ್ಪಾಸಾಹೇಬ ದೇಸಾಯಿ, ರೈತ ಮುಖಂಡ

ಸರಕಾರದ ಮಾರ್ಗಸೂಚಿಯಂತೆ ಭೂ ಮಾಲೀಕರಿಗೆ ಪರಿಹಾರ ಕೊಡಲಾಗುತ್ತದೆ. ಸಾಗುವಳಿದಾರರಿಗೆ ಈ ಪರಿಹಾರ ಕೊಡಲು ಅವಕಾಶ ಇಲ್ಲ. ಒಂದು ವೇಳೆ ರೈತರು ಬೇರೆಯವರ ಹೊಲ ಪಡೆದು ಸಾಗುವಳಿ ಮಾಡುತ್ತಿದ್ದರೆ ಅವರಿಂದ ಪರಿಹಾರ ಪಡೆದುಕೊಳ್ಳಬೇಕು.  –ರವೀಂದ್ರ ಹಕಾಟಿ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ

-ಕೇಶವ ಆದಿ

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.