ಯುರೋಪ್ಗೆ 2ನೇ ಹಂತದ ಸೋಂಕು ಭೀತಿ
Team Udayavani, May 23, 2020, 2:15 PM IST
ಐರೋಪ್ಯ ರಾಷ್ಟ್ರಗಳು ಸೋಂಕು ಹರಡುವಿಕೆ ಕಡಿಮೆಯಾದ ಬಳಿಕ ಲಾಕ್ಡೌನ್ ಸಡಿಲಗೊಳಿಸಿವೆ. ಆದರೆ ಮುಂಬರುವ ದಿನಗಳಲ್ಲಿ 2ನೇ ಹಂತದ ಸೋಂಕಿನ ಅಲೆ ಎದುರಾಗಲಿದ್ದು, ಅದನ್ನು ತಡೆಗಟ್ಟುವ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಐರೋಪ್ಯ ಒಕ್ಕೂಟದ ಸೋಂಕು ಬಿಕ್ಕಟ್ಟು ನಿರ್ವಹಣಾ ಮುಖ್ಯಸ್ಥರು ಎಚ್ಚರಿಸಿದ್ದಾರೆ.
ಯುರೋಪಿನಾದ್ಯಂತ ಮತ್ತೆ ಸೋಂಕು ಅಪ್ಪಳಿಸುವ ದಿನಗಳು ಬಹಳ ದೂರ ಏನಿಲ್ಲ. ಆದರೆ ಯಾವಾಗ ಮತ್ತು ಯಾವ ಪ್ರಮಾಣದಲ್ಲಿ ಪೆಟ್ಟು ನೀಡಲಿದೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ ಎಂದು ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಶನ್ ಆ್ಯಂಡ್ ಕಂಟ್ರೋಲ್ ಸಂಸ್ಥೆಯ ನಿರ್ದೇಶಕಿ ಡಾ| ಆಂಡ್ರಿಯಾ ಅಮ್ಮೊನ್ ಹೇಳಿದ್ದಾರೆ.