ಸೋಂಕಿತರಿಂದಲೇ ಹಬ್ಬುತ್ತಿರುವ ಕೋವಿಡ್‌ 19


Team Udayavani, Jun 10, 2020, 5:58 AM IST

sonkita-habbu

ಬೆಂಗಳೂರು: ನಗರದಲ್ಲಿ ಮಂಗಳವಾರ ಒಟ್ಟು 29 ಜನರಿಗೆ ಕೋವಿಡ್‌ 19 ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 522ಕ್ಕೆ ಏರಿಕೆಯಾದಂತಾಗಿದೆ. ಸೋಂಕಿನಿಂದ 65 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ  ಮೃತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಕಳೆದ 2 ದಿನಗಳಿಂದ ನಗರದಲ್ಲಿ ಈಗಾಗಲೇ ಸೋಂಕು ದೃಢಪಟ್ಟವರ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದವರಲ್ಲೇ ಸೋಂಕು ದೃಢಪಡು  ತ್ತಿದೆ. ಮಂಗಳವಾರವೂ ಸೋಂಕು ದೃಢಪಟ್ಟವರಲ್ಲಿ ಶೇ.90 ಜನ ಸಂಪರ್ಕಿತರೇ ಆಗಿದ್ದಾರೆ.

ನಿಮ್ಹಾನ್ಸ್‌ನಲ್ಲಿ ಆರೋಗ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ 34 ವರ್ಷದ ಮಹಿಳೆಯೊಬ್ಬರಲ್ಲಿ (ರೋಗಿ ಸಂಖ್ಯೆ 5801) ಕೋವಿಡ್‌ 19 ದೃಢಪಟ್ಟಿರುವುದು ಆತಂಕ ಮೂಡಿ ಸಿದೆ.  ಆನಂದರಾವ್‌ ಪೊಲೀಸ್‌ ಕ್ವಾಟ್ರಸ್‌ ನಲ್ಲಿ ನೆಲೆಸಿರುವ 24 ವರ್ಷದ ಪೊಲೀಸ್‌ ಸಿಬ್ಬಂದಿಗೂ(ರೋಗಿ ಸಂಖ್ಯೆ – 5808) ಸೋಂಕು ಕಂಡುಬಂದಿದ್ದು, ಸಂಪರ್ಕಿತರ ಕ್ವಾರಂಟೈನ್‌ಗೆ ಸಿದ್ಧತೆ ನಡೆಯುತ್ತಿದೆ. ವಿಶ್ವೇಶ್ವರಪುರದ ಪಾರ್ವತಿಪುರದಲ್ಲಿ  65 ವರ್ಷದ ಮಹಿಳೆ ರೋಗಿ ಸಂಖ್ಯೆ 4220ರ ಸಂಪರ್ಕದಲ್ಲಿದ್ದ 6 ಜನರಲ್ಲಿ ಸೋಂಕು ದೃಢಪಟ್ಟಿದೆ.

65 ವರ್ಷದ ಮಹಿಳೆಗೆ ಉಸಿರಾಟದ ಸಮಸ್ಯೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾಗ ಸೋಂಕು ದೃಢಪಟ್ಟಿತ್ತು. ಇವರ  ಸಂಪರ್ಕದಲ್ಲಿದ್ದ 14 ಜನರನ್ನು ಕ್ವಾರಂ ಟೈನ್‌ ಮಾಡಲಾಗಿತ್ತು. ಈ 14 ಜನರಲ್ಲಿ ಸೋಮ ವಾರ 7 ಜನರಿಗೆ ಸೋಂಕು ದೃಢ ಪಟ್ಟಿತ್ತು. ಮಂಗಳವಾರ ಮತ್ತೆ 6 ಜನರಿಗೆ ಇವರ ಸಂಪರ್ಕದಿಂದಲೇ ಸೋಂಕು ದೃಢಪಟ್ಟಿದೆ. ಇವರ  ಸಂಪರ್ಕದಲ್ಲಿದ್ದ 30 ವರ್ಷದ ಯುವಕ, 8-14 ವರ್ಷದ ಬಾಲಕರಲ್ಲಿ ಸೋಂಕು ದೃಢಪಟ್ಟಿದೆ (ರೋಗಿ ಸಂಖ್ಯೆ 5792, 5793-5794). ಇವರಿಂದಲೇ 16 ವರ್ಷದ ಹುಡುಗಿ, 38 ವರ್ಷದ ಮಹಿಳೆ, 42 ವರ್ಷದ ಪುರುಷರೊಬ್ಬರಿಗೂ ಸೋಂಕು  ತಗುಲಿದೆ.

ಪಾದರಾಯನಪುರದಲ್ಲಿ ನಡೆಸಲಾ ದ ರ್‍ಯಾಂಡಮ್‌ ಸೋಂಕು ಪತ್ತೆ ಪರೀಕ್ಷೆ  ಯಲ್ಲಿ ಸೋಂಕು ದೃಢಪಟ್ಟವರ ಸಂಪರ್ಕ  ದಲ್ಲಿದ್ದವರಿಗೂ ಸೋಂಕು ದೃಢಪಟ್ಟಿದೆ. ರೋಗಿ ಸಂಖ್ಯೆ 2090ರ ಸಂಪರ್ಕದಲ್ಲಿದ್ದ 24 ವರ್ಷದ ಯುವತಿ (ರೋಗಿ ಸಂಖ್ಯೆ -5802), 2091ರ ಸಂಪರ್ಕದಲ್ಲಿದ್ದ 4 ವರ್ಷದ ಮಗುವಿಗೆ (ರೋಗಿ ಸಂಖ್ಯೆ 5803), 2092ರ ಸಂಪರ್ಕ  ದಲ್ಲಿದ್ದ 32 ವರ್ಷದ ಪುರುಷನಿಗೆ (ರೋಗಿ ಸಂಖ್ಯೆ 5804) ಸೋಂಕು ದೃಢಪಟ್ಟಿದೆ.

