ನಿಮ್ಮೊಂದಿಗೆ ಎಂದಾದರೂ ಮಾತನಾಡಿದ್ದೀರಾ?

Team Udayavani, Jun 8, 2020, 6:31 AM IST

Self-Realization

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಇಲ್ಲಪ್ಪ, ನನ್ನೊಂದಿಗೆ ನಾನು ಮಾತಾಡಿಕೊಳ್ಳಲು ಶುರು ಮಾಡಿದರೆ ನೋಡಿದವರು ಹುಚ್ಚು ಎಂದುಕೊಂಡಾರು ಎಂಬುದು ಬಹುತೇಕರ ಉತ್ತರ.

ಅವರು ಹೀಗೆ ಹೇಳಲೂ ಒಂದು ಕಾರಣವಿದೆ. ಮಾನವ ಒಬ್ಬ ಸಂಘಜೀವಿ. ಹೀಗಾಗಿಯೇ ಪ್ರತಿನಿತ್ಯ ನಮ್ಮ ನೆರೆಹೊರೆಯವರೊಂದಿಗೆ ಒಂದಿಲ್ಲೊಂದು ಕಾರಣಕ್ಕಾಗಿ ಮಾತನಾಡುತ್ತಲೇ ಬಂದಿದ್ದೇವೆ.

ನಮ್ಮ ಅಗತ್ಯತೆಗಳ ಪೂರೈಸಿಕೊಳ್ಳಲು ಇರುವ ಮಾರ್ಗಗಳಲ್ಲಿ ಸಂವಹನವೂ ಒಂದಾಗಿರುವ ಕಾರಣ ನಮಗದು ಅನಿವಾರ್ಯವೂ ಹೌದು.

ಆದರೆ ಬೇರೆಯವರೊಂದಿಗೆ ಮಾತನಾಡುವುದನ್ನು ಬಿಟ್ಟು ನಮ್ಮೊಡನೆ ನಾವೇ ಮಾತನಾಡಿಕೊಳ್ಳುವ ಸಂವಹನವೊಂದಿದೆ. ಅದೇ ಅಂತರ್ ವ್ಯಕ್ತೀಯ ಸಂವಹನ. ನಮ್ಮೊಡನೆ ನಾವೇಕೆ ಮಾತಾಡಬೇಕು. ಇದರಿಂದ ನಮಗೇನು ಲಾಭ ಎಂಬ ಪ್ರಶ್ನೆ ಈಗ ನಿಮ್ಮನ್ನು ಕಾಡದೆ ಇರದು.

ಯಾವುದೇ ವಿಷಯವಾಗಲಿ ನಮಗೆ ಸ್ಪಷ್ಟತೆ ಇದ್ದಾಗ ಮಾತ್ರ ಮತ್ತೂಬ್ಬರಿಗೆ ಅದನ್ನು ವಾರ್ಗಯಿಸಲು ಅಥವಾ ಅದಕ್ಕೆ ಪೂರಕ ಮಾಹಿತಿಯನ್ನು ನಾವೇ ಪಡೆಯಲು ಸಾಧ್ಯವಾಗುತ್ತದೆ. ನಮ್ಮಲ್ಲೇ ಗೊಂದಲಗಳು ಜಾಸ್ತಿಯಾದಾಗ, ಹಿಂಜರಿಕೆ ಉಂಟಾದಾಗ ನಮ್ಮೊಡನೆ ನಾವೇ ನಡೆಸುವ ಸಂವಹನ ಬಹಳಷ್ಟು ಪ್ರಯೋಜನಕಾರಿ.

ನಾನು ಇತರರಿಗಿಂತ ಭಿನ್ನವಾ?, ನನ್ನನ್ನೇಕೆ ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ?, ಯೋಚಿಸಿದ್ದನ್ನು ಹೇಳಿಕೊಳ್ಳಲು ನನ್ನಿಂದೇಕೆ ಆಗುತ್ತಿಲ್ಲ? ಎಂಬಿತ್ಯಾದಿ ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲ ಯುವಜನರನ್ನೂ ಕಾಡುತ್ತವೆ. ಎಲ್ಲರೂ ನಮ್ಮನ್ನು ಆತ್ಮೀಯತೆಯಿಂದ ಕಾಣಬೇಕು, ಪ್ರೀತಿಸಬೇಕೆ ಎಂದು ಎಲ್ಲರೂ ಭಾವಿಸುತ್ತಿದ್ದಾರೆಯೇ ಹೊರತು ಆ ಕೆಲಸವನ್ನು ನಾವೆಷ್ಟು ಮಾಡುತ್ತಿದ್ದೇವೆ ಎಂದು ಒಮ್ಮೆಯೂ ತಮ್ಮನ್ನು ತಾವು ಪ್ರಶ್ನಿಸಿಕೊಂಡಿಲ್ಲ. ಒಂದೊಮ್ಮೆ ಆ ಕೆಲಸ ಸರಿಯಾಗಿ ನಡೆಯುತ್ತಿದ್ದರೆ ಅದೆಷ್ಟೋ ಸಂಬಂಧಗಳು ಇಂದು ಮುರಿದುಬೀಳುವ ಹಂತಕ್ಕೆ ತಲುಪುತ್ತಿರಲಿಲ್ಲವೇನೋ.

ನಮ್ಮೊಡನೆ ನಾವೇ ನಡೆಸುವ ಸಂವಹನಕ್ಕೆ ಬಹಳ ಶಕ್ತಿಯಿದೆ. ಬೇರೆಯವರನ್ನು ಪ್ರಶ್ನಿಸುವುದು ಬಹಳ ಸುಲಭ. ಆದರೆ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವುದಿದೆಯಲ್ಲ ಅದು ಎಲ್ಲರಿಗೂ ಬಹಳ ಕಷ್ಟ. ದಿನದ ಆರಂಭ ಅಥವಾ ಅಂತ್ಯದಲ್ಲಿ ನಿಮ್ಮೊಡನೆ ನೀವೇ ಮಾತಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಈ ದಿನ ನಾನೇನು ಮಾಡಬಹುದು ಅಥವಾ ಈ ದಿನ ನಾನು ಏನೇನು ಮಾಡಿದೆ.

ಅದರಲ್ಲಿ ಸರಿ ತಪ್ಪುಗಳೆಷ್ಟಿದ್ದವು ಎಂಬುದನ್ನು ಪ್ರಶ್ನಿಸಿಕೊಳ್ಳಿ. ಇದರಿಂದ ನಿಮ್ಮ ತಪ್ಪಿನ ಅರಿವಾಗುವುದರ ಜತೆಗೆ ಅದನ್ನು ತಿದ್ದಿಕೊಳ್ಳಲೂ ಅವಕಾಶ ದೊರೆಯುತ್ತದೆ. ನಿಮ್ಮ ವ್ಯಕ್ತಿತ್ವವೂ ಉತ್ತಮವಾಗಲು ಸಾಧ್ಯವಾಗುತ್ತದೆ. ನೆನಪಿರಲಿ ನಿಮ್ಮ ಉತ್ತಮ ಸ್ನೇಹಿತ ಯಾವತ್ತಿದ್ದರೂ ನೀವೇ. ಹಾಗಾಗಿಯೇ ಆ ಸ್ನೇಹಿತನ ಬಳಿ ಎಲ್ಲರಿಗಿಂತ ತುಸು ಜಾಸ್ತಿಯೇ ಮಾತನಾಡಿ.

– ಪ್ರಸನ್ನ ಹೆಗಡೆ

ಟಾಪ್ ನ್ಯೂಸ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.