ವನಿತಾ ಟೆನಿಸಿಗರಲ್ಲಿ ಒಸಾಕಾಗೆ ಅತ್ಯಧಿಕ ಮೊತ್ತದ ಸಂಭಾವನೆ
Team Udayavani, May 24, 2020, 6:07 AM IST
ಟೋಕಿಯೊ: ಜಪಾನಿನ ನವೋಮಿ ಒಸಾಕಾ ಕಳೆದೊಂದು ವರ್ಷದಲ್ಲಿ ಅತ್ಯಧಿಕ ಸಂಭಾವನೆ ಪಡೆದ ಟೆನಿಸ್ ಆಟಗಾರ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. “ಫೋರ್ಬ್ಸ್ ಮ್ಯಾಗಜಿನ್’ ನಡೆಸಿದ ಸಮೀಕ್ಷೆಯಲ್ಲಿ ಒಸಾಕಾ ಸಂಪಾದಿಸಿದ ಒಟ್ಟು ಬಹುಮಾನದ ಮೊತ್ತ 37.4 ಮಿಲಿಯನ್ ಡಾಲರ್. ಇದು ಸೆರೆನಾ ವಿಲಿಯಮ್ಸ್ಗೆ ಹೋಲಿಸಿದರೆ 1.4 ಮಿ. ಡಾಲರ್ನಷ್ಟು ಹೆಚ್ಚು.
ನವೋಮಿ ಒಸಾಕಾ ಅವರ ಈ ವಾರ್ಷಿಕ ಗಳಿಕೆ ವನಿತಾ ಟೆನಿಸ್ನಲ್ಲಿ ನೂತನ ದಾಖಲೆಯಾಗಿದೆ. 2015ರಲ್ಲಿ ಮರಿಯಾ ಶರಪೋವಾ 29.7 ಮಿ. ಡಾಲರ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.
ಫೋರ್ಬ್ಸ್ ಮ್ಯಾಗಜಿನ್ 1990ರಲ್ಲಿ ವನಿತಾ ಕ್ರೀಡಾಪಟುಗಳ ವಾರ್ಷಿಕ ಆದಾಯವನ್ನು ಗಣನೆಗೆ ತೆಗೆದುಕೊಳ್ಳಲಾರಂಭಿಸಿತ್ತು. ನೂತನ ಅಧಿಕೃತ ಯಾದಿ ಮುಂದಿನ ವಾರ ಬಿಡುಗಡೆಯಾಗಲಿದೆ.
ಎರಡು ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳ ಒಡತಿಯಾಗಿರುವ ಒಸಾಕಾ ವಿಶ್ವ ಕ್ರೀಡಾಪಟುಗಳ 2020ರ ಫೋಬ್ಸ್ì ಆದಾಯ ಪಟ್ಟಿಯಲ್ಲಿ 29ನೇ ಸ್ಥಾನದಲ್ಲಿದ್ದಾರೆ. ಸೆರೆನಾಗೆ 33ನೇ ಸ್ಥಾನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?