ಇದೇ ರೀತಿ ಸೋಮವಾರ  ಸೋಂಕು ದೃಢಪಟ್ಟಿದ್ದ ಸೋಮೇಶ್ವರ ನಗರದ ರೋಗಿ ಸಂಖ್ಯೆ- 2764ಯ ಸಂಪರ್ಕದಲ್ಲಿದ್ದ 39 ವರ್ಷದ ವ್ಯಕ್ತಿ (ರೋಗಿ ಸಂಖ್ಯೆ -5791), 12 ವರ್ಷದ ಬಾಲಕ (ರೋಗಿಸಂಖ್ಯೆ 5795)  ನಿಗೂ ಸೋಂಕು ದೃಢಪಟ್ಟಿದೆ. ಉಳಿದಂತೆ ರೋಗಿ  ಸಂಖ್ಯೆ 4842ರ ಸಂಪರ್ಕದಲ್ಲಿದ್ದ 24 ವರ್ಷ, 26 ವರ್ಷದ ಇಬ್ಬರು ಯುವಕರಲ್ಲಿ (ರೋಗಿ ಸಂಖ್ಯೆ -5785 ಹಾಗೂ 5786), ಮಾರುತಿ ನಗರದಲ್ಲಿ ಕೋವಿಡ್‌ 19 ದೃಢಪಟ್ಟ (ರೋಗಿ ಸಂಖ್ಯೆ -3150)ರ ಸಂಪರ್ಕದಲ್ಲಿದ್ದ 50 ವರ್ಷದ  ವ್ಯಕ್ತಿಗೆ  (ರೋಗಿ ಸಂಖ್ಯೆ -5796)ಗೂ ಸೋಂಕು ದೃಢಪಟ್ಟಿದೆ.

ಹೊರ ರಾಜ್ಯ- ದೇಶದಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ತಮಿಳುನಾಡಿನಿಂದ ಹಿಂದಿರುಗಿದ 56 ವರ್ಷದ ವ್ಯಕ್ತಿಯೊಬ್ಬರಲ್ಲಿ, ಕುವೈತ್‌ನಿಂದ ಹಿಂದಿರುಗಿದ 29 ವರ್ಷದ ಯುವತಿ, 47  ವರ್ಷ, 52 ವರ್ಷದ ಮಹಿಳೆ ಇಬ್ಬರಲ್ಲಿ (ರೋಗಿ ಸಂಖ್ಯೆ -5787,5788 ಹಾಗೂ 5789), ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಕಾವಲಭೈರಸಂದ್ರದ 76 ವರ್ಷದ ವೃದೆಟಛಿ (ರೋಗಿ ಸಂಖ್ಯೆ -5790),  ರೋಗಿ ಸಂಖ್ಯೆ 5759 ಸಂಪರ್ಕ  ಪತ್ತೆಯಾಗಿಲ್ಲ. 2519ರ ಸಂಪರ್ಕದಲ್ಲಿದ್ದ 50 ವರ್ಷದ ಮಹಿಳೆಯೊಬ್ಬರಲ್ಲಿ (ರೋಗಿ ಸಂಖ್ಯೆ – 5805)  ಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಸೋಂಕು ಲಕ್ಷಣ ಇದ್ದ 32 ವರ್ಷದ ಯುವಕನಿಗೆ (ರೋಗಿ ಸಂಖ್ಯೆ 5806),  ಅಂಜನಪ್ಪ  ಗಾರ್ಡನ್‌ನಲ್ಲಿ ಸೋಂಕು ದೃಢಪಟ್ಟ ರೋಗಿ ಸಂಖ್ಯೆ -5327ರ ಸಂಪರ್ಕದಲ್ಲಿದ್ದ 60 ವರ್ಷದ ಪುರುಷರೊಬ್ಬರಲ್ಲಿ (ರೋಗಿ ಸಂಖ್ಯೆ 5807)2519ರ ಸಂಪರ್ಕದಲ್ಲಿದ್ದ 54 ವರ್ಷದ ಮಹಿಳೆಯೊಬ್ಬರಲ್ಲಿ (ರೋಗಿ ಸಂಖ್ಯೆ 5809) ರಲ್ಲಿ ಸೋಂಕು  ಖಚಿತವಾಗಿದೆ. ಇನ್ನು ಬೆಂಗಳೂರು ಪೂರ್ವ ವಲಯದ ವಿಲಿಯಮ್ಸ್‌ ಟೌನ್‌ನಲ್ಲಿ ಸೋಂಕು ದೃಢಪಟ್ಟ ರೋಗಿ ಸಂಖ್ಯೆ -5329ರ ಪ್ರಾಥಮಿಕ ಸಂಪರ್ಕ  ದಲ್ಲಿದ್ದ ಇಬ್ಬರಲ್ಲಿ, ದ್ವಿತೀಯ ಸಂಪರ್ಕದಲ್ಲಿದ್ದ ಒಬ್ಬರಲ್ಲಿ ಸೋಂಕು (ರೋಗಿ ಸಂಖ್ಯೆ 5810,5811, 5813) ಕಾಣಿಸಿಕೊಂಡಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